Mangaluru : ಮಂಗಳೂರಲ್ಲಿ ತೆಂಗಿನ ಮರ ಕಡಿಯಲು ಬಂತು 18 ಸಾವಿರ ಅರ್ಜಿ..!! ಯಾಕಾಗಿ ಗೊತ್ತಾ?

Mangaluru: ಒಣ, ನಿರುಪಯುಕ್ತ ತೆಂಗಿನ ಮರಗಳನ್ನು ಖರೀದಿಸಿ ಮೌಲ್ಯವರ್ಧನೆ ಮಾಡುವ ದಕ್ಷಿಣ ಕನ್ನಡ (Mangaluru) ತೆಂಗು ರೈತ ಉತ್ಪಾದಕರ ಸಂಸ್ಥೆಗೆ, ಮರ ಕಡಿಯಲು ಬೇಡಿಕೆ ಇಟ್ಟು ರೈತರಿಂದ 18 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ.

ಮುಖ್ಯವಾಗಿ ಅನೇಕರು ಒಣಗಿದ ಅಥವಾ ನಿರುಪಯುಕ್ತ ತೆಂಗಿನ ಮರಗಳನ್ನು ತೋಟದಿಂದ ತೆರವುಗೊಳಿಸಲು ಹಿಂದೇಟು ಹಾಕುತ್ತಾರೆ‌. ಜೊತೆಗೆ, ತೋಟದ ನಡುವಿನಿಂದ ಒಣ ಮರ ತೆರವುಗೊಳಿಸುವುದು ಸಹ ಅವರಿಗೆ ಸವಾಲು. ಅಂತಹ ಮರಗಳನ್ನು ನಾವು ಅವರ ಮನೆ ಬಾಗಿಲಿಗೇ ಹೋಗಿ ಖರೀದಿಸುತ್ತಿದ್ದೇವೆ. ಈಗಾಗಲೇ ಸಂಸ್ಥೆಯು 20 ಸಾವಿರ ಸದಸ್ಯರನ್ನು ಹೊಂದಿದ್ದು, ಅರ್ಜಿ ಸಲ್ಲಿಸಿದವರಲ್ಲಿ ಸದಸ್ಯರೇ ಹೆಚ್ಚಿನವರು’ ಎನ್ನುತ್ತಾರೆ ವಿಟ್ಲದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್‌.ಕೆ.

ಸದ್ಯ ‘ಗುಣಮಟ್ಟ ‌ಆಧರಿಸಿ ಒಂದು ಮರಕ್ಕೆ ಗರಿಷ್ಠ ₹2,000 ದರ ನೀಡಲಾಗುತ್ತದೆ. ಸಿಡಿಲು ಬಡಿದು ಚೆಂಡೆ ಒಣಗಿಸಿದ ಮರಗಳನ್ನು ಸಹ ಖರೀದಿಸಲಾಗುತ್ತದೆ. ಕಾರ್ಮಿಕರ ಅಲಭ್ಯತೆ ಇದ್ದಲ್ಲಿ, ಸಂಸ್ಥೆಯೇ ಈ ಹೊಣೆ ನಿರ್ವಹಿಸುತ್ತದೆ. ಆದರೆ, ಅದರ ವೆಚ್ಚವನ್ನು ಮರದ ಮಾಲೀಕರು ಭರಿಸಬೇಕಾಗುತ್ತದೆ. ಒಂದು ತೆಂಗಿನ ಮರ‌ ಕಡಿದರೆ ಒಂದು ಗಿಡ ‌ನೆಡುವುದನ್ನು ಕಡ್ಡಾಯಗೊಳಿಸಿದ್ದೇವೆ. ಸಿಪಿಸಿಆರ್‌ಐ ಪ್ರಮಾಣೀಕರಿಸಿದ ಸಸಿಯನ್ನು ನಾವು ಉಚಿತವಾಗಿ ಅವರಿಗೆ ಒದಗಿಸುತ್ತೇವೆ’ ಎನ್ನುತ್ತಾರೆ ಅವರು.

Leave A Reply

Your email address will not be published.