Yaduveer Wadiyar: ಮೈಸೂರು ಅರಮನೆ ಮುಂದೆ ಪಾರಿವಾಳಗಳಿಗೆ ಇನ್ನು ಮುಂದೆ ಆಹಾರ ಹಾಕುವಂತಿಲ್ಲ

Yaduveer Wadiyar: ಅರಮನೆ ಮುಂದೆ ನಿತ್ಯ ಪಾರವಾಳಗಳಿಗೆ ಆಹಾರ ಹಾಕುವುದನ್ನು ನಿಲ್ಲಿಸಲು ಸಾರ್ವಜನಿಕರು ನಿರ್ಧಾರ ಮಾಡಿರುವ ಕುರಿತು ವರದಿಯಾಗಿದೆ. ಮೈಸೂರಿನ ಪಾರಂಪರಿಕ ಕಟ್ಟಡ, ವಾಸ್ತುಶಿಲ್ಪಗಳಿಗೆ ಪಾರಿವಾಳಗಳಿಂದ ಹಾನಿಯಾಗುತ್ತಿರುವ ಕಾರಣ ಅರಮನೆ ಮುಂದೆ ಆಹಾರ ಹಾಕುವ ಪದ್ಧತಿ ಬಂದ್‌ ಮಾಡಲು ನಿರ್ಧಾರ ಮಾಡಲಾಗಿದೆ.

 

ಖಬೂತತ್‌ ದಾನ್‌ ಜೈನ್‌ ಸಂಘಟನೆ, ಸಾರ್ವಜನಿಕರು, ತಜ್ಞರು ಹಾಗೂ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ತೀರ್ಮಾನ ಮಾಡಲಾಗಿದೆ. ಈ ಸಭೆಯಲ್ಲಿ ಪಾರಿವಾಳಗಳಿಗೆ ಆಹಾರ ಮತ್ತು ಕಾಳು ಹಾಕುವುದನ್ನು ನಿಲ್ಲಿಸುವ ಕುರಿತು ತೀರ್ಮಾನ ಮಾಡಲಾಗಿದೆ.

ಪಾರಿವಾಳಗಳ ಇಕ್ಕೆಯಿಂದ ಬಿಡುಗಡೆಯಾಗುವ ಯೂರಿಕ್‌ ಆಸಿಡ್‌ ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗುತ್ತದೆ. ಅರಮನೆಯ ಸುತ್ತಲಿನ ಮಹಾರಾಜರ ಪ್ರತಿಮೆಗಳ ಮೇಲೆ ಕುಳಿತು ಪಾರಿವಾಳ ಇಕ್ಕೆ ಹಾಕುವುದರಿಂದ ಪ್ರತಿಮೆ ದಿನದಿಂದ ದಿನಕ್ಕೆ ಹಾಳಾಗುತ್ತದೆ. ಹುಟ್ಟುಹಬ್ಬ, ವೆಡ್ಡಿಂಗ್‌ ಫೊಟೋಶೂಟ್‌ ಎಂದು ಅರಮನೆ ಮುಂಭಾಗದಲ್ಲಿ ಪಾರವಾಳಗಳಿಗೆ ಯಾರೂ ಆಹಾರ, ಕಾಳುಗಳನ್ನು ಹಾಕುವಂತಿಲ್ಲ ಎಂದು ತೀರ್ಮಾನ ಮಾಡಲಾಗಿದೆ.

Leave A Reply

Your email address will not be published.