Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ಚಾರ್ಜ್‌ಶೀಟ್ ಮಾಹಿತಿ ಪ್ರಸಾರ ಮಾಡದಂತೆ ನಿರ್ಬಂಧ ಕೋರಿ ಕೋರ್ಟ್ ಮೆಟ್ಟಿಲೇರಿದ ದರ್ಶನ್
Darshan: ನಟ ದರ್ಶನ್ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಇದರಲ್ಲಿರುವ ವಿಚಾರ ಸಂಬಂಧ ಮಾಧ್ಯಮಗಳು ಪ್ರಸಾರಮಾಡಿ ವರದಿ ಬಿಡುಗಡೆ ಮಾಡುತ್ತಲೇ ಇದೆ. ರೇಣುಕಾಸ್ವಾಮಿ ಕೊಲೆ ಆರೋಪದ ವಿಷಯದಲ್ಲಿ ದರ್ಶನ್ ಅವರ ಕ್ರೌರ್ಯ ಯಾವ ರೀತಿಯಲ್ಲಿ ಇತ್ತು ಎನ್ನುವುದನ್ನು ವಿವರಿಸಲಾಗುತ್ತಿದೆ. ಇದಕ್ಕೆ ನಿರ್ಬಂಧ ಕೋರಿ ಕೊಲೆ ಆರೋಪಿ ದರ್ಶನ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ವಿಚಾರವಾಗಿ ದರ್ಶನ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಚಾರ್ಜ್‌ಶೀಟ್‌ನಲ್ಲಿ ದರ್ಶನ್ ಅವರು ಏನು ಮಾಡಿದ್ದರು ಎನ್ನುವುದರ ಮಾಹಿತಿ ಇದೆ. ರೇಣುಕಾಸ್ವಾಮಿಗೆ ಕೊಟ್ಟ ಚಿತ್ರಹಿಂಸೆಗಳ ಕುರಿತು ವಿವರಣೆ ನೀಡಲಾಗಿತ್ತು. ಇವುಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೇರಿ ದರ್ಶನ್ ಕೋರ್ಟ್ ಮೊರೆ ಹೋಗಿದ್ದಾರೆ.
ದರ್ಶನ್ ಇತ್ತೀಚೆಗೆ ತಮಗೆ ಟಿವಿ ಬೇಕೆಂದು ಬೇಡಿಕೆ ಇಟ್ಟಿದ್ದು, ನಿಯಮದಂತೆ ಟಿವಿ ನೀಡಲಾಗಿದೆ. ಟಿವಿ ವೀಕ್ಷಣೆ ಮಾಡಿದ ಬಳಿಕ ಈ ನಿರ್ಧಾರ ಮಾಡಲಾಗಿದೆಯೇ ಎನ್ನುವ ಪ್ರಶ್ನೆ ಇದೆ. ದರ್ಶಣ್ ರೇಣುಕಾಸ್ವಾಮಿಗೆ ಮಾಂಸದೂಟ ತಿನ್ನಿಸಿದ್ದು, ಎದೆಗೆ ಒದ್ದಿದ್ದು, ಖಾಸಗಿ ಭಾಗಕ್ಕೆ ಒದ್ದಿದ್ದರ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಆಗಿದೆ. ಈ ವಿಚಾರ ಗಮನಿಸಿಯೋ ಏನೋ ದರ್ಶನ್ ನಿರ್ಬಂಧಕ್ಕಾಗಿ ಕೋರಿರಬಹುದು ಎನ್ನಲಾಗಿದೆ.