Actor Darshan: ಶಂಕಿತ ಉಗ್ರನಂತೆ ನಟನ ಪರಿಸ್ಥಿತಿ! ತಲೆಕೆಟ್ಟ ದರ್ಶನ್ ಜೈಲಿನಲ್ಲಿ ಟಿವಿ ಯನ್ನು ಬಿಟ್ಟಿಲ್ಲ!

Actor darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ (Actor darshan) ಪರಪ್ಪನ ಜೈಲಿನಿಂದ ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಲಾಗಿದೆ.
ಹೌದು, ಈಗಾಗಲೇ ಬಳ್ಳಾರಿ ಜೈಲಿನಲ್ಲಿ ದರ್ಶನ್ ರನ್ನು ವಿಐಪಿ ಸೆಲ್ ನಲ್ಲಿರಿಸಿದ್ದು, ಏಕಾಂಗಿಯಾಗಿ ವಿಶೇಷ ಸೆಲ್ ನಲ್ಲಿ ಶಂಕಿತ ಉಗ್ರನಿಗೆ ನೀಡುವ ಕಟ್ಟು ನಿಟ್ಟಿನ ನಿಯಮದಲ್ಲಿ ಯಾವುದೇ ಐಷಾರಾಮಿ ಸವಲತ್ತು ನೀಡದಂತೆ ನಿಗಾ ವಹಿಸಲಾಗಿದೆ. ಆದ್ರೆ ದರ್ಶನ್ ಮನವಿಗೆ ಟಿವಿ ಒಂದನ್ನು ಫಿಕ್ಸ್ ಮಾಡಿಕೊಡಲಾಗಿತ್ತು. ಆದ್ರೆ ಟಿವಿ ನೋಡಿದ ದರ್ಶನ್ ಏಕಯೇಕಿ ಟಿವಿ ಬೇಡ ಎಂದಿದ್ದಾರೆ.
ಯಾಕೆಂದರೆ ಚಾರ್ಜ್ ಶೀಟ್ ವಿವರಗಳನ್ನು ದರ್ಶನ್ ಟಿವಿಯಲ್ಲೇ ನೋಡಿಕೊಳ್ಳುತ್ತಿದ್ದರು. ಇದೀಗ ಚಾರ್ಜ್ ಶೀಟ್ ನಲ್ಲಿ ತಮ್ಮ ವಿರುದ್ಧ ಬಂದಿರುವ ವಿವರಗಳನ್ನು ನೋಡಿ ಬೇಸರಗೊಂಡು, ಟಿವಿಯೇ ಬೇಡ, ತೆಗೆದುಕೊಂಡು ಹೋಗಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಜೊತೆಗೆ ಪತ್ನಿಗೆ ಕರೆ ಮಾಡಿರುವ ದರ್ಶನ್ ಜೈಲಿಗೆ ಬರಲು ಮನವಿ ಮಾಡಿದ್ದಾರೆ. ನಾಳೆ ಮತ್ತೆ ಅವರ ನ್ಯಾಯಾಂಗ ಬಂಧನ ಅವಧಿ ಮುಗಿಯಲಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಪತ್ನಿಯ ಜೊತೆ ಮಾತುಕತೆ ನಡೆಸಲಿದ್ದಾರೆ.