Sarigama Viji: ಹಿರಿಯ ನಟ ಸರಿಗಮ ವಿಜಿ ಆಸ್ಪತ್ರೆಗೆ ದಾಖಲು

Sarigama Viji: ಹಿರಿಯ ನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರುಂಟಾಗಿದ್ದು, ಅವರನ್ನು ಬೆಂಗಳೂರಿನ ಯಶವಂತಪುರದ ಮಣಿಪಾಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 

ಸರಿಗಮ ವಿಜಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅವರ ಪುತ್ರ ರೋಹಿತ್‌ ಹೇಳಿದ್ದಾರೆ ಎಂದು ವರದಿಯಾಗಿದೆ.

1980 ರಲ್ಲಿ ಗೀತಪ್ರಿಯ ನಿರ್ದೇಶನದ ಬೆಳವಳದ ಮಡಿಲಲ್ಲಿ ಎಂಬ ಸಿನಿಮಾದಲ್ಲಿ ಪುಟ್ಟ ಪಾತ್ರ ಮಾಡಿದ್ದ ಇವರು ಆರ್‌. ವಿಜಯ್‌ ಕುಮಾರ್‌ ನಂತರ ಸರಿಗಮ ವಿಜಿ ಎಂಬ ಹೆಸರನ್ನು ಪಡೆದರು.

ಸರಿಗಮ ವಿಜಿ ಅವರಿಗೆ ಡಾಕ್ಟರೇಟ್‌ ಪ್ರಧಾನ ಮಾಡಿ ಗೌರವಿಸಲಾಗಿದೆ. ಇವರ ಕಲಾಸೇವೆಯನ್ನು ಗುರುತಿಸಿ ನ್ಯಾಷನಲ್‌ ವರ್ಚುಯಲ್‌ ಯೂನಿವರ್ಸಿಟಿ ಫಾರ್‌ ಪೀಸ್‌ ಆಂಡ್‌ ಎಡ್ಯುಕೇಶನ್‌ ಸಂಸ್ಥೆಯು ಡಾಕ್ಟರೇಟ್‌ ಗೌರವವನ್ನು ನೀಡಿದೆ.

ಗೀತಪ್ರಿಯಾ ನಿರ್ದೇಶನದ ʼಬೆಳವಳದ ಮಡಿಲಲ್ಲಿʼ ಚಿತ್ರಕ್ಕೆ ಸಣ್ಣ ಪಾತ್ರದ ಅಭಿನಯದ ಮೂಲಕದ ನಟನಾಗಿ ಗುರುತಿಸಿಕೊಂಡರು. ಸರಕಾರಿ ಸ್ವಾಮ್ಯದ ಎನ್‌ಜಿಇಎಫ್‌ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದ ಇವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ಬಳಿಕ, ಸರಕಾರಿ ಕೆಲಸ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಚಿತ್ರರಂಗದಲ್ಲಿ ಕೆಲಸ ಮಾಡಿದರು. 269 ಸಿನಿಮಾಗಳಲ್ಲಿ ನಟನೆ, 2400 ಧಾರಾವಾಹಿಗಳಿಗೆ ನಿರ್ದೇಶದ, ನಟನೆ, 80 ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಇವರು ಕೆಲಸ ಮಾಡಿದ್ದಾರೆ.

ಸರಿಗಮ ವಿಜಿ ನಟನೆಯ ಬಹುತೇತಕ ಚಿತ್ರಗಳಲ್ಲಿ ಟೈಗರ್‌ ಪ್ರಭಾಕರ್‌ ಅವರ ಚಿತ್ರಗಳೇ ಹೆಚ್ಚಿದೆ. ಸರಿಗಮವಿಜಿ ಅವರ ʼಸಂಸಾರದಲ್ಲಿ ಸರಿಗಮʼ ಹಾಸ್ಯ ನಾಟಕವು ರಾಜ್ಯ ಮಾತ್ರವಲ್ಲದೇ ವಿದೇಶಗಳಲ್ಲೂ 1397 ಪ್ರದರ್ಶನ ಕಂಡಿರುವ ಹೆಗ್ಗಳಿಕೆ ಇದೆ.

 

Comments are closed, but trackbacks and pingbacks are open.