Bigg Biss: ಡಬಲ್ ಎಲಿಮಿನೇಷನ್- ಗೌತಮಿ ಬಳಿಕ ಇಂದು ಮನೆಯಿಂದ ಹೊರಬಂದಿದ್ದು ಇವರೇ?

Bigg Boss: ಬಿಗ್‌ಬಾಸ್ ಕನ್ನಡ ಸೀಸನ್ 11 ಫಿನಾಲೆಗೆ ಒಂದು ವಾರ ಮಾತ್ರ ಬಾಕಿಯಿದೆ. ಸದ್ಯ ಮನೆಯಲ್ಲಿ 6 ಜನ ಉಳಿದುಕೊಂಡಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ನಡೆದಿದೆ. ಶನಿವಾರದ ಎಪಿಸೋಡ್‌ನಲ್ಲಿ ಗೌತಮಿ ಜಾಧವ್ ಹೊರಬಂದಿದ್ದಾರೆ. ಭಾನುವಾರ ಎಪಿಸೋಡ್ ಚಿತ್ರೀಕರಣ ಕೂಡ ನಡೆದಿದೆ. ಹಾಗಿದ್ರೆ ಈ ಎಪಿಸೋಡ್ ನಲ್ಲಿ ಯಾರು ಹೊರ ಬಂದಿದ್ದಾರೆ ಎಂಬುದು ವೀಕ್ಷಕರ ಕುತೂಹಲ.

 

 ಇಂದು ಧನರಾಜ್ ಆಚಾರ್(Dhanaraj Achar )ಅವರು ಮನೆಯಿಂದ ಹೊರ ಬರುತ್ತಾರೆ ಎನ್ನಲಾಗಿದೆ. ಬಹಳ ಹಿಂದೆಯೇ ಧನರಾಜ್ ಆಚಾರ್ ಬಿಗ್‌ಬಾಸ್ ಮನೆಯಿಂದ ಹೊರಬರುತ್ತಾರೆ ಕೆಲವರು ಅಂದುಕೊಂಡಿದ್ದರು. ಆದರೆ ಅಚ್ಚರಿ ಎನ್ನುವಂತೆ 100 ದಿನ ಪೂರೈಸಿದ್ದಾರೆ. ಹನುಮಂತ ಹಾಗೂ ಧನರಾಜ್ ಸ್ನೇಹ ಚೆನ್ನಾಗಿತ್ತು. ಇಬ್ಬರ ಕಾಂಬಿನೇಷನ್ ವೀಕ್ಷಕರಿಗೆ ಮನರಂಜನೆ ಉಣಬಡಿಸಿತ್ತು. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ತಮ್ಮ ಕಾಮಿಡಿ ವೀಡಿಯೋಗಳಿಂದ ಗಮನ ಸೆಳೆದವರು ಧನರಾಜ್. ಇದೇ ಜನಪ್ರಿಯತೆಯಿಂದ ದೊಡ್ಮನೆ ಆಟಕ್ಕೆ ಆಯ್ಕೆ ಆಗಿದ್ದರು.

Comments are closed.