Renukaswamy ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ಕೊಂದಿದ್ದು ದರ್ಶನ್ ಅಲ್ಲ, ಬಿಜೆಪಿಯ ಈ ಶಾಸಕರ… ?!
Renukaswamy ಹತ್ಯೆ ಪ್ರಕರಣದ ವಿಚಾರವಾಗಿ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಪೋಲಿಸರು ಕೋರ್ಟ್ ಗೆ 4 ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಭಯಾನಕ ವಿಚಾರಗಳು ಹೊರಬೀಳುತ್ತಿವೆ. ಆದರೀಗ ಈ ಕೇಸಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ದರ್ಶನ್ ಅಭಿಮಾನಿಗಳಿಗೆ ಖುಷಿ ನೀಡಿದೆ.
ಹೌದು, ರೇಣುಕಾಸ್ವಾಮಿ(Renukaswamy) ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಭರ್ಜರಿ & ಸಂಚಲನ ಸೃಷ್ಟಿಸುವ ಸುದ್ದಿ ಸಿಕ್ಕಿದೆ. ಅದೇನೆಂದರೆ ಈಗ ರೇಣುಕಾಸ್ವಾಮಿ ಕೊಲೆ ಮಾಡಿದ್ದು ದರ್ಶನ್(Darshan) ತೂಗುದೀಪ್ ಅಲ್ಲ, ಬದಲಾಗಿ ಬೆಂಗಳೂರಿನ ಶಾಸಕರ ಸಂಬಂಧಿಯೋ…? ಎಂಬುದು.
ಏನಿದು ಹೊಸ ಟ್ವಿಸ್ಟ್?
ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಸಹೋದರಿ ಮಗನನ್ನ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎಳೆದು ತರಲಾಗಿದೆ. ಹೌದು ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬ ವ್ಯಕ್ತಿ ಇದೀಗ ಈ ಕುರಿತು ಸ್ಫೋಟಕ ಆರೋಪ ಮಾಡಿದ್ದಾರೆ.
ಚಲುವರಾಜು ಅವರು ಮುನಿರತ್ನ ನಾಯ್ಡು(MLA Muniratna Naidu) ವಿರುದ್ಧ ಲಂಚ ಆರೋಪ ಮಾಡಿದ್ದು, ಲಂಚ ಕೊಡದೆ ಇದ್ರೆ ನಿನ್ನ ಕಥೆಯನ್ನು ಕೂಡ ರೇಣುಕಾಸ್ವಾಮಿ ರೀತಿ ಮುಗಿಸಿ ಹಾಕುತ್ತೇವೆ ಎಂದು ಶಾಸಕ ಮುನಿರತ್ನ ನಾಯ್ಡು ಆಪ್ತ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾನೆ. ಈ ಮೂಲಕ, ರೇಣುಕಾಸ್ವಾಮಿ ಕೊಲೆ ಮಾಡಿದ್ದು ನಟ ದರ್ಶನ್ ಅಲ್ವಾ? ಶಾಸಕ ಮುನಿರತ್ನ ನಾಯ್ಡು ಅವರ ತಂಗಿಯ ಮಗನ ? ಎಂಬ ಗುಸು ಗುಸು ಶುರುವಾಗಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಆಪ್ತ ಬೆದರಿಕೆ ಹಾಕಿದ ಆರೋಪದ ಸಮಯದಲ್ಲೇ, ರೇಣುಕಾಸ್ವಾಮಿ ಕಥೆ ಮುಗಿಸಿದ್ದು ಶಾಸಕ ಮುನಿರತ್ನ ನಾಯ್ಡು ತಂಗಿಯ ಮಗ ಎಂಬ ವಿಚಾರವನ್ನು ಕೂಡ ಶಾಸಕ ಮುನಿರತ್ನ ನಾಯ್ಡು ಆಪ್ತ ಹೇಳಿದ್ದಾನೆ ಎಂದು ಆರೋಪ ಮಾಡಲಾಗಿದೆ. ಈ ಮೂಲಕ ರೇಣುಕಾಸ್ವಾಮಿ ಕೇಸ್‌ಗೆ ಟ್ವಿಸ್ಟ್ ಸಿಗುತ್ತಿದೆ ಎನ್ನಲಾಗಿದೆ.