Murder: ಲಿವ್ ಇನ್ ಗೆಳತಿಯನ್ನು 50 ತುಂಡುಗಳಾಗಿ ಕತ್ತರಿಸಿದ ಕೋಳಿ ಅಂಗಡಿ ವ್ಯಾಪಾರಿ!

Share the Article

Murder: ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದ ಗೆಳತಿ ತನ್ನ ಮದುವೆ ಜೀವನವನ್ನು ಮುರಿಯುತ್ತಾಳೆ ಎಂದು, ಆಕೆಯನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿ (Murder) ಬಿಸಾಡಿರುವ ಘಟನೆ ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ನರೇಶ್ ಭೆಂಗ್ರಾ ಎಂದು ಗುರುತಿಸಲಾಗಿದೆ. ನ.24 ರಂದು ಜೋರ್ಡಾಗ್ ಗ್ರಾಮದ ಬಳಿ ಬೀದಿ ನಾಯಿಯ ದೇಹದೊಂದಿಗೆ ಮಾನವನ ದೇಹದ ಅಂಗಾಂಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಮಾಹಿತಿ ಪ್ರಕಾರ, ಆರೋಪಿಯು ತನ್ನ ಗೆಳತಿಯೊಂದಿಗೆ ತಮಿಳುನಾಡಿನಲ್ಲಿ 2 ವರ್ಷಗಳ ಕಾಲ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದನು. ನಂತರ ಅಲ್ಲಿಂದ ಜಾರ್ಖಂಡ್‌ನ ಖುಂಟಿಗೆ ಬಂದು ತನ್ನ ಗೆಳತಿಗೆ ತಿಳಿಸದೇ ಬೇರೊಂದು ಮದುವೆಯಾಗಿದ್ದ. ಅದಾದ ಸ್ವಲ್ಪ ದಿನಗಳ ನಂತರ ಸಂತ್ರಸ್ತೆ ತನ್ನ ಗೆಳೆಯನ ಭೇಟಿಗಾಗಿ ಜಾರ್ಖಂಡ್‌ಗೆ ಹೋಗಿದ್ದಳು.

ಜಾರ್ಖಂಡ್‌ಗೆ ಬಂದಾಗ ಮನೆಯಲ್ಲಿ ಹೆಂಡತಿಯಿದ್ದ ಕಾರಣ ಆಕೆಯನ್ನು ಖುಂಟಿಗೆ ಕರೆದೊಯ್ದು ಮನೆಯ ಸಮೀಪ ನಿಲ್ಲಿಸಿ, ತಾನು ಮರಳಿ ಬರುವುದಾಗಿ ತಿಳಿಸಿ ಮನೆ ಕಡೆಗೆ ಹೋಗಿದ್ದಾನೆ. ಮನೆಯಿಂದ ಮರಳುವಾಗ ಆಯುಧಗಳೊಂದಿಗೆ ಬಂದು ಆಕೆಯನ್ನು ಆತ್ಯಾಚಾರ ಎಸಗಿ, ಬಳಿಕ ಕತ್ತು ಹಿಸುಕಿ ಸಾಯಿಸಿದ್ದಾನೆ. ನಂತರ ದೇಹವನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿ ನಾಯಿ ಶವದೊಂದಿಗೆ ಬಿಸಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿಸಿವೆ.

ಖುಂಟಿ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್ ಮಾಹಿತಿ ಪ್ರಕಾರ, ಆರೋಪಿ ತಮಿಳುನಾಡಿನ ಕೋಳಿ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕೋಳಿಯನ್ನು ಕತ್ತರಿಸುವುದರಲ್ಲಿ ನಿಪುಣರಾಗಿದ್ದ. ಆದ್ದರಿಂದ ನ.24 ರಂದು ಜೋರ್ಡಾಗ್ ಗ್ರಾಮದ ಬಳಿ ಬೀದಿ ನಾಯಿಯ ಕಳೇಬರದೊಂದಿಗೆ ಕೈಯೊಂದು ಕಾಣಿಸಿಕೊಂಡಿದ್ದು, ನಂತರ ಪೊಲೀಸರ ಪರಿಶೀಲನೆಯ ಬಳಿಕ ಹಲವು ಭಾಗಗಳನ್ನು ಪತ್ತೆಹಚ್ಚಿದ್ದಾರೆ.

ಸದ್ಯ ಘಟನೆ ನಡೆದ ಜಾಗದಲ್ಲಿ ಮಹಿಳೆಯ ಆಧಾರ್ ಕಾರ್ಡ್ ಸೇರಿದಂತೆ ಸಾಮಾನುಗಳಿದ್ದ ಬ್ಯಾಗ್ ಕೂಡ ಪತ್ತೆಯಾಗಿದೆ. ಇದೀಗ ಸಂತ್ರಸ್ತೆಯ ತಾಯಿ ಬ್ಯಾಗ್ ತನ್ನ ಮಗಳದ್ದೇ ಎಂದು ಪತ್ತೆ ಹಚ್ಚಿದ್ದಾರೆ.

Leave A Reply

Your email address will not be published.