China Virus: ಚೀನಾದಲ್ಲಿ ಹೊಸ ವೈರಸ್ ವದಂತಿ
China: 2020 ರಲ್ಲಿ ಜಗತ್ತನ್ನು ಅಪ್ಪಳಿಸಿದ ಕರೋನಾ ಸಾಂಕ್ರಾಮಿಕದ ನಂತರ, ಚೀನಾ ಮತ್ತೊಂದು ಅಪಾಯಕಾರಿ ವೈರಸ್‌ನ ಹರಡಿರುವ ಕುರಿತು ವರದಿಯಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ವೇಗವಾಗಿ ಹರಡುತ್ತಿದ್ದು, ಆಸ್ಪತ್ರೆಗೆ ಜನ ಹರಿದು ಬರುತ್ತಿದ್ದಾರೆ ಎಂದು ವರದಿಯಾಗಿದೆ. ಈ ವೈರಸ್ ಚೀನಾದಲ್ಲಿ ಕೊರೊನಾ ರೀತಿಯಲ್ಲಿ ವಿನಾಶವನ್ನು ಉಂಟುಮಾಡುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ, HMPV ಯಿಂದ ಹೆಚ್ಚಿನ ಸಂಖ್ಯೆಯ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.
HMPV, ಇನ್ಫ್ಲುಯೆನ್ಸ A, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು COVID-19 ನಂತಹ ಹಲವಾರು ವೈರಸ್‌ಗಳು ಆಸ್ಪತ್ರೆಗಳಲ್ಲಿ ಏಕಕಾಲದಲ್ಲಿ ಹರಡುತ್ತಿವೆ ಎಂದು ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಳ್ಳಲಾಗುತ್ತಿದೆ. ಚೀನಾದಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದು, ಈ ಹೊಸ ವೈರಸ್ ಬಗ್ಗೆ ಚೀನಾ ಸರ್ಕಾರ ಯಾವುದೇ ಮಾಹಿತಿಯನ್ನು ಹಂಚಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯಾಗಲೀ, ಚೀನ ಆಡಳಿತವಾಗಲೀ ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಈ ಅಂಶಗಳಿಗೆ ಯಾವುದೇ ಆಧಾರ ದೊರಕಿಲ್ಲ.
Comments are closed, but trackbacks and pingbacks are open.