D.K: ರಾಜ್ಯ ಮಟ್ಟದ ವಿದ್ಯಾಭಾರತಿ ಕಬ್ಬಡ್ಡಿ ಪಂದ್ಯಾಟ!! ಅಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಆಲಂಕಾರು:ಆಂಧ್ರಪ್ರದೇಶದ ನುಟುಕ್ಕಿಯಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರ (ಝೋನ್ ಲೆವೆಲ್ ) ಮಟ್ಟದ 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕಡಬ ತಾಲೂಕಿನ ಅಲಂಕಾರು ಶ್ರೀ ಭಾರತೀ ಶಾಲಾ ವಿದ್ಯಾರ್ಥಿಗಳ ತಂಡವು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರತಿನಿಧಿಸಿದ ಶ್ರೀ ಭಾರತಿ ಶಾಲಾ ಕಬ್ಬಡ್ಡಿ ಪಟುಗಳಾದ ಭುವಿ ಕುಂಟ್ಯಾನ, ಧನ್ಯಶ್ರೀ ಅರ್ಬಿ,ಜನನಿ ಕುಂಡಾಜೆ, ಶ್ರದ್ಧಾ ಕುಂಟ್ಯಾನ, ಸಾತ್ವಿಕ ಕೆ. ಎಸ್ ಕೆದ್ದೊಟ್ಟೆ, ಧ್ರುವಿ ಬಾಕಿಲ -ಚಾರ್ವಾಕ ,ತೃಷಾ ಕೋಡಂದೂರು-ಚಾರ್ವಾಕ, ಇವರನ್ನು ಒಳಗೊಂಡ ಬಾಲಕಿಯರ ತಂಡ ತೆಲಂಗಾಣ ತಂಡವನ್ನು ಮಣಿಸಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿತು.

ಬಾಲಕರ 14 ರ ವಯೋಮಾನದ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ವಿಶ್ವಾಸ್ ದೇವಾಡಿಗ ಶರವೂರು, ದಿಕ್ಷನ್ ನಡುಮನೆ-ಆಲಂಕಾರು ತಂಡ ಪ್ರಥಮ ಸ್ಥಾನಿಯಾಗಿದ್ದು,
ಬಾಲಕಿಯರ ವಿಭಾಗದ 17ರ ವಯೋಮಾನದ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ವಾತ್ಸಲ್ಯ ಬಿ. ಗೌಡ ಕೊಯಿಲ,ಕೆ.ಭವ್ಯ ಪಲ್ಲತಡ್ಕ, ಇಂಚರ ಎಲ್. ಶೆಟ್ಟಿ ಸುರುಳಿ ಇವರ ತಂಡವು ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿತು.

ರಾಜ್ಯ ಮಟ್ಟದಲ್ಲಿ ಜಯಗಳಿಸಿದ ಎಲ್ಲಾ ಕ್ರೀಡಾಪಟುಗಳು ಅಕ್ಟೋಬರ್ 15 ರಿಂದ 19ರ ತನಕ ಮಧ್ಯಪ್ರದೇಶದ ಹರ್ದಾದಲ್ಲಿ ನಡೆಯಲಿರುವ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಮಾರ್ಗದರ್ಶನದೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಮತ್ತು ತಂಡದ ಕೋಚ್ ಮತ್ತು ಟೀಮ್ ಮೇನೆಜರ್ ಚಂದ್ರಹಾಸ ಕೆ. ಸಿ ಕುಂಟ್ಯಾನ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದು,
ಭಾರತೀ ಕನ್ನಡ ಮಾಧ್ಯಮದ ಮುಖ್ಯಮಾತಾಜಿ ಶ್ರೀಮತಿ ಆಶಾ. ಎಸ್. ರೈ ಮತ್ತು ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಸ್ಥ ರಾದ ಸತೀಶ್ ಕುಮಾರ್ ಜಿ. ಆರ್ ಸೇರಿದಂತೆ ಶಾಲಾ ಶಿಕ್ಷಕವೃಂದ,ಸಿಬ್ಬಂದಿವೃಂದ,ಕ್ರೀಡಾ ಪಾಲಕರು ಸಹಕರಿಸಿದ್ದರು.

Leave A Reply

Your email address will not be published.