Varun Aradhya: ಖಾಸಗಿ ವಿಡಿಯೋ ಇಟ್ಕೊಂಡು ಮಾಜಿ ಪ್ರಿಯತಮೆಗೆ ಬ್ಲಾಕ್ಮೇಲ್ – ನಟ, ರೀಲ್ಸ್ ಸ್ಟಾರ್ ವರುಣ್ ಆರಾಧ್ಯ ವಿರುದ್ಧ FIR

Share the Article

Varun Aradahya: ನಟ ಹಾಗೂ ರೀಲ್ಸ್ ಸ್ಟಾರ್ ಆಗಿರೋ ವರುಣ್ ಆರಾಧ್ಯ(Varun Aradhya) ತನ್ನ ಮಾಜಿ ಪ್ರಿಯತಮೆಯ ಖಾಸಗಿ ಪೊಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಜೀವ ಬೆದರಿಕೆ ಹಾಕಿದ್ದಾನೆಂದು ಆತನ ವಿರುದ್ಧ ದೂರು ದಾಖಲಾಗಿದೆ.

ಹೌದು, ಕನ್ನಡದ ಬೃಂದಾವನ ಧಾರಾವಾಹಿಯ(Brundavana Serial) ನಟ ವರುಣ್ ಆರಾಧ್ಯ ಮಾಜಿ ಪ್ರಿಯತಮೆಗೆ ನಿನ್ನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಯುವತಿ ಜೊತೆ ಎಂಗೇಜ್ ಆಗಿದ್ದಾಗಲೇ ಬೇರೆ ಅವರೊಂದಿಗೆ ವರುಣ್ ಅಫೇರ್ ಹೊಂದಿದ್ದರು. ಅದನ್ನು ಪ್ರಶ್ನಿಸಿದ ಯುವತಿಗೆ ಖಾಸಗಿ ಫೋಟೋ, ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ವರುಣ್ ಬೆದರಿಸಿದ್ದ. ಅಲ್ಲದೆ ಈಗ ಮುಂದೆ ಬೇರೆಯವರನ್ನು ಮದುವೆಯಾದರೆ, ಅವನನ್ನು ಸಾಯಿಸಿ ನಿನ್ನನ್ನು ಸಾಯಿಸುತ್ತೇನೆ ಬೆದರಿಸಿದ್ದಾನೆ. ವಾಟ್ಸ್‌ಆಪ್‌ಗೆ ಖಾಸಗಿ ಫೋಟೋ ಕಳುಹಿಸಿ ಅವಾಚ್ಯ ಪದಗಳಿಂದ ವರುಣ್‌ ನಿಂದಿಸಿರೋದಾಗಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ?
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬೃಂದಾವನ ಧಾರಾವಾಹಿಯಲ್ಲಿ ವರುಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ. 2019 ರಿಂದ ಪ್ರೇಮಿಗಳಾಗಿದ್ದ ವರುಣ್ ಆರಾಧ್ಯ ಜೋಡಿ ರೀಲ್ಸ್ ನಲ್ಲಿ ಸಾಕಷ್ಟು ಫೇಮಸ್ ಆಗಿತ್ತು. ಇನ್ನೂ ಈ ವರುಣ್ ಇಬ್ಬರು ಸಲುಗೆಯಿಂದ ಇದ್ದಾಗ ಖಾಸಗಿ ಪೋಟೋ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದನಂತೆ. ಲವ್ ನಲ್ಲಿ ಎಲ್ಲಾ ಚೆನ್ನಾಗಿದ್ದಾಗ ಈ ವರುಣ್ ಕಳೆದ ವರ್ಷ ಬೇರೆ ಯುವತಿಯ ಖಾಸಗಿ ಫೋಟೋ, ವಿಡಿಯೋಗಳನ್ನು ತನ್ನ ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದನಂತೆ. ಮೊಬೈಲ್ ನಲ್ಲಿ ಮಾಜಿ ಪ್ರೇಯಸಿ ಇದು ಯಾರ ಫೋಟೋಗಳು ಎಂದು ಪ್ರಶ್ನೆ ಮಾಡಿದಾಗ ವರುಣ್ ಆರಾಧ್ಯ ಬೆದರಿಕೆ ಹಾಕಿದ್ದಾನಂತೆ.

ಈ ಬಗ್ಗೆ ಯಾರ ಬಳಿಯಾದ್ರು ಹೇಳಿದ್ರೆ ನಿನ್ನ ಖಾಸಗಿ ಫೋಟೋ, ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸಹ ಹರಿಬಿಡುವುದಾಗಿ ಬೆದರಿಸಿದ್ದಾನೆ. ಇದರಿಂದ ನೊಂದ ಯುವತಿ ದೂರು ದಾಖಲಿಸಾದ್ದಾಳೆ.

Leave A Reply

Your email address will not be published.