Mahakumbha: ಹಿಂದೂ ಎಂದು ಹೇಳಿಕೊಂಡು ಮಹಾ ಕುಂಭದ ಸಾಧು-ಸಂತರ ಶಿಬಿರಕ್ಕೆ ಪ್ರವೇಶಿಸಿದ ಮುಸ್ಲಿಂ ವ್ಯಕ್ತಿ!! ಯಾಕಂತೆ ಗೊತ್ತಾ?
Mahakumbha : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ(Mahakumba) ಬಹಳ ವಿಜೃಂಭಣೆಯಿಂದ ಆರಂಭಗೊಂಡಿದೆ. ದೇಶ ವಿದೇಶಗಳಿಂದ ಕೋಟ್ಯಾಂತರ ಭಕ್ತರು ಇದರಲ್ಲಿ ಪಾಲ್ಗೊಂಡು ಪುನೀತರಾಗುತ್ತಿದ್ದಾರೆ. ಈ ನಡುವೆ ಮುಸ್ಲಿಂ ವ್ಯಕ್ತಿ ಒಬ್ಬ ತಾನು ಹಿಂದೂ ಎಂದು ಹೇಳಿಕೊಂಡು ಸಾಧು ಸಂತರ ಶಿಬಿರವನ್ನು ಪ್ರವೇಶಿಸಿದ ಘಟನೆ ಬೆಳಕಿಗೆ ಬಂದಿದೆ.
ಹೌದು, ಮುಸ್ಲಿಂ ವ್ಯಕ್ತಿ ಒಬ್ಬ ಮಹಾಕುಂಭದಲ್ಲಿನ ಜುನಾ ಅಖಾಡಾದ ಮಹಾಮಂಡಲೇಶ್ವರ ಮತ್ತು ಡಾಸನಾದೇವಿ ದೇವಾಲಯಗಳ ಅಧ್ಯಕ್ಷ ಮಹಂತ ಯತಿ ನರಸಿಂಹಾನಂದಗಿರಿ ಅವರ ಶಿಬಿರಕ್ಕೆ ಪ್ರವೇಶಿಸಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಅಂದಹಾಗೆ ಅಯೂಬ್ ಎಂಬ ಈತನು ಮಹಂತ ಯತಿ ನರಸಿಂಹಾನಂದಗಿರಿಯ ಡೇರೆಯ ಹೊರಗೆ ನಿಂತಿದ್ದ. ಸುತ್ತಮುತ್ತಲಿನ ಸನ್ಯಾಸಿಗಳು ಅನುಮಾನಗೊಂಡು ಅವನನ್ನು ಪ್ರಶ್ನಿಸಿದರು. ಮೊದಲು ಆತ ತನ್ನ ಹೆಸರು ಆಯುಷ್ ಎಂದು ಹೇಳಿದನು; ಆದರೆ ನಂತರ ಅವನ ನಿಜವಾದ ಹೆಸರು ಅಯೂಬ್ ಎಂದು ತಿಳಿದು ಬಂದಿದ್ದು ಮುಸ್ಲಿಂ ಎಂದು ಗೊತ್ತಾಗಿದೆ.
ಈ ಕುರಿತು ನೀನೇಕೆ ಇಲ್ಲಿಗೆ ಬಂದೆ ಎಂದು ಕೇಳಿದಾಗ ಆತನು ‘ನಾನು ಇಲ್ಲಿಗೆ ತಿರುಗಾಡಲು ಬಂದಿದ್ದೇ. ಯಾರೂ ನನ್ನನ್ನು ಇಲ್ಲಿಗೆ ಕಳುಹಿಸಿಲ್ಲ. ನನ್ನ ಹೆಸರು ಅಯೂಬ್ ಅಲಿ ಮತ್ತು ನಾನು ಎಟಾ ಜಿಲ್ಲೆಯ (ಉತ್ತರ ಪ್ರದೇಶ) ಅಲಿಗಂಜ್‌ನಲ್ಲಿ ವಾಸಿಸುತ್ತಿದ್ದೇನೆ. ನನಗೆ ಇಲ್ಲಿಗೆ ಬರಲು ಅನುಮತಿ ಇಲ್ಲ ಎಂದು ನನಗೆ ತಿಳಿದಿರಲಿಲ್ಲ’, ಎಂದು ಹೇಳಿದ್ದಾನೆ. ಆದರೆ ಆತ ಹಿಂದೂ ಎಂದು ಹೇಳಿಕೊಂಡು ಬಂದಿದ್ದೇಕೆ ಎಂದು ತಿಳಿದಿಲ್ಲ. ಇದೀಗ ಈತನನ್ನು ಪೊಲೀಸರು ಬಂಧಿಸಿದ್ದಾರೆ.
Comments are closed.