Pro kabaddi 11: ಈ ಬಾರಿಯ ಮೂವರು ದುಬಾರಿ ಆಟಗಾರರು

Pro kabaddi 11: ಕಬಡ್ಡಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳ ವಯಸ್ಸಿನಿಂದ ಹಿಡಿದು ವಯೋ ವೃದ್ಧರ ತನಕ ಎಲ್ಲರೂ ಆಟವಾಡಿ ತಿಳಿದಿರುವ ಗಂಡುಗಲಿಗಳ ಕ್ರೀಡೆ. ಯಾವುದೇ ಹಬ್ಬ ಹರಿದಿನಗಳ ಸಮಯದಲ್ಲಿ ನಡೆಸುವ ಕ್ರೀಡಾ ಸ್ಪರ್ಧೆಗಳಲ್ಲಿ ಕಬಡ್ಡಿಗೆ ತನ್ನದೇ ಆದ ಸ್ಥಾನಮಾನವಿದೆ. ಈ ಗ್ರಾಮೀಣ ಕ್ರೀಡೆ ಈಗ ಜಾಗತಿಕವಾಗಿ ಹೊರಹೊಮ್ಮಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಕಳೆದ 11 ವರ್ಷಗಳಿಂದ ನಡೆದು ಬರುತ್ತಿರುವ ಪ್ರೊ ಕಬಡ್ಡಿ ಲೀಗ್ ಈ ಬಾರಿಯೂ ಜನರ ಉತ್ಸಾಹಕತೆಗೆ ಸಾಕ್ಷಿಯಾಗಿದೆ. ಪ್ರೊ ಕಬಡ್ಡಿ ಸೀಸನ್ 11 ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದ್ದು, ಈ ಸಲ ಮೂರು ಮಂದಿ ಆಟಗಾರರು ಅತ್ಯಂತ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದಾರೆ. ಹಾಗಾದ್ರೆ ಯಾರು ಆ ದುಬಾರಿ ಆಟಗಾರರು ?

 

ಅಕ್ಟೋಬರ್ 5 ರಿಂದ ಶುರುವಾಗಲಿರುವ ಪ್ರೊ ಕಬಡ್ಡಿ ಪಂದ್ಯಾಟದ ಮೊದಲ ಪಂದ್ಯ ಬೆಂಗಳೂರು ಬುಲ್ಸ್ ವಿರುದ್ಧವಾಗಿ ತಮಿಳ್ ತಲೈವಾಸ್ ನೊಂದಿಗೆ ನಡೆಯಲಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಒಟ್ಟು ಎಂಟು ಆಟಗಾರರು ಒಂದು ಕೋಟಿ ದಾಟಿದ ಅಂಕಗಳನ್ನು ಪಡೆದುಕೊಂಡಿದ್ದಾರೆ. ಇವರುಗಳಲ್ಲಿ ಮೊದಲನೇ ಪಟ್ಟಿಯಲ್ಲಿ

1. ಸಚಿನ್ ತನ್ವರ್ – 2.15 ಕೋಟಿ
ಸಚಿನ್ ತನ್ವರ್ PKL season 11 ರ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ತಮಿಳ್ ತಲೈವಾಸ್ ತಂಡವು 2.15 ಕೋಟಿ ರೂಪಾಯಿಗಳೊಂದಿಗೆ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಸಚಿನ್ ಸೀಸನ್ 5ರಲ್ಲಿ ಪ್ರೊ ಕಬಡ್ಡಿ ಪ್ರವೇಶಿಸಿದ್ದು, ಗುಜರಾತ್ ಜಿಟ್ಸ್ ತಂಡದೊಂದಿಗೆ ಆಟ ಶುರು ಮಾಡಿದ್ದರು. ಮೊದಲ ಸೀಸನ್ ನಲ್ಲೇ 159 ರೈಡ್ ಪಾಯಿಂಟ್ ಗಳೊಂದಿಗೆ ತಮ್ಮ ಯಶಸ್ಸನ್ನು ಕಂಡುಕೊಂಡರು. ಅದೇ ರೀತಿ ಸೀಸನ್ 6ರಲ್ಲಿ 190 ರೈಡ್ ಪಾಯಿಂಟ್ ಗಳೊಂದಿಗೆ ಹೊರ ಹೊಮ್ಮಿದರು.
ಸೀಸನ್ 7 ರಲ್ಲಿ ಸ್ವಲ್ಪ ಕಳಪೆ ಮಟ್ಟಕ್ಕೆ ಇವರ ಆಟ ಸಾಗಿ ಕೇವಲ 84 ರೈಡ್ ಪಾಯಿಂಟ್ ಗಳಿಗೆ ನಿಂತಿತು. ಸೀಸನ್ 8 ರಲ್ಲಿ ಪಾಟ್ನಾ ಪೈರೆಟ್ಸ್ ತಂಡಕ್ಕೆ ಆಯ್ಕೆಯಾದ ಸಚಿನ್ ಕಳೆದ ಸೀಸನ್ ನ ಅಂಕವನ್ನು ಬಡ್ಡಿ ಸಮೇತ ಸರಿದೂಗಿಸಿದರು. ಸೀಸನ್ ಒಂಬತ್ತು ಮತ್ತು ಹತ್ತರಲ್ಲಿ 176 ಮತ್ತು 171 ಅಂಕಗಳೊಂದಿಗೆ ಪ್ರಮುಖ ಆಟಗಾರರಲ್ಲಿ ಒಬ್ಬರಾದರು.

2. ಮೊಹಮ್ಮದ್ ರೆಝ ಷಡಲೋಯ್ ಚಿಯನೇ – 2.07 ಕೋಟಿ
ಮೂಲತಃ ಇರಾನ್ ದೇಶದ ಆಲ್ ರೌಂಡರ್ ಆಟಗಾರ ಚಿಯಾನೇ PKL 2024 ನ ಎರಡನೇ ದುಬಾರಿ ಆಟಗಾರರಾಗಿದ್ದಾರೆ. ಹರ್ಯಾಣ ಸ್ಟೀಲರ್ಸ್ ಇವರನ್ನು 2.07 ಕೋಟಿಗೆ ತಮ್ಮ ತಂಡಕ್ಕೆ ಪಡೆದಿದ್ದಾರೆ.ಸೀಸನ್ 8ರಲ್ಲಿ ಪಟ್ನಾ ಪೈರೆಟ್ಸ್ ನೊಂದಿಗೆ ಶುರುವಾದ ಪ್ರೊ ಕಬಡ್ಡಿ ಪಯಣದಲ್ಲಿ 89 ಟ್ಯಾಕ್ಲ್ ಅಂಕ ಮತ್ತು 5 ರೈಡ್ ಪಾಯಿಂಟ್ ಗಳೊಂದಿಗೆ ಮೊದಲ ಸೀಸನ್ ಮುಕ್ತಾಯಗೊಳಿಸಿದರು. ಸೀಸನ್ 9 ರಲ್ಲಿ 84 ಟಾಕ್ಲ್ ಪಾಯಿಂಟ್ ಮತ್ತು 5 ರೈಡ್ ಪಾಯಿಂಟ್ ಗಳನ್ನು ಗಳಿಸಿದರು. 10ನೇ ಸೀಸನ್ ನಲ್ಲಿ 99 ಟಾಕ್ಲ್ ಮತ್ತು 27 ರೈಡ್ ಪಾಯಿಂಟ್ಸ್ ನೊಂದಿಗೆ ಉತ್ತಮ ರಕ್ಷಣಾ ಆಟಗಾರ ಎನಿಸಿಕೊಂಡರು.

3. ಗುಮನ್ ಸಿಂಗ್ – 1.97 ಕೋಟಿ
ಗುಮನ್ ಸಿಂಗ್ PKL 11 ರ ಇನ್ನೊರ್ವ ದುಬಾರಿ ಆಟಗಾರರಾಗಿದ್ದಾರೆ. ಇವರನ್ನು ಗುಜರಾತ್ ಜಿಟ್ಸ್ 1.97 ಕೋಟಿ ಕೊಟ್ಟು ತಮ್ಮತ್ತ ಪಡೆದುಕೊಂಡಿದೆ. ಇವರ ಸಾಧನೆಯನ್ನು ನೋಡುವುದಾದರೆ
ಸೀಸನ್ 7ರಲ್ಲಿ 5 ರೈಡ್ ಪಾಯಿಂಟ್,
ಸೀಸನ್ 8 ರಲ್ಲಿ 95 ರೈಡ್, ಪಾಯಿಂಟ್ 2 ಟ್ಯಾಕ್ಲ್ ಪಾಯಿಂಟ್, ಸೀಸನ್ 9 ರಲ್ಲಿ 137 ರೈಡ್ ಪಾಯಿಂಟ್ಸ್, ಸೀಸನ್ 10ರಲ್ಲಿ 163 ರೈಡ್ ಪಾಯಿಂಟ್ ಮತ್ತು 5 ಟ್ಯಾಕ್ಲ್ ಪಾಯಿಂಟ್ ನೊಂದಿಗೆ ಉತ್ತಮ ಆಟಗಾರರಾಗಿದ್ದಾರೆ.

Leave A Reply

Your email address will not be published.