CM Seat: ಕಾಂಗ್ರೆಸ್ ನಲ್ಲಿ ಕುರ್ಚಿ ಲಾಭಿ: ದೇವರ ಮೊರೆ ಹೋದ ಡಿಸಿಎಂ ಡಿಕೆ ಶಿವಕುಮಾರ್
CM Seat: ಮಲ್ಲಿಕಾರ್ಜುನ ಖರ್ಗೆ( Mallikarjuna kharge) – ಸತೀಶ್ ಜಾರಕಿಹೊಳಿ( Sathish jarakiholi) ಭೇಟಿ ಬಳಿಕ ದಲಿತ ಸಿಎಂ(Dalit CM) ಚರ್ಚೆ ಮುನ್ನೆಲೆಗೆ ಬಂದಿದೆ. ಈಗಾಗಲೇ ಕಾಂಗ್ರೆಸ್(Congress) ನಲ್ಲಿ ಸಿಎಂ ಕುರ್ಚಿ ಚರ್ಚೆ ಶುರುವಾಗಿದೆ. ಹೀಗಾಗಿ ಡಿಸಿಎಂ ಡಿಕೆ ಶಿವಕುಮಾರ್(DCM D K Shivakumar)ಅಲರ್ಟ್ ಆಗಿದ್ದಾರೆ. ನಿನ್ನೆ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Kharge) ಅವರನ್ನು ಡಿಸಿಎಂ ಭೇಟಿ ಮಾಡಿದ್ದಾರೆ.
ಇಂದು ಟೆಂಪಲ್ ರನ್ ಶುರು ಮಾಡಿರುವ ಡಿಸಿಎಂ ಡಿಕೆಶಿ, ತಮಿಳುನಾಡಿನ ತಿರುವಣ್ಣಾಮಲೈಗೆ ತೆರಳಿದ್ದಾರೆ. ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳಿರುವ ಡಿಸಿಎಂ ಡಿಕೆ ಶಿವಕುಮಾರ್, ಎಲ್ಲರ ಒಳಿತಿಗಾಗಿ ಅರುಣಾಚಲೇಶ್ವರನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದಿದ್ದಾರೆ.
“ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಮುಂಚಿತವಾಗಿ ಈ ದೇವಾಲಯಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಉತ್ತಮ ಆಡಳಿತ ಮಾಡುವ ಶಕ್ತಿ ದೊರೆಯಲಿ ಮತ್ತು ಸಮೃದ್ಧಿಯಾಗಿ ಮಳೆ ಬೀಳಲಿ ಎಂದು ಪ್ರಾರ್ಥಿಸಿದ್ದೆ. ಈ ಕಾರಣಕ್ಕೆ ಮತ್ತೆ ದೇವರ ದರ್ಶನ ಮಾಡಿದೆ. ಎಲ್ಲರ ಒಳಿತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ತಮಿಳುನಾಡಿನ ತಿರುವಣ್ಣಾಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಗಳಿಗೆ ಪ್ರತಿಕ್ರಿಯೆ ನೀಡಿದರು. “ಈ ದೇವಾಲಯ ಅತ್ಯುತ್ತಮ ವಸ್ತುಶಿಲ್ಪದಿಂದ ಕೂಡಿದ್ದು, ಸುಂದರವಾಗಿದೆ. ನಮ್ಮ ನೆಲದ ಶಿಲ್ಪಿಗಳು ಒಂದು ಸಾವಿರ ವರ್ಷಗಳ ಹಿಂದೆಯೇ ಅದ್ಬುತ ಕೈಚಳಕ ತೋರಿಸಿದ್ದಾರೆ” ಎಂದರು.
“ಕಳೆದ ವರ್ಷಕ್ಕೆ ಹೋಲಿಸಿದರೆ, ದೇವಸ್ಥಾನವನ್ನು ತಮಿಳುನಾಡು ಸರ್ಕಾರ ಅತ್ಯುತ್ತಮವಾಗಿ ಅಭಿವೃದ್ಧಿಗೊಳಿಸಿದೆ. ಇದು ನನಗೆ ಹೆಚ್ಚು ಸಂತೋಷವನ್ನು ನೀಡಿತು” ಎಂದು ಹೇಳಿದರು.