Bengaluru: ರಾಜಧಾನಿಯಲ್ಲಿ ದೀಪಾವಳಿಯ ಸಂಭ್ರಮದಲ್ಲಿ ಹದ್ದುಗಳು ತತ್ತರ!


Bengaluru: ದೀಪಗಳ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ಇರುವ ನಾಡಿನ ಜನತೆ ಹಚ್ಚಿದ ಪಟಾಕಿ ಸಿಡಿತಕ್ಕೆ ಮನುಷ್ಯರು ಮಾತ್ರವಲ್ಲದೇ ಪಕ್ಷಿಗಳು ಕೂಡಾ ನಲುಗಿ ಹೋಗಿದೆ. ಹೌದು, ಪಟಾಕಿ ಶಬ್ದಕ್ಕೆ ಪಕ್ಷಿಗಳು ತತ್ತರಿಸಿದ್ದು, ರಾಕೆಟ್ ಸಿಡಿತದಿಂದ ಬರೋಬ್ಬರಿ 200 ಹದ್ದುಗಳು ಪ್ರಾಣ ಕಳೆದುಕೊಂಡಿದೆ.

ಬೆಂಗಳೂರಿನ ಅರ್ಬನ್ ಪಕ್ಷಿ ಎಂದೇ ಖ್ಯಾತಿ ಪಡೆದಿರುವ ಹದ್ದಿಗೆ ಗಾರ್ಬೇಜ್ ಕ್ಲೀನರ್ ಎಂದು ಹೇಳಲಾಗುತ್ತದೆ. ಕಸ ತಿಂದು ಜೀರ್ಣ ಮಾಡಿಕೊಳ್ಳುವ ಶಕ್ತಿ ಇದ್ದರೂ ಇದೀಗ ಈ ಪಟಾಕಿ ಮಾತ್ರ ಪ್ರಾಣ ತಿಂದು ಬಿಟ್ಟಿದೆ. ರಾಕೆಟ್ ಹೊಡೆತದಿಂದ ನಲುಗಿ ಪ್ರಾಣ ಕಳೆದುಕೊಂಡಿದೆ.
ಕೆಂಗೇರಿಯಲ್ಲಿರುವ ಪೀಪಲ್ ಫಾರ್ ಎನಿಮಲ್ಸ್ ಸಂಸ್ಥೆಗೆ ಈ ಸಲ ಕಳೆದ ಬಾರಿಗಿಂತ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ವರದಿಯಾಗಿದೆ. ಮಂಗ, ಶಾರ್ಟ್ ನೋಸ್ಡ್ ಫ್ರೂಟ್ ಬ್ಯಾಟ್, ಇಂಡಿಯನ್ ಕುಕ್ಕೂ, ಇಂಡಿಯನ್ ನೈಟ್ ಜಾರ್, ಬಾರ್ನ್ ಔಲ್ ಸೇರಿ ಹಲವು ಪಕ್ಷಿಗಳು ಪಟಾಕಿ ಪೆಟ್ಟಿಗೆ ತತ್ತರಿಸಿದೆ.
ಮನುಷ್ಯರಿಗೆ ಸಂಭವಿಸಿದ ಅವಘಡದಲ್ಲಿ ಬೆಂಗಳೂರಿನಲ್ಲಿಯೇ ಸರಿಸುಮಾರು 250 ಪ್ರಕರಣಗಳು ದಾಖಲಾಗಿದೆ. ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ಕಣ್ಣಿನ ಅವಘಡಕ್ಕೆ ತುತ್ತಾಗಿದ್ದಾರೆ.
