Gouthami Jadav: ಮೋಕ್ಷಿತ ಕಿಡ್ನಾಪ್ ಕೇಸ್ ವಿಚಾರ – ಬಿಗ್ ಬಾಸ್ ನಿಂದ ಹೊರಬಂದ ಗೌತಮಿ ಹೇಳಿದ್ದೇನು ?

Gouthami Jadav: ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಹಂತ ತಲುಪಿದೆ. ಕಳೆದ ವಾರ ಗೌತಮಿ ಹಾಗೂ ಧನರಾಜ್ ಎಲಿಮಿನೇಟ್ ಆಗಿ ಮನೆಯಿಂದ ಔಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಮಾಧ್ಯಮಗಳು ಸಂದರ್ಶನ ಮಾಡುತ್ತಿವೆ. ಈ ವೇಳೆ ಗೌತಮಿ(Gouthami Jadav)ಅವರಿಗೆ ಅವರ ಸಹ ಸ್ಪರ್ಧಿಯಾಗಿದ್ದ ಮೋಕ್ಷಿತ ಪೈ ಅವರ ಕುರಿತು ಕೆಲವೊಂದು ವಿಚಾರಗಳನ್ನು ಕೇಳಲಾಯಿತು. ಇದೇ ಸಂದರ್ಭದಲ್ಲಿ ಮೋಕ್ಷಿತ ವಿರುದ್ಧ ಕೇಳಿ ಬಂದಿರುವ ಕಿಡ್ನಾಪ್ ಆರೋಪದ ಬಗ್ಗೆ ಗೌತಮಿ ಬಳಿ ಪ್ರಶ್ನಿಸಲಾಯಿತು. ಇದಕ್ಕೆ ಗೌತಮಿ ಏನು ಹೇಳಿದರು ಗೊತ್ತೇ?

ಗೌತಮಿ ಮತ್ತು ಮೋಕ್ಷಿತ ಅವರು ಕನ್ನಡ ಕಿರುತೆರೆಯಲ್ಲಿ ತಮ್ಮದೇ ಚಾಪನ್ನು ಮೂಡಿಸಿದವರು. ತಮ್ಮ ನಟನೆಯ ಮೂಲಕ ಎಲ್ಲ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು. ಹೀಗಾಗಿ ಬಿಗ್ ಬಾಸ್​ಗೆ ಬರುವುದಕ್ಕೂ ಮುನ್ನ ಗೌತಮಿ ಜಾದವ್ ಹಾಗೂ ಮೋಕ್ಷಿತಾ ಪೈ ಅವರು ಪರಿಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮದವರು ಒಬ್ಬರು ಗೌತಮಿ ಬಳಿ ಮೋಕ್ಷಿತ ಅವರ ಕಿಡ್ನಾಪ್ ಕೇಸ್ ಬಗ್ಗೆ ಪ್ರಶ್ನಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಗೌತಮಿ ಅವರು ‘ನನಗೆ ಆ ಕೇಸ್ ಬಗ್ಗೆ ಗೊತ್ತಿಲ್ಲ. ಆ ಕುರಿತು ಕೇಳಿದಾಗ ಆಶ್ಚರ್ಯ ಆಯಿತು. ಅವರ ಹೆಸರು ಕೂಡ ಬೇರೆ ಇತ್ತು ಎಂಬುದು ತಿಳಿದಾಗಲೂ ಆಶ್ಚರ್ಯ ಆಯಿತು. ಈಗ ಅವರು ಹೊರಗೆ ಬಂದ ನಂತರ ಎಲ್ಲವೂ ಗೊತ್ತಾಗುತ್ತದೆ’ ಎಂದು ಗೌತಮಿ ಜಾವದ್ ಅವರು ಹೇಳಿದ್ದಾರೆ.

Comments are closed.