Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಶಿಕ್ಷೆ ಪ್ರಕಟ

Sullia: ತಾಯಿಯೋರ್ವಳು ತನ್ನ ಐದು ವರ್ಷದ ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟು ಗಾಯಗೊಳಿಸಿದ ಘಟನೆಯೊಂದರ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪ ಸಾಬೀತಾಗಿದ್ದು, ಆರೋಪಿಗೆ ಶಿಕ್ಷೆ ಘೋಷಣೆ ಮಾಡಲಾಗಿದೆ.
2022 ರ ಆ.16 ರಂದು ಸುಳ್ಯ ಗಾಂಧಿನಗರ ನಾವೂರು ಎಂಬಲ್ಲಿ ತಾಯಿಯೋರ್ವಳು ಬಿಸಿ ಹಾಲಿನ ಪಾತ್ರೆಯಿಂದ ತನ್ನ ಐದು ವರ್ಷ ಪ್ರಾಯದ ಪುತ್ರಿಯ ದೇಹದ ವಿವಿಧ ಕಡೆ ಸುಟ್ಟಿದ್ದಳು. ಈ ಕುರಿತು ತಾಯಿಯಾದ ಕಾವ್ಯಶ್ರೀ ಅವರ ವಿರುದ್ಧ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿ ರಶ್ಮಿ ಅವರು ಸುಳ್ಯ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಈ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದಿದ್ದು, ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಿ.ಮೋಹನ್ ಬಾಬು ಅವರು ಆಪಾದಿತೆಯನ್ನು ದೋಷಿಯೆಂದು ಘೋಷಿಸಿ, ಒಟ್ಟು 10 ಸಾವಿರ ರೂ. ದಂಡ, ಕೊಡಲು ತಪ್ಪಿದ್ದಲ್ಲಿ ಎರಡು ತಿಂಗಳ ಸಾದಾ ಕಾರಾಗೃಹ ವಾಸದ ತೀರ್ಪನ್ನು ನೀಡಿದೆ.
Comments are closed.