Fraud Case: ಸಿಮ್‌ ಜೊತೆ ಮೊಬೈಲ್‌ ಫ್ರೀ; ಮೊಬೈಲ್‌ಗೆ ಸಿಮ್‌ ಹಾಕುತ್ತಿದ್ದಂತೆ ಖಾತೆಯಲ್ಲಿದ್ದ 2.80 ಕೋಟಿ ರೂ ಮಾಯ

Crime News: ಹೊಸ ಮೊಬೈಲ್‌ ಕಳುಹಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಘಟನೆಯೊಂದು ನಡೆದಿದೆ. ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಹೊಸ ಮೊಬೈಲ್‌ ಕಳುಹಿಸಿ, ಅವರ ಖಾತೆಯಲ್ಲಿದ್ದ 2.80 ಕೋಟಿ ರೂಪಾಯಿಯನ್ನು ಸೈಬರ್‌ ಖದೀಮರು ವಂಚನೆ ಮಾಡಿದ್ದಾರೆ.

ಸಿಮ್‌ ಖರೀದಿ ಸಂದರ್ಭದಲ್ಲಿ ಟೆಕ್ಕಿಗೆ ಗಿಫ್ಟ್‌ ಎಂದು ಮೊಬೈಲ್‌ವೊಂದನ್ನು ಕಳುಹಿಸಲಾಗಿತ್ತು. ಇದನ್ನು ನಂಬಿದ ಟೆಕ್ಕಿ ಹೊಸ ಮೊಬೈಲ್‌ಗೆ ತನ್ನ ಸಿಮ್‌ ಕಾರ್ಡನ್ನು ಹಾಕಿದ್ದಾರೆ. ಆ ಮೊಬೈಲ್‌ನಲ್ಲಿ ಕೆಲವು ಅಪ್ಲಿಕೇಶನ್‌ ಇನ್ಸ್ಟಾಲ್‌ ಮಾಡಿದ್ದ ಸೈಬರ್‌ ಖದೀಮರು ಮೊಬೈಲ್‌ಗೆ ಬರುವ ಒಟಿಪಿಯನ್ನು ಅವರಿಗೂ ಸಿಗುವ ರೀತಿಯಲ್ಲಿ ಸೆಟ್‌ ಮಾಡಿದ್ದರು. ಕೂಡಲೇ ಟೆಕ್ಕಿ ಖಾತೆಯಲ್ಲಿದ್ದ ಎಫ್‌ ಡಿ ಹಣ 2.80 ಕೋಟಿ ರೂ.ಗಳನ್ನು ಖದೀಮರು ದೋಚಿ ಬಿಟ್ಟಿದ್ದಾರೆ.

ಬೆಂಗಳೂರಿನ ಟೆಕ್ಕಿಯೊಬ್ಬರ ವಿಳಾಸಕ್ಕೆ ನೀವು ಹೊಸ ಸಿಮ್‌ ಖರೀದಿ ಮಾಡಿದ್ದೀರಿ, ಹೀಗಾಗಿ ನಿಮಗೊಂದು ಗಿಫ್ಟ್‌ ಎಂದು ಸೈಬರ್‌ ವಂಚಕರು ಮೊಬೈಲನ್ನು ಕಳುಹಿಸಿದ್ದರು. ಇದನ್ನು ನಂಬಿದ ಟೆಕ್ಕಿ ಸಿಮ್‌ನ್ನು ಮೊಬೈಲ್‌ಗೆ ಹಾಕಿದ್ದಾರೆ. ಹಾಕಿದ ಕೆಲವೇ ಗಂಟೆಯಲ್ಲಿ ಟೆಕ್ಕಿ ಖಾತೆಯಲ್ಲಿದ್ದ ಹಣವೆಲ್ಲ ಖಾಲಿ ಮಾಡಿದ್ದಾರೆ ಖದೀಮರು.

ಟೆಕ್ಕಿ ಬ್ಯಾಂಕ್‌ ವಿವರ ತಿಳಿದದ್ದು ಹೇಗೆ?
ಮೊಬೈಲ್‌ನಲ್ಲಿ ವಂಚಕರು ಕೆಲವು ಆಪ್‌ನಗಳನ್ನು ಮೊದಲೇ ಇನ್‌ಸ್ಟಾಲ್‌ ಮಾಡಿದ್ದರಿಂದ ಸಿಮ್‌ ಹಾಕಿದ ಕೂಡಲೇ ಹಲವು ಸಂದೇಶ ಬಂದಿದ್ದು, ಇವೆಲ್ಲವೂ ವಂಚಕರು ತಮಗೂ ಬರುವಂತೆ ಸೆಟ್‌ ಮಾಡಿದ್ದರು. ನಂತರ ವಂಚಕರು ಟೆಕ್ಕಿಯ ಬ್ಯಾಂಕ್‌ ಅಕೌಂಟ್‌ ಸೇರಿ ಎಲ್ಲ ಪರಿಶೀಲನೆ ಮಾಡಿದ್ದು ಎಫ್‌.ಡಿಯಲ್ಲಿ ಇಟ್ಟಿದ್ದ 2.80 ಕೋಟಿ ರೂನ್ನು ಎಗರಿಸಿದ್ದಾರೆ.

ವೈಟ್‌ಫೀಲ್ಡ್‌ ಸಿಇಎನ್‌ ಠಾಣೆಗೆ ಟೆಕ್ಕಿ ದೂರು ನೀಡಿದ್ದಾರೆ.

Comments are closed.