Ajekar: ಗಂಡನಿಗೆ ವಿಷ ನೀಡಿ ಹತ್ಯೆ ಪ್ರಕರಣ; ತನಿಖೆ ಹಾದಿ ದಿಕ್ಕು ತಪ್ಪುತ್ತಿದೆ; ಬಾಲಕೃಷ್ಣ ಮನೆಯವರ ಆರೋಪ

ನನಗೂ ವಿಷ ಪ್ರಾಶನ ಮಾಡಲಾಗಿದೆ-ಪ್ರತಿಮಾ ಸಹೋದರ ಅನುಮಾನ

Ajekar: ಉಡುಪಿಯಲ್ಲಿ ಇತ್ತೀಚೆಗೆ ಕೊಲೆಯಾದ ಅಜೆಕಾರಿನ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ತಂದೆ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿ ಮಾಡಿದ ಮೃತರ ಸಹೋದರ ಪ್ರಕಾಶ್‌ ಪೂಜಾರಿ ಅವರು ” ಆರೋಪಿಯ ತಂದೆ ಪ್ರಭಾವಿ ವ್ಯಕ್ತಿ. ಹಣದ ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕಿ ನನ್ನ ಮಗ ಆರೋಪಿ ದಿಲೀಪ್‌ ಹೆಗ್ಡೆಯ ರಕ್ಷಣೆಗೆ ನಿಂತಿದ್ದಾರೆ. ಮಗನನ್ನು ಜೈಲಿನಿಂದ ಹೊರತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ. ಕೆಲವೊಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ನನ್ನ ಮಗ ತಪ್ಪೇ ಮಾಡಿಲ್ಲ ಎನ್ನುವ ರೀತಿ ಹೇಳಿಕೆಯನ್ನು ನೀಡಿದ್ದಾರೆ. ಆರೋಪಿ ದಿಲೀಪ್‌ ಹೆಗ್ಡೆ ತಂದೆ ದೇವಸ್ಥಾನದಲ್ಲಿ ಮಗನ ಹೆಸರಿನಲ್ಲಿ ಪೂಜೆ ಮಾಡಿ ಆರೋಪಿ ಮಗನನ್ನು ರಕ್ಷಣೆ ಮಾಡುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿ ಪ್ರತಿಮಾ, ಎರಡನೇ ಆರೋಪಿ ದಿಲೀಪ್‌ ಹೆಗ್ಡೆಯಾಗಿದ್ದು. ಅದೇ ರೀತಿ ಚಿಕಿತ್ಸೆ ಪಡೆದ ಆಸ್ಪತ್ರೆ ಚಿಕಿತ್ಸೆ ನೀಡಿದ ವೈದ್ಯರನ್ನು ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ಆರೋಪಿಗಳಿಬ್ಬರಿಗೂ ಜೀವಾವಧಿ ಶಿಕ್ಷೆಯಾಗಬೇಕು. ಈ ರೀತಿಯ ಪ್ರಕರಣ ಎಲ್ಲಿ ಕೂಡಾ ನಡೆಯಬಾರದು ಎಂದು ಅವರು ಒತ್ತಾಯ ಮಾಡಿದರು. ಪೊಲೀಸರು ಪಾದರ್ಶಕ ತನಿಖೆ ಮಾಡಬೇಕು. ತನಿಖೆಯು ಈಗ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಯಾವುದೇ ಒತ್ತಡಕ್ಕೆ ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗದೇ ಈ ಪ್ರಕರಣದ ಇಬ್ಬರೂ ಆರೋಪಿಗಳಿಗೂ ಶಿಕ್ಷೆಯಾಗಬೇಕು ಎಂದು ಹೇಳಿದರು.

ಹಾಗೆನೇ ಮೃತರ ಸಹೋದರಿ ಶಶಿರೇಖಾ ಅವರು ಕೂಡಾ ಮಾತನಾಡುತ್ತಾ, ಅಣ್ಣನ ಆರೋಗ್ಯ ಹದಗೆಟ್ಟಾಗ ಅತ್ತಿಗೆ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಸೌಖ್ಯದಿಂದ ಇದ್ದ ಅಣ್ಣನಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆ ವೈದ್ಯರು ಕೆಲ ಸಂಗತಿ ಮುಚ್ಚಿಟ್ಟಿರುವ ಸಾಧ್ಯತೆ ಇದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಪ್ರತಿಮಾ ಸಹೋದರ ಮಾತನಾಡುತ್ತಾ, ಭಾವ ಮೃತ ಪಟ್ಟಾಗ ನನಗೆ ಸಂಶಯವಿತ್ತು. ಮುಖದಲ್ಲಿ ಗಾಯವಿತ್ತು. ಆದರೂ ನಾನು ಸಹೋದರಿ ಪ್ರತಿಮಾಳ ಬಾಯಿ ಬಿಡಿಸಲು ಪ್ರಯತ್ನ ಪಟ್ಟೆ. ಆದರೂ ಮರಣೋತ್ತರ ಪರೀಕ್ಷೆ ಬರಲಿ ಎಂದು ಕಾಯುತ್ತಿದೆ. ಅನಂತರ ಆಕೆನೇ ನನ್ನ ಬಳಿ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿದ್ದನ್ನು ಹೇಳಿದಳು. ನಂತರ ನಾನೇ ಠಾಣೆಗೆ ಹೋಗಿ ದೂರನ್ನು ಕೊಟ್ಟೆ. ಅನಂತರ ನನಗೆ ಹಲವಾರು ಅನಾಮಧೇಯ ಕರೆ ಬಂದಿತ್ತು. ಬೆದರಿಕೆ ಕರೆಗಳು ಅಲ್ಲ. ಹಣದ ಆಮಿಷದ ಕರೆಗಳು ಬಂದಿತ್ತು. 10 ಲಕ್ಷ 20 ಲಕ್ಷ ಆಮಿಷ ನನಗೆ ನೀಡಲಾಗಿತ್ತು. ನನ್ನ ಮನೆಯಲ್ಲಿ ಆರಂಭದಲ್ಲಿ ಇದಕ್ಕೆ ಅಷ್ಟಾಗಿ ಬೆಂಬಲ ಸಿಕ್ಕಿಲ್ಲ. ಈಗ ಅವರೆಲ್ಲ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ಹೇಳುತ್ತಿದ್ದಾರೆ.

ಹಾಗೆನೇ ನನಗೂ ಆರೋಗ್ಯದಲ್ಲಿ ಏರುಪೇರಾಗಿದೆ. ನರಗಳು ಹಿಡಿದುಕೊಂಡ ರೀತಿ ಆಗುತ್ತಿದೆ. ನಾನು ಪ್ರತಿಮಾಳ ಮನೆಯಲ್ಲಿ ಒಂದೆರಡು ಬಾರಿ ಊಟ ಮಾಡಿದ್ದೇನೆ. ಆಕೆ ನನಗೂ ವಿಷ ಹಾಕಿರುವ ಸಂಶಯವಿದೆ ಎಂದು ಸಹೋದರ ಸಂದೀಪ್‌ ಪೂಜಾರಿ ಬಹಿರಂಗಪಡಿಸಿದರು.

ಡಿವೈಎಸ್ಪಿ ನನ್ನನ್ನು ಕಚೇರಿಗೆ ಕರೆಸಿ, ತನಿಖೆ ಪಾರದರ್ಶಕವಾಗಿ ನಡೆಸಿ ಆರೋಪಿಗಳಿಗೆ ಖಂಡಿತ ಜೀವಾವಧಿ ಶಿಕ್ಷೆ ಆಗುತ್ತದೆ ಎನ್ನುವ ಭರವಸೆಯನ್ನು ನೀಡಿದ್ದಾರೆ ಎಂದರು.

Leave A Reply

Your email address will not be published.