Mahakumbh: ಅಸಂಬದ್ಧ ಪ್ರಶ್ನೆ ಕೇಳಿದ ಯೂಟ್ಯೂಬರ್ ಗೆ ಇಕ್ಕಳದಲ್ಲಿ ಹೊಡೆದೋಡಿಸಿದ ನಾಗಾ ಸಾಧು!! ವಿಡಿಯೋ ವೈರಲ್

Mahakumbh: ಮಹಾಕುಂಭ ಮೇಳದಲ್ಲಿ ಸಾಧುವೊಬ್ಬರಿಗೆ ಯೂಟ್ಯೂಬರ್ ಒಬ್ಬ ಅಸಂಭದ್ದ ಪ್ರಶ್ನೆ ಕೇಳಿ ಇಕ್ಕಳದಿಂದ ಹೊಡೆಸಿಕೊಂಡು ಓಡಿದ ಘಟನೆ ವೈರಲ್‌ ಆಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಸಮಾರಂಭ ಮಹಾಕುಂಭ(Mahakumha) ಮೇಳಕ್ಕೆ ಕೋಟ್ಯಾಂತರ ಸಂಖ್ಯೆಯಲ್ಲಿ ಜನ ಬಂದು ಸೇರುತ್ತಿದ್ದಾರೆ. ಸಾಧುಗಳು ಸಂತರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇನ್ನು ಕುಂಭಮೇಳಕ್ಕೆ ಬಂದಿರುವ ಸಾವಿರಾರು ನಾಗಸಾಧುಗಳು ಅವರ ವೇಷಭೂಷಣಗಳು, ಆಚರಣೆಗಳು ಸೇರಿದಂತೆ ಸಾಕಷ್ಟು ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ಈಗ ಸಾಧನೆ ಮಾಡುತ್ತಿರುವ ಸಾಧುವೊಬ್ಬರ ತನಗೆ ನಿರಂತರವಾಗಿ ಒಂದಾದ ಮೇಲೊಂದರಂತೆ ಪ್ರಶ್ನೆಗಳನ್ನು ಕೇಳಿದ ಯೂಟ್ಯೂಬರ್‌ ಓರ್ವನಿಗೆ ಇಕ್ಕಳದಲ್ಲಿ ಹೊಡೆದು ಪೆಂಡಾಲ್‌ನಿಂದ ಓಡಿಸಿದ ವೀಡಿಯೋವೊಂದು ವೈರಲ್ ಆಗುತ್ತಿದೆ.

ಹೌದು, ಪ್ರಯಾಗ್‌ ರಾಜ್‌ನ ಮಹಾ ಕುಂಭಮೇಳದಲ್ಲಿ ಧ್ಯಾನ ಮಾಡುತ್ತಾ ಕುಳಿತಿದ್ದ ನಾಗ ಸಾಧು ಬಳಿ ಬಂದ ಯುಟ್ಯೂಬರ್‌ ಒಬ್ಬ ಮೈಕ್‌ ಹಿಡಿದು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾನೆ. ಮೊದಲಿಗೆ ಶಾಂತವಾಗಿಯೇ ಆತನ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಂತರ ಆತನ ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಆತನನ್ನು ಅಲ್ಲಿಂದ ಹೊಡೆದೋಡಿಸಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಯೂಟ್ಯೂಬರ್‌ವೊಬ್ಬ ಸಾಧುವೊಬ್ಬರ ಟೆಂಟ್‌ಗೆ ಹೋಗಿ ಅವರ ಸಂದರ್ಶನ ಮಾಡುತ್ತಾನೆ. ಆದರೆ ಯೂಟ್ಯೂಬರ್‌ನ ಕಿರಿಕಿರಿವುಂಟು ಮಾಡುವ ಪ್ರಶ್ನೆಗಳಿಂದ ಸಾಧುವಿಗೆ ಸಿಟ್ಟು ಬಂದಿದ್ದು, ತನ್ನ ಕೈಗೆ ಸಿಕ್ಕ ಇಕ್ಕಳದಿಂದಲೇ ಆತನ ಬೆನ್ನಿಗೆರಡು ಏಟು ಕೊಟ್ಟು ಅಲ್ಲಿಂದ ಓಡಿಸುತ್ತಾನೆ. ಅಲ್ಲದೇ ಈ ಘಟನೆಗೆ ಸಾಕ್ಷಿಯಾದ ಅಲ್ಲಿದ್ದವರನ್ನು ಉದ್ದೇಶಿಸಿ ಮಾತನಾಡಿದ ಸಾಧು ಕೇಳಿದ್ರ ಆತ ಹೇಗೆ ಅಸಂಬಂದ್ಧವಾಗಿ ಮಾತನಾಡುತ್ತಿದ್ದ ಎಂದು ಹೇಳುತ್ತಾರೆ.

ಜನತಾ ದರ್ಬಾರ್ ಎಂಬ ಇನ್ಸ್ಟಾಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. ಅದರಲ್ಲಿ ಮಹಾ ಕುಂಭಮೇಳವನ್ನು ಕವರ್‌ ಮಾಡಲು ಬರುವ ಯೂಟ್ಯೂಬರ್‌ಗಳು ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ; ನಿಮ್ಮ ಚಾನೆಲ್‌ನ ರೀಚ್‌ ಹೆಚ್ಚಿಸಲು ಅನುಪಯುಕ್ತ ಪ್ರಶ್ನೆಗಳನ್ನು ಕೇಳದಿರಿ” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸಧ್ಯ 18.5 ಮಿಲಿಯನ್‌ಗೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಸಾವಿರಾರು ಜನರು ಕಾಮೆಂಟ್‌ ಮಾಡಿದ್ದಾರೆ.

Comments are closed.