Jai Hanuman: ರಿಷಬ್ ಶೆಟ್ಟಿ ಅಭಿನಯದ ಜೈ ಹನುಮಾನ್ ಸಿನಿಮಾದ ವಿರುದ್ಧ ದೂರು ದಾಖಲು
Jai Hanuman: ʼಜೈ ಹನುಮಾನ್ʼ ಚಿತ್ರದಲ್ಲಿ ನಟ ರಿಷಬ್ ಶೆಟ್ಟಿ ಆಂಜನೇಯನ ಪಾತ್ರ ಮಾಡಿದ್ದು, ಕೆಲವು ತಿಂಗಳ ಹಿಂದೆ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿತ್ತು. ಪ್ರಶಾಂತ್ ವರ್ಮಾ ನಿರ್ದೇಶದಲ್ಲಿ ತೆಲುಗಿನಲ್ಲಿ ಬರುವ ಈ ಸಿನಿಮಾ ವಿರುದ್ಧ ದೂರೊಂದು ದಾಖಲಾಗಿದೆ.
ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ತೆಲಂಗಾಣದ ನಾಂಪಲ್ಲಿಯಲ್ಲಿ ವಕೀಲ ತಿರುಮಲ ರಾವ್ ಅವರು ದೂರನ್ನು ನೀಡಿದ್ದಾರೆ. ಪೋಸ್ಟರ್‌ನಲ್ಲಿ ರಿಷಬ್ ಮುಖವನ್ನು ಸಾಮಾನ್ಯ ಮನುಷ್ಯ ಮುಖವನ್ನು ತೋರಿಸುವ ಮೂಲಕ ಆಂಜನೇಯ ಸ್ವಾಮಿಗೆ ಅವಮಾನ ಮಾಡಲಾಗಿದೆ ಎಂದು ದೂರಲಾಗಿದೆ.
Comments are closed, but trackbacks and pingbacks are open.