Malayalam Actor Nivin Paul: ಪ್ರೇಮಂ ನಟ ನಿವಿನ್‌ “ಪೋಲಿ”ಯಾಟ; ದುಬೈನಲ್ಲಿ ಅಂದೇನಾಯ್ತು? ಮಹಿಳೆ ದೂರಿನಲ್ಲಿ ಹೇಳಿದ್ದೇನು?

Malayalam Actor Nivin Paul: ಮಲಯಾಳಂ ಚಿತ್ರರಂಗದಲ್ಲಿ ಮೀ ಟೂ ಪ್ರಕರಣ ಸದ್ದು ಮಾಡುತ್ತಿದ್ದು, ಇದರ ಬಿಸಿ ಕೆಲವೊಂದು ನಟರಿಗೆ ತಟ್ಟಿದ್ದು, ದೂರು ಕೂಡಾ ದಾಖಲಾಗಿದೆ. ಮಲೆಯಾಳಂ ನಟ ನಿವಿನ್‌ ಪೌಲಿ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಮಹಿಳೆ ದುಬೈನಲ್ಲಿ ಆ ಸಮಯದಲ್ಲಿ ಏನಾಯ್ತು ಎಂಬುವುದನ್ನು ದೂರಿನಲ್ಲಿ ಈ ರೀತಿ ತಿಳಿಸಿದ್ದಾರೆ.

ನಿವಿನ್‌ ಪೌಲಿ ಹಾಗೂ ಇತರ ಐವರು ಯುರೋಪ್‌ನಲ್ಲಿ ಕೆಲಸ ಕೊಡುವುದಾಗಿ ನನ್ನಿಂದ ಹಣ ಪಡೆದಿದ್ದು, ನಂತರ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ. ದುಬೈನಲ್ಲಿ ಸಂತ್ರಸ್ತ ಮಹಿಳೆ ನಿವಿನ್‌ ಪೌಲಿ ಮತ್ತು ಇತರ ಐವರನ್ನು ಭೇಟಿಯಾಗಿದ್ದು, ನಂತರ ಆಕೆಯನ್ನು ಯುರೋಪ್‌ಗೆ ಕರೆದುಕೊಂಡು ಹೋಗುವುದಾಗಿ ಹೇಳಿದ ಇವರು ಆಕೆಯಿಂದ ಮೂರು ಲಕ್ಷ ತಗೊಂಡಿದ್ದಾರೆ.

ಅನಂತರ ಆ ಹಣವನ್ನು ಆಕೆ ವಾಪಾಸ್‌ ಕೇಳಿದಾಗ ಆರೋಪಿಯೋರ್ವ ನಿರ್ಮಾಪಕ ಎಕೆ ಸುನೀಲ್‌ಗೆ ಪರಿಚಯ ಮಾಡಿದ್ದು, ಆತ ಆಕೆಗೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದಾನೆ. ಅನಂತರ ಸಂದರ್ಶನಗೆಂದು ಹೋಟೆಲ್‌ ರೂಂ ಗೆ ಹೋದಾಗ ಅಲ್ಲಿ ದೈಹಿಕವಾಗಿ ಹಲ್ಲೆ ಮಾಡಲಾಗಿದ್ದು, ನನ್ನನ್ನು ಅವರಿದ್ದ ಪಕ್ಕದ ರೂಂ ನಲ್ಲಿ ಆಹಾರ ನೀರು ಕೊಡದೆ ಮೂರು ದಿನ ಕೂಡಿ ಹಾಕಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಬರೀ ಡ್ರಗ್ಸ್‌ ಮಿಶ್ರಿತ ನೀರನ್ನು ಮಾತ್ರ ನನಗೆ ನೀಡುತ್ತಿದ್ದು, ನನ್ನ ಮಗ, ಗಂಡನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದರು. ನಿವಿನ್‌ ಪೌಲಿ ಮತ್ತು ಆತನ ತಂಡ ನನ್ನ ಕೈನಿಂದ ನನ್ನ ಫೋನ್‌ ಅನ್ನು ಕಿತ್ತುಕೊಡಿದ್ದು, ಈ ಕಾರಣಕ್ಕೆ ಅವರು ಸಾಕ್ಷ್ಯ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಮಹಿಳೆ ಮಾಧ್ಯಮದಲ್ಲಿ ಹೇಳಿದ್ದಾರೆ.

 

Leave A Reply

Your email address will not be published.