Viral News : ಸಂಬಂಧಿಕರ ಸಂಸ್ಥೆಯಲ್ಲಿ ಕೆಲಸ ಮಾಡಲು ಬೇಸರ; ಯುವಕ ಮಾಡಿದ್ದೇನು ಗೊತ್ತೇ?

Share the Article

Viral News : ಕೆಲಸ ಮಾಡುವುದನ್ನು ತಪ್ಪಿಸಲು ಮನುಷ್ಯ ಏನು ಮಾಡಬಹುದು? ಅನಾರೋಗ್ಯದ ನೆಪದಲ್ಲಿ ರಜೆ, ಮಿತ್ರನ ಮದುವೆಯ ನೆಪ, ಅಪಘಾತದ ನೆಪ ಹೇಳಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಕೆಲಸದಿಂದ ತಪ್ಪಿಸಿಕೊಳ್ಳಲು ಏನು ಮಾಡಿದ್ದಾನೆಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ! ಸೂರತ್‌ನಲ್ಲಿ (ಗುಜರಾತ್) ಒಬ್ಬ ವ್ಯಕ್ತಿಯು ಕೆಲಸವನ್ನು ತಪ್ಪಿಸಲು ತನ್ನ ಬೆರಳುಗಳನ್ನು ತಾನೇ ಕತ್ತರಿಸಿಕೊಂಡಿರುವ ಘಟನೆ ನಡೆದಿದೆ. ಆಮೇಲೆ ಈತ ಸೀದಾ ಪೊಲೀಸರ ಬಳಿ ಹೋಗಿ ತನ್ನ ಬೆರಳುಗಳು ನಾಪತ್ತೆಯಾಗಿವೆ ಎಂದು ದೂರು ಸಲ್ಲಿಸಿದ್ದಾನೆ. ಆದರೆ ಪೊಲೀಸರ ತನಿಖೆಯಲ್ಲಿ ಸತ್ಯ ಬಯಲಾಗಿದೆ.

ಗುಜರಾತ್‌ನ ಸೂರತ್‌ನಲ್ಲಿ ವಾಸಿಸುತ್ತಿರುವ ಮಯೂರ್ ತಾರಾಪರಾ ತಮ್ಮ ಸಂಬಂಧಿಕರ ವಜ್ರ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಡಿಸೆಂಬರ್ 8 ರಂದು ಪ್ರಕಾಶ್ ಪೊಲೀಸರನ್ನು ಸಂಪರ್ಕಿಸಿ ತನ್ನ ಎಡಗೈ ಬೆರಳುಗಳು ಕಾಣುತ್ತಿಲ್ಲ ಎಂದು ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾನೆ.

ಆತನ ಆರಂಭಿಕ ಹೇಳಿಕೆಯ ಪ್ರಕಾರ, ಘಟನೆ ನಡೆದ ರಾತ್ರಿ ಸೂರತ್‌ನ ವೇದಾಂತ ಸರ್ಕಲ್ ಬಳಿ ತನ್ನ ಸ್ನೇಹಿತನಿಗಾಗಿ ಕಾಯುತ್ತಿದ್ದ. ಒಂದು ಗಂಟೆ ಕಳೆದರೂ ಗೆಳೆಯ ಬರದೇ ಇದ್ದಾಗ ಮನೆಗೆ ಹೋಗಲು ನಿರ್ಧರಿಸಿದ. ದಾರಿಯಲ್ಲಿ ಒಂದು ಸ್ಥಳದಲ್ಲಿ ನಿಂತಾಗ ತಲೆಸುತ್ತು ಬಂದು ಮೂರ್ಛೆ ಹೋದೆ ಎಂದು ಹೇಳಿದ. ಪ್ರಜ್ಞೆ ಬಂದಾಗ ಎಡಗೈಯಲ್ಲಿ ನಾಲ್ಕು ಬೆರಳುಗಳು ಕಾಣೆಯಾಗಿದ್ದವು ಎಂದು ಹೇಳಿದ್ದಾನೆ. ಇದಾದ ನಂತರ ಪ್ರಕಾಶ್ ಸ್ನೇಹಿತನ ಸಹಾಯ ಕೇಳಿದ್ದು, ಆತ ಬಂದು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ವೈದ್ಯರು ಆತನ ತುಂಡರಿಸಿದ ಬೆರಳುಗಳಿಗೆ ಚಿಕಿತ್ಸೆ ನೀಡಿ ಅದೇ ದಿನ ಡಿಸ್ಚಾರ್ಜ್ ಮಾಡಿದರು. ಬಳಿಕ ಪ್ರಕಾಶ್ ಪೊಲೀಸರಿಗೆ ದೂರು ನೀಡಿದ್ದಾನೆ.

ತನಿಖೆ ವೇಳೆ ಪೊಲೀಸರಿಗೆ ಘಟನೆ ನಡೆದ ಸ್ಥಳದಲ್ಲಿ ಯಾವುದೇ ರಕ್ತದ ಕಲೆಯಾಗಲೀ ಅಥವಾ ಇನ್ನಾವುದೇ ಸಾಕ್ಷಿಯಾಗಲೀ ಸಿಕ್ಕಿರಲಿಲ್ಲ. ಇದಾದ ನಂತರ ಪ್ರಕಾಶ್ ಕಥೆಯ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತು ಮತ್ತು ಕೆಲವೇ ದಿನಗಳಲ್ಲಿ ಸೂರತ್ ಕ್ರೈಂ ಬ್ರಾಂಚ್ ಸತ್ಯವನ್ನು ಬಹಿರಂಗಪಡಿಸಿತು.

ಮಯೂರ್ ತಾರಾಪರಾ ತನ್ನ ಬೆರಳುಗಳನ್ನು ತಾನೇ ಕತ್ತರಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಭಾವೇಶ್ ರೋಜಿಯಾ ತಿಳಿಸಿದ್ದಾರೆ. ಈ ಕೆಲಸ ಸಂಪೂರ್ಣ ಪ್ಲಾನ್ ಮಾಡಿಕೊಂಡು ಈತ ಮಾಡಿದ್ದಾನೆ. ಡಿಸಿಪಿ ಪ್ರಕಾರ, ಪ್ರಕಾಶ್ ಕೆಲಸದ ಒತ್ತಡದಲ್ಲಿದ್ದು, ತನಿಗಿಷ್ಟವಿಲ್ಲದ ಕೆಲಸದಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಸಂಬಂಧಿಯೊಬ್ಬರಿಗೆ ಸೇರಿದ ಆಭರಣ ಮಳಿಗೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ಇಷ್ಟವಿಲ್ಲದಿದ್ದರೂ ಕೆಲಸ ಮುಂದುವರಿಸುವಂತೆ ಈತನ ತಂದೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಅಮ್ರೋಲಿ ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಂತರ ಇದನ್ನು ಸಿಟಿ ಕ್ರೈಂ ಬ್ರ್ಯಾಂಚ್‌ಗೆ ವರ್ಗಾವಣೆ ಮಾಡಿದರು. ನಂತರ ಕ್ರೈಂ ಬ್ರ್ಯಾಂಚ್‌ನವರು ಮಯೂರ್‌ ಹೇಳಿದ ಜಾಗದ ಸಿಸಿಟಿವಿ ಕ್ಯಾಮರಾವನ್ನು ಚೆಕ್‌ ಮಾಡಿದಾಗ ಅಸಲಿ ವಿಷಯ ಹೊರಗೆ ಬಂದಿದೆ.

ಪೊಲೀಸರ ತನಿಖೆಯಲ್ಲಿ ನಾಲ್ಕು ದಿನಗಳ ಹಿಂದೆ ರವಿವಾರ ರಾತ್ರಿ ನಾನು ಅಮ್ರೋಲಿಯ ರಿಂಗ್‌ ರೋಡ್‌ ಬಳಿ ಹೋಗಿ ನನ್ನ ಮೋಟಾರ್‌ ಸೈಕಲ್‌ ಪಾರ್ಕ್‌ ಮಾಡಿ, ರಾತ್ರಿ 10 ಗಂಟೆಯ ಸುಮಾರಿಗೆ ಚಾಕುವಿನಿಂದ ನನ್ನ ಕೈ ಬೆರಳುಗಳನ್ನು ನಾನೇ ಕತ್ತರಿಸಿಕೊಂಡೆ ಎಂದು ಹೇಳಿದ್ದಾನೆ.

Leave A Reply

Your email address will not be published.