Holiday : ರಾಜ್ಯದ ಈ 2 ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!!

Holiday : ಇಂದು ಹುಬ್ಬಳ್ಳಿ-ಧಾರವಾಡ(Hubballi-Dharwada) ಹಾಗೂ ಬೀದರ್ ಜಿಲ್ಲೆಯ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೀದರ್(Bidar) ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

 

ಸಂಸತ್ತಿನಲ್ಲಿ ಅಂಬೇಡ್ಕರ್ (BR Ambedkar) ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಿಪಕ್ಷಗಳು ಮುಗಿ ಬಿದ್ದಿವೆ. ಇನ್ನು ಅವರ ರಾಜೀನಾಮೆಗೆ ಆಗ್ರಹಿಸಿ ವಿವಿದ ದಲಿತ (Dalit) ಹಾಗೂ ಪ್ರಗತಿಪರ ಸಂಘಟನೆಗಳು ಈಗಾಗಲೆ ಹಲವು ಕಡೆ ಬಂದ್‌ಗೆ (Bandh) ಕರೆಕೊಟ್ಟಿತ್ತು. ಇದೀಗ ಇಂದು ವಿವಿಧ ದಲಿತಪರ ಸಂಘಟನೆ‌ಗಳ ಒಕ್ಕೂಟದಿಂದ ಇದೇ ವಿಷಯಕ್ಕೆ ಸಂಬಂಧಿಸಿ ಹುಬ್ಬಳ್ಳಿ-ಧಾರವಾಡ ಹಾಗೂ ಬೀದರ್‌ನಲ್ಲಿ ಬಂದ್‌ಗೆ ಕರೆ ನೀಡಲಾಗಿದೆ.

ಗೃಹ ಸಚಿವ ಅಮಿತ್ ಶಾ ಅವರ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಹೇಳಿಕೆ ಖಂಡಿಸಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟ ಬೀದರ್ ಬಂದ್‌ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಧಾರವಾಡ ಮತ್ತು ಬೀದರ್‌ನಲ್ಲಿ ಬೀದರ್ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ರಜೆ ಘೊಷಣೆ ಮಾಡಲಾಗಿದೆ.

ಇನ್ನು ಹುಬ್ಬಳ್ಳಿ- ಧಾರವಾಡದಲ್ಲಿ ರಜೆ ನೀಡಿದ್ದು ಮಾತ್ರವಲ್ಲದೆ, ಈ ರಜೆಯನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಲು ಆದೇಶಿಸಲಾಗಿದೆ. ಯಸ್, ಅಲ್ಲದೆ, ಮುಂಬರುವ 2 ಶನಿವಾರಗಳಂದು ಪೂರ್ಣವಧಿ ಶಾಲೆ ನಡೆಸಿ ರಜೆ ಅವಧಿಯನ್ನು ಸರಿದೂಗಿಸಲು ಸಂಬಂಧಿಸಿದ BEO ರವರಿಗೆ ಸೂಚನೆ ನೀಡಲಾಗಿದೆ.

Comments are closed, but trackbacks and pingbacks are open.