Chikkamagaluru: Hebbe Falls ಜಲಪಾತದಲ್ಲಿ ಈಜಲು ಹೋಗಿ ಪ್ರಾಣ ಬಿಟ್ಟ ಪ್ರವಾಸಿಗ

Share the Article

Chikkamagaluru: ದೀಪಾವಳಿ ಹಿನ್ನೆಲೆ ಸಾಲು ಸಾಲು ರಜೆ ಇದ್ದ ಕಾರಣ ಸ್ನೇಹಿತರೊಂದಿಗೆ ಸೇರಿ ಹೆಬ್ಬೆ ಜಲಪಾತಕ್ಕೆ ಬಂದಿದ್ದ ಪ್ರವಾಸಿಗನೊಬ್ಬ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಜಲಪಾತದಲ್ಲಿ ನಿನ್ನೆ (ನ.3) ಸಂಭವಿಸಿದೆ.

ಅಮಿತ್‌ ಕುಮಾರ್‌ (30) ಮೃತ ವ್ಯಕ್ತಿ. ಇವರು ಛತ್ತೀಸಘಡ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಿದ್ದ ಎನ್ನಲಾಗಿದೆ. ಈತ ಭಾನುವಾರ ಸ್ನೇಹಿತರ ಜೊತೆ ಕೆಮ್ಮಣ್ಣು ಗುಂಡಿ ಸಮೀಪದ ಹೆಬ್ಬೆ ಜಲಪಾತಕ್ಕೆ ತೆರಳಿದ್ದು, ಈಜಲು ಹೋಗಿ ನೀರುಪಾಲಾಗಿರುವ ಘಟನೆ ನಡೆದಿದೆ.

ಈ ಪ್ರಕರಣ ಸಂಬಂಧ ಲಿಂಗದಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply