Nikhita Vanjara: ಊಟಕ್ಕೆಂದು ಮನೆಗೆ ಬಂದ ಗಂಡನ ಗೆಳೆಯನನ್ನೇ ಪಟಾಯ್ಸಿ, ಆತನಿಂದಲೇ ಗರ್ಭಿಣಿಯಾದ ಖ್ಯಾತ ಕ್ರಿಕೆಟಿಗನ ಹೆಂಡತಿ ಈಕೆ !! ಯಾರದು?
Nikhita Vanjara: ಟೀಂ ಇಂಡಿಯಾದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಆಪತ್ಭಾಂದವನಂತೆ ಅದೆಷ್ಟೋ ಪಂದ್ಯಗಳಲ್ಲಿ ಆಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸ್ವಂತ ಬಲದಿಂದ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ದಿನೇಶ್ ಕಾರ್ತಿಕ್(Dinesh Karthik) ತಮ್ಮ ವೃತ್ತಿಪರ ಜೀವನ ಮಾತ್ರವಲ್ಲದೇ ವೈಯಕ್ತಿಕ ಜೀವನದ ವಿಚಾರವಾಗಿಯೂ ಸುದ್ದಿಯಾಗಿದ್ದರು. ಅಂದರೆ ಅವರ ವೈವಾಹಿಕ ಜೀವನ ಒಂದೊಮ್ಮೆ ಹಳಿ ತಪ್ಪಿದ ರೈಲಿನಂತಾಗಿತ್ತು ಎಂದರೆ ನಂಬೋಕೆ ಸಾಧ್ಯವಾಗುವುದಿಲ್ಲ. ಆದ್ರೆ ಕುತೂಹಲ ಎನಿಸುವ, ಗೊತ್ತಾದರೆ ಮನಸ್ಸಿಗೆ ನೋವಾಗುವ ವಿಚಾವೊಂದು ಇಲ್ಲಿದೆ ನೋಡಿ.
2007 ರಲ್ಲಿ ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದ ಮೂರು ವರ್ಷಗಳ ನಂತರ, ಅವರು ತಮ್ಮ ಬಾಲ್ಯದ ಗೆಳತಿ ನಿಕಿತಾ ವಂಜಾರಾ(Nikhita Vanjara) ಅವರನ್ನು ವಿವಾಹವಾದರು. ಸುಮಾರು 5 ವರ್ಷಗಳ ಕಾಲ ಚೆನ್ನಾಗಿದ್ದ ದಾಂಪತ್ಯ 2012 ರಲ್ಲಿ ವಿಚ್ಛೇದನದ ಮೂಲಕ ಕೊನೆಗೊಂಡಿತು.
ಹೌದು, ದಿನೇಶ್ ಮತ್ತು ನಿಕಿತಾ ಅವರ ದಾಂಪತ್ಯದಲ್ಲಿ ತುಂಬಾ ಸಂತೋಷವಾಗಿದ್ದರು. ಆದರೆ ಈ ಮಧ್ಯೆ ನಿಕಿತಾ, ದಿನೇಶ್ ಸಹ ಆಟಗಾರ ಮುರಳಿ ವಿಜಯ್ ಅವರನ್ನು ಭೇಟಿಯಾದರು.. ಅಲ್ಲಿಂದ ಇಬ್ಬರು ಆತ್ಮೀಯರಾಗಿ ಇಬ್ಬರಿಗೂ ಸಂಬಂಧ ಶುರುವಾಯಿತು. ಈ ವಿಷಯ ತಿಳಿದ ದಿನೇಶ್ ಕಾರ್ತಿಕ್ ತಕ್ಷಣ 2012ರಲ್ಲಿ ನಿಕಿತಾಗೆ ವಿಚ್ಛೇದನ ನೀಡಿದ್ದರು.
ಅಷ್ಟಕ್ಕೂ ಆಗಿದ್ದೇನು?
ಐಪಿಎಲ್ ಸಮಯದಲ್ಲಿ ಭೇಟಿಯಾದ ನಂತರ ನಿಕಿತಾ ಮತ್ತು ವಿಜಯ್ ಉತ್ತಮ ಸ್ನೇಹಿತರಾಗಿದ್ದರು. ಇಬ್ಬರೂ ಪರಸ್ಪರರ ಒಡನಾಟವನ್ನು ಇಷ್ಟಪಡಲಾರಂಭಿಸಿದರು. ಈ ವಿಷಯ ತಿಳಿದ ಕಾರ್ತಿಕ್ ತೀವ್ರ ಆಘಾತಕ್ಕೊಳಗಾದರು. ವಿಜಯ್ ಮತ್ತು ನಿಕಿತಾ ಅವರ ಅನೈತಿಕ ಸಂಬಂಧ ಕಾರ್ತಿಕ್ ಗೆ ತಿಳಿದ ತಕ್ಷಣ, ಅವರು ವಿಚ್ಛೇದನ ನೀಡಿದರು. ವಿಚ್ಛೇದನದ ಸಮಯದಲ್ಲಿ ನಿಕಿತಾ ತಾಯಿಯಾಗಲಿದ್ದಾರೆ ಎಂದು ತಿಳಿದುಬಂತು. ಇದಾದ ನಂತರ ಆಕೆ ತಕ್ಷಣ ವಿಜಯ್ ನನ್ನು ಮದುವೆಯಾದಳು. ಮಾಧ್ಯಮ ವರದಿಗಳನ್ನು ನಂಬುವುದಾದರೆ, ಈ ಘಟನೆಯ ನಂತರ ವಿಜಯ್ ಮತ್ತು ಕಾರ್ತಿಕ್ ನಡುವೆ ಸಾಕಷ್ಟು ಜಗಳ ನಡೆದಿತ್ತು. ಇಂತಹ ಘಟನೆ ದಿನೇಶ್ ಬದುಕಿನಲ್ಲಾದಾಗ ಬಹಳ ಕುಗ್ಗಿದ್ದರು. ಆದರೆ ಎರಡು ವರ್ಷಗಳ ನಂತರ ಆಗಸ್ಟ್ 2015 ರಲ್ಲಿ ಅಂತರರಾಷ್ಟ್ರೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ದಿನೇಶ್ ವಿವಾಹವಾದರು.