Renukaswamy: ರೇಣುಕಾಸ್ವಾಮಿಗೆ ಒಂಟಿ ವೃಷಣ; ತನಿಖೆಯಲ್ಲಿ ಬಯಲು
Renukaswamy : ನಟ ದರ್ಶನ್ ಹಾಗೂ ಗ್ಯಾಂಗ್ ನಡೆಸಿದ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ನಂತರ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾದ ಕೆಲವೊಂದು ಶಾಕಿಂಗ್ ನ್ಯೂಸ್‌ಗಳು ಕೂಡಾ ಹೊರಬಿದ್ದಿದೆ. ಕೊಲೆಯಾದ ರೇಣುಕಾಸ್ವಾಮಿ ಪವಿತ್ರ ಗೌಡ ನಡುವೆ ನಡೆದಿರುವ ಮೆಸೇಜ್ ಕುರಿತು ಹಲವು ಮಾಹಿತಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಈ ತನಿಖೆಯಲ್ಲಿ ಮತ್ತೊಂದು ಮಾಹಿತಿ ಬಯಲಾಗಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ವರದಿ ಮಾಡಿರುವ ಪ್ರಕಾರ, ರೇಣುಕಾಸ್ವಾಮಿ ಹುಟ್ಟಿನಿಂದಲೇ ಒಂಟಿ ವೃಷಣವನ್ನು ಹೊಂದಿದ್ದು, ಈ ಮೂಲಕ ವೈಕಲ್ಯ ಹೊಂದಿರುವ ಮಾಹಿತಿ ಬಯಲಾಗಿದೆ ಎಂದು ವರದಿ ಮಾಡಲಾಗಿದೆ.
ರೇಣುಕಾಸ್ವಾಮಿ ಹುಟ್ಟಿನಿಂದಲೇ ಅಂಗಾಂಗ ವೈಕಲ್ಯ ಹೊಂದಿದ್ದಾಗಿ ಇವರ ತಾಯಿ ಕೂಡಾ ದೃಢ ಪಡಿಸಿದ್ದಾಗಿ ಮಾಧ್ಯಮ ವರದಿ ಮಾಡಿದೆ. ಹಾಗೆನೇ ಈ ಕುರಿತು ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಈ ಮಾಹಿತಿ ಬಯಲಾಗಿದೆ. ಸಿಂಗಲ್ ಟೆಸ್ಟಿಕಲ್ ಬೇಬಿ ಆಗಿ ರೇಣುಕಾಸ್ವಾಮಿ ಹುಟ್ಟಿದ್ದರು ಎಂದು ಏಷ್ಯಾನೆಟ್ ವರದಿ ಮಾಡಿದೆ.
ಒಂಟಿ ವೃಷಣ ಹೊಂದಿರುವ ವ್ಯಕ್ತಿಗಳಲ್ಲಿ ಈ ಲೈಂಗಿಕ ಬಯಕೆ ಹೆಚ್ಚು, ಕಡಿಮೆ ಎನ್ನುವುದು ಇರಲ್ಲ. ಹಾಗೆ ನೋಡಿದರೆ ಲೈಂಗಿಕ ಬಯಕೆಯ ವಿಷಯದಲ್ಲಿ ವೃಷ್ಣದ ಪಾತ್ರ ಇಲ್ಲ. ಇದು ತಜ್ಞರ ಮಾತು. ಈ ರೀತಿಯ ಅಂಗಾಂಗ ವೈಕಲ್ಯ ಕೆಲವರಲ್ಲಿ ಹುಟ್ಟಿದಾಗ ಕಾಣಿಸುತ್ತದೆ. ಮೂರರಿಂದ ನಾಲ್ಕು ತಿಂಗಳ ಒಳಗಿನ ಮಗುವಿನಲ್ಲಿ ಈ ರೀತಿಯ ಸಮಸ್ಯೆ ಇದ್ದರೆ ಭವಿಷ್ಯದಲ್ಲಿ ಇದರು ಸಮಸ್ಯೆ ಉಂಟಾಗುವುದಿಲ್ಲ. ಆದರೆ ನಾಲ್ಕು ತಿಂಗಳ ಬಳಿಕ ಭಾಗಶಃ ಒಂಟಿ ವೃಷಣ ಸಮಸ್ಯೆಗಳು ಸರಿ ಹೋಗದೇ ಇದ್ದಲ್ಲಿ ಇದು ಶಾಶ್ವತ ಸಮಸ್ಯೆಯಾಗಲಿದೆ ಎಂದು ಹೇಳಲಾಗಿದೆ.
ಒಂಟಿ ವೃಷಣದಿಂದ ವೃಷಣ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಆರೋಗ್ಯಕರ ವೀರ್ಯ ಸೃಷ್ಟಿಯೂ ಕಾಣಸಿಗುತ್ತದೆ.