Importance of Grass: ಭೂಮಿಯ ಆರೋಗ್ಯಕ್ಕೆ ಷಡ್ರಸ ಭೋಜನಾ ವ್ಯವಸ್ಥೆಯೇ ಹುಲ್ಲು: ಹುಲ್ಲನ್ನು ವಿಷ ಹೊಡೆದು ನಾಶ ಮಾಡದಿರಿ!

Importance of Grass: ಭೂಮಿ(Earth) ತನ್ನ ಸವಕಳಿಯ ರಕ್ಷಣೆಗಾಗಿ, ಮಣ್ಣಿನ ಫಲವತ್ತತೆಯನ್ನು(Soil fertility) ಹೆಚ್ಚಿಸುದಕ್ಕಾಗಿ, ಸೂರ್ಯನ ಪ್ರಖರ(Sun rays) ಕಿರಣಗಳಿಂದ ರಕ್ಷಿಸುವುದಕ್ಕಾಗಿ, ನೀರಾವಿಯನ್ನು ತಡೆಗಟ್ಟುವುದಕ್ಕಾಗಿ, ಕೋಟ್ಯಾಂತರ ಸೂಕ್ಷ್ಮ ಜೀವಿಗಳ ಆವಾಸಕ್ಕಾಗಿ ನಿರ್ಮಿಸುವ ವ್ಯವಸ್ಥೆಯೇ ಹುಲ್ಲು(Grass).

ಒಂದೇ ಮಣ್ಣು ಒಂದೇ ನೀರು ಕುಡಿದರೂ, ಬೆಳೆಯುವ ಸಸ್ಯ ವೈವಿಧ್ಯಗಳು ನೂರಾರು ಮತ್ತು ಸಸ್ಯದ ವಾಸನೆ ರುಚಿ ಎಲ್ಲವೂ ನೂರಾರು. ನಮ್ಮ ಶರೀರಕ್ಕೆ ಷಡ್ರಸ ಭೋಜನವು ಎಷ್ಟು ಅಗತ್ಯವೋ, ಅಂತೆಯೇ ಭೂಮಿಯ ಆರೋಗ್ಯಕ್ಕೆ ಷಡ್ರಸ ಭೋಜನಾ ವ್ಯವಸ್ಥೆಯೇ ಹುಲ್ಲು. ಆ ಹುಲ್ಲನ್ನು ನಾವು ವಿಷ ಹೊಡೆದು ನಾಶ ಮಾಡಿದರೆ, ಭೂಮಿಗೆ ಸಹಜವಾಗಿ ಸಿಗಬೇಕಾದ ಪೋಷಕಾಂಶಗಳನ್ನು ನಾಶ ಮಾಡಿದಂತಲ್ಲವೇ?

ಒಂದು ಇಂಚಿನ ಸಾವಯವ ಇಂಗಾಲಯುಕ್ತ ಮೇಲ್ಮಣ್ಣಿನ ಪದರ ಉಂಟಾಗಬೇಕಾದರೆ ಧಾರಾಳ ಸಾವಯವ ವಸ್ತು ಬಿದ್ದು ಕಳಿತರೆ, ಒಂದು ಸಾವಿರ ವರ್ಷವಾದರೂ ಬೇಕಾಗಬಹುದಂತೆ. ಕೋಟ್ಯಾಂತರ ವರ್ಷಗಳಿಂದ ರಚಿತವಾದ ಭೂಮಿಯನ್ನು ನಮ್ಮ ಸ್ವಾರ್ಥಕ್ಕಾಗಿ, ಕೃಷಿಯ ಸುಲಭಕ್ಕಾಗಿ, ಕಳೆಯೆಂದು ಉದ್ಘೋಷಿಸಿ ನಾಶ ಮಾಡಲು ನಮಗೆ ಹಕ್ಕಿದೆಯೇ? ಪ್ರಕೃತಿ ಸಹಜ ವಿಧಾನದಿಂದ ನಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟು ನಿವಾರಿಸಿಕೊಂಡು ಸಹಜೀವನಕ್ಕೆ ಶರಣು ಹೋಗುವುದು ಲೇಸೆಂಬ ಸಿದ್ಧಾಂತವನ್ನು ಒಪ್ಪಿಕೊಳ್ಳುವುದು ಒಳ್ಳೆಯದು ಎಂಬುದು ನನ್ನ ನಂಬಿಕೆ.

ಅಲ್ಲವಾದರೆ, ಶರೀರದಲ್ಲಿ ಆದ ಗಾಯದ ಮೇಲ್ಪದರವನ್ನು ಕಿತ್ತಾಗ ಆಗುವ ನವೆ, ಉರಿ ಭೂಮಿಗೂ ಆಗಿ ಪ್ರತಿ ರೋಧವನ್ನು ವ್ಯಕ್ತಪಡಿಸೀತು. ಕಳೆಯನ್ನು ಬೆಳೆಸಿ ಮತ್ತೆ ಕತ್ತರಿಸಿ. ಬುಡ ಸಮೇತ ಕಿತ್ತು ಹಾಕುವುದು ಬೇಡ. ಪಾರ್ಕ್ ಗಳಲ್ಲಿ ಇರುವಂತೆ 1 ಇಂಚು ಕಳೆ ಉಳಿಯಲು ಬಿಡಿ. ಸುಲಭವಾಗಿ ಕಳೆ ಕತ್ತರಿಸುವ ಯಂತ್ರಗಳನ್ನು ಬಳಸಿ. ಪದೇ ಪದೇ ಬರುವ ಕಳೆ ನಮಗೆ ಹಸಿರು ಎಲೆ ಗೊಬ್ಬರವಾಗಿ ಭೂಮಿಯಲ್ಲಿ ಸೂಕ್ಷ್ಮದ ಜೀವಾಣುಗಳು ಎರೆಹುಳು ಸಮೃದ್ಧ ವಾಗಿ ಬೆಳೆಯುತ್ತವೆ. ತೋಟದ ಇಳುವರಿಯನ್ನು ಹೆಚ್ಚಿಸುವುದು. ದಯವಿಟ್ಟು ಕಳೆನಾಶಕ ಕ್ರಿಮಿನಾಶಕ ಬಳಕೆ ಬಿಡಿ.

Leave A Reply

Your email address will not be published.