Bigg Boss: ಬಿಗ್ ಬಾಸ್ ನಲ್ಲಿ ಧನರಾಜ್ ಆಚಾರ್ ಸೇಫ್ ಆಗಲು ಕೊರಗಜ್ಜ ದೈವ ಕಾರಣ?!

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾಗಲು ಇನ್ನು 15 ದಿನಗಳು ಮಾತ್ರ ಬಾಕಿ ಇದೆ. ಇದೀಗ ನಿನ್ನೆ ತಾನೆ ಕಿಚ್ಚನ ಪಂಚಾಯಿತಿ ಮುಗಿದು ಕೊನೆಗಳಿಗೆಯಲ್ಲಿ ಧನರಾಜ ಆಚಾರ್ ಸೇವ್ ಆಗಿದ್ದಾರೆ. ಚೈತ್ರ ಕುಂದಾಪುರ ಮನೆಯಿಂದ ಔಟ್ ಆಗಿದ್ದಾರೆ. ಈ ಬೆನ್ನಲ್ಲೇ ಧನರಾಜ್ ಆಚಾರ್ ಸೇಫ್ ಕೊರಗಜ್ಜ ದೈವ ಕಾರಣ ಎನ್ನಲಾಗುತ್ತಿದೆ.

 

ಹೌದು, ಬಿಗ್ ಬಾಸ್ ಕನ್ನಡ ಸೀಸನ್ 11 ಈಗ ಕೊನೆಯ ಘಟ್ಟಕ್ಕೆ ಬಂದಿದ್ದು, ನಿನ್ನೆಯ ಎಪಿಸೋಡ್ ನಲ್ಲಿ ಚೈತ್ರಾ ಕುಂದಾಪುರ್ ಎಲಿಮಿನೇಟ್ ಆಗಿದ್ದಾರೆ. ಆದರೆ ಎಲಿಮಿನೇಷನ್ ತೂಗುಗತ್ತಿಯಲ್ಲಿದ್ದ ಧನರಾಜ್ ಆಚಾರ್ ಕೊರಗಜ್ಜ ಸ್ವಾಮಿಯ ನೆನೆದು ಬಚಾವ್ ಆಗಿದ್ದಾರೆ.

ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕೊನೆಯದಾಗಿ ಚೈತ್ರ ಕುಂದಾಪುರ ಮತ್ತು ಧನರಾಜ್ ಅವರು ತೂಗುಗತ್ತಿಯ ಮೇಲೆ ನಿಂತಿದ್ದರು. ಈ ವೇಳೆ ಕಿಚ್ಚ ಸುದೀಪ್ ಮನೆಯಲ್ಲಿ ಒಂದು ಲಕೋಟೆಯಿದೆ. ಅದರಲ್ಲಿ ಸೇಫ್ ಆದವರ ಹೆಸರು ಇರುತ್ತದೆ ಎಂದಿದ್ದರು. ಧನರಾಜ್ ಮತ್ತು ಚೈತ್ರಾ ಮನೆಯೆಲ್ಲಾ ಹುಡುಕಾಡಿ ಪತ್ರ ಪತ್ತೆ ಹಚ್ಚಿದರು.

ಹೀಗೆ ಪತ್ರ ಹುಡುಕುವಾಗ ಧನರಾಜ್ ದಕ್ಷಿಣ ಕನ್ನಡದ ಪ್ರಸಿದ್ಧ ದೈವ ಕೊರಗಜ್ಜ ಸ್ವಾಮಿಯನ್ನು ನೆನೆಯುತ್ತಲೇ ಹುಡುಕಿದರು. ಕೊರಗಜ್ಜ ಸ್ವಾಮಿಗೆ ಭಕ್ತಿಯಿಂದ ಬೇಡಿಕೊಂಡರೆ ದೈವ ಈಡೇರಿಸುತ್ತದೆ ಎಂಬ ನಂಬಿಕೆ ವಿಶೇಷವಾಗಿ ದಕ್ಷಿಣ ಕನ್ನಡದವರಲ್ಲಿದೆ. ಇದೀಗ ಧನರಾಜ್ ಕೂಡಾ ಕೊರಜ್ಜ ಸ್ವಾಮಿಯನ್ನು ನೆನೆಸಿಕೊಂಡೇ ಪತ್ರ ಹುಡುಕಿದರು. ವಿಶೇಷ ಎಂದರೆ ಅವರು ಸೇಫ್ ಆದರು.

Comments are closed, but trackbacks and pingbacks are open.