Bangalore: ದೀಪಾವಳಿ ಸಂಭ್ರಮದ ಮಧ್ಯೆ ಸ್ನೇಹಿತರ ಹುಚ್ಚಾಟ; ಕುಡಿದ ಮತ್ತಿನಲ್ಲಿ ಪಟಾಕಿ ಬಾಕ್ಸ್‌ ಮೇಲೆ ಕೂತ್ಕೊಂಡ ಯುವಕ ಸಾವು

Share the Article

Bangalore: ದೀಪಾವಳಿ ಮನೆ ಮನ ಬೆಳಗುತ್ತೆ ಎನ್ನುವ ಮಾತಿದೆ. ಹಾಗಾಗಿ ಇದನ್ನು ಬೆಳಕಿನ ಹಬ್ಬ ದೀಪಾವಳಿ ಎಂದು ಕರೆಯಲಾಗುತ್ತದೆ. ಆದರೆ ಇಲ್ಲೊಂದು ಕಡೆ ಈ ದೀಪಾವಳಿ ಹಬ್ಬದ ಸಂಭ್ರಮದ ಭರದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ಸ್ನೇಹಿತರು ಹೇಳಿದರೆಂದು ಪಟಾಕಿಯ ಬಾಕ್ಸ್‌ನಲ್ಲಿ ಕುಳಿತು ಸಿಡಿದ ಪರಿಣಾಮ ಸಾವನ್ನಪ್ಪಿರುವ ದಾರುಣ ಘಟನೆಯೊಂದು ಅಕ್ಟೋಬರ್‌ 31, ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ.

ಮೃತ ಯುವಕನನ್ನು ಶಬರೀಶ್‌ ಎಂದು ಗುರುತಿಸಲಾಗಿದೆ. ಮದ್ಯದ ಅಮಲಿನಲ್ಲಿದ್ದ ಶಬರೀಶ್‌ ತನ್ನ ಆರು ಮಂದಿ ಸ್ನೇಹಿತರು ನೀಡಿದ ಸವಾಲನ್ನು ಸ್ವೀಕರಿಸಿ ಪಟಾಕಿ ಬಾಕ್ಸ್‌ ಮೇಲೆ ಕುಳಿತಿದ್ದು, ಅದು ಸಿಡಿದಾಗ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ನೆಲಕ್ಕೆ ಬಿದ್ದಿದ್ದಾನೆ. ಕೂಡಲೇ ಈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಶನಿವಾರ ಮೃತಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿರುವ ಕುರಿತು ವರದಿಯಾಗಿದೆ.

ಆರು ಜನರ ಗುಂಪೊಂದು ಪಟಾಕಿ ತುಂಬಿರುವ ಬಾಕ್ಸ್‌ ಮೇಲೆ ಕುಳಿತರೆ ಆಟೋರಿಕ್ಷಾ ಖರೀದಿ ಮಾಡಿ ಕೊಡುವುದಾಗಿ ಹೇಳಿದ್ದಾರೆ. ನಂತರ ಈ ಸವಾಲು ಸ್ವೀಕರಿಸಿದ ಶಬರೀಶ್‌ ಸ್ಫೋಟದಿಂದ ಗಾಯಗೊಂಡು ಮೃತಪಟ್ಟಿದ್ದಾನೆ.

ಹತ್ಯೆ ಪ್ರಕರಣ ದಾಖಲಾಗಿದ್ದು, ಈ ಘಟನೆಯಲ್ಲಿ ಭಾಗಿಯಾಗಿರುವ ಆರು ಮಂದಿಯನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

https://twitter.com/i/status/1853391855699779859

Leave A Reply