Indian Railway: ಕೆಂಪು, ನೀಲಿ , ಹಸಿರು ಬಣ್ಣಗಳ ಬೋಗಿಗಳು – ಭಾರತೀಯ ರೈಲುಗಳ ಈ ಬಣ್ಣದ ಹಿಂದಿನ ಅರ್ಥವೇನು?
Indian Railway : ಭಾರತೀಯ ರೈಲ್ವೆ(Indian Railway) ಇಲಾಖೆ ಬಗ್ಗೆ ಎಲ್ಲರಿಗೂ ತಿಳಿದಿದೆ. ವಿಶ್ವದಾದ್ಯಂತ ನಾಲ್ಕನೇ ಅತಿ ದೊಡ್ಡ ರೈಲ್ವೆ ಪ್ಲಾಟ್ಫಾರ್ಮ್ ನಮ್ಮ ದೇಶದ್ದು ಎಂಬುದು ಎಲ್ಲರಿಗೂ ಹೆಮ್ಮೆಯ ಸಂಗತಿ. ಪ್ರತಿನಿತ್ಯ 15 ಸಾವಿರ ರೈಲುಗಳು ದೇಶದಲ್ಲಿ ಸಂಚರಿಸುತ್ತವೆ. ಇಂದಿನ ದಿನಗಳಲ್ಲಿ ರೈಲ್ವೇ ಇಲಾಖೆಯಲ್ಲೆ ಆದ ಸುಧಾರಣೆಗಳು, ಅಭಿವೃದ್ಧಗಳು ಊಹೆಗೂ ನಿಲುಕದ್ದು. ಇಂದು ನಾವು ರೈಲ್ವೆ ಯೋಜನೆಗಳ, ಆದರ ಪ್ರೋಜನಗಳ ಬಗ್ಗೆ ಸಾಕಷ್ಟು ತಿಳಿಯುತ್ತೇವೆ. ಆ ಬಗ್ಗೆ ನಿರಂತರವಾಗಿ ಅಪ್ಡೇಟ್ ಇರುತ್ತೇವೆ. ಆದರೆ ರೈಲಿನ ಕೆಲವು ಕುತೂಹಲಕರವಾದ ಅಂಶಗಳ ಬಗ್ಗೆ ತಿಳಿಯುವುದಿಲ್ಲ. ಆದರೆ ನಾವೀಗ ರೈಲಿನ ಕುರಿತು ಒಂದು ಕುತೂಹಲಕರವಾದ ವಿಚಾರವನ್ನು ತಿಳಿಸುತ್ತೇವೆ.
ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಲು ಬಯಸಿದರೆ, ಮೊದಲು ಆಯ್ಕೆ ಮಾಡುವುದೇ ರೈಲಿನ ಪ್ರಯಾಣ. ಹೌದು ನೀವು ಕಡಿಮೆ ದರದಲ್ಲಿ ನೀವು ಸಾಕಷ್ಟು ದೂರ ಪ್ರಯಾಣಿಸಬಹುದಾಗಿದೆ. ರೈಲಿನಲ್ಲಿ ಆರಾಮದಾಯಕ ಪ್ರಯಾಣ ಮಾಡೋ ನೀವು ರೈಲಿನ ಬಣ್ಣಗಳ ಬಗ್ಗೆ ಎಂದಾದರೂ ಗಮನಿಸಿದ್ದೀರಾ? ರೈಲಿನಲ್ಲಿ ನೀಲಿ, ಕೆಂಪು ಮತ್ತು ಹಸಿರು ಕೋಚ್‌ಗಳು ಏಕೆ ಇರುತ್ತವೆ? ಇದರ ಹಿಂದಿನ ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನೀಲಿ ಬಣ್ಣ:
ಬಹುಪಾಲು ರೈಲ್ವೇ ಕೋಚ್‌ಗಳು ನೀಲಿ ಬಣ್ಣದ್ದಾಗಿದ್ದು, ಅವು ಐಸಿಎಫ್ ಅಥವಾ ಇಂಟಿಗ್ರೇಟೆಡ್ ಕೋಚ್‌ಗಳಾಗಿದ್ದು, ಗಂಟೆಗೆ 70 ರಿಂದ 140 ಕಿಲೋಮೀಟರ್‌ಗಳ ವೇಗವನ್ನು ಹೊಂದಿರುತ್ತದೆ. ಈ ರೈಲುಗಳ ಮೇಲೆ ಎಕ್ಸ್‌ಪ್ರೆಸ್ ಅಥವಾ ಸೂಪರ್‌ಫಾಸ್ಟ್ ರೈಲುಗಳು ಎಂದು ಬರೆದಿರುವುದನ್ನು ಕಾಣಬಹುದು. ಇವುಗಳನ್ನು ಕಬ್ಬಿಣದಿಂದ ತಯಾರಿಸಲಾಗುತ್ತದೆ ಮತ್ತು ಏರ್ ಬ್ರೇಕ್ಗಳನ್ನು ಅಳವಡಿಸಲಾಗಿರುತ್ತದೆ.ನೀಲಿ ರೈಲ್ವೇ ಕೋಚ್‌ಗಳಲ್ಲಿ ಬಿಳಿ ಪಟ್ಟಿಗಳನ್ನು ನೀವು ಗಮನಿಸಿದ್ದರೆ, ಅದು ಕಾಯ್ದಿರಿಸದ ಎರಡನೇ ದರ್ಜೆಯ ಕೋಚ್‌ಗಳನ್ನು ಸೂಚಿಸುತ್ತದೆ. ಈ ಸೂಚನೆಯ ಪ್ರಕಾರ ನೀವು ಸುಲಭವಾಗಿ ಸಾಮಾನ್ಯ ಕೋಚ್‌ಗಳನ್ನು ಗುರುತಿಸಬಹುದು.
ಕೆಂಪು ಬಣ್ಣ:
ಕೆಂಪು ಬಣ್ಣದ ಡಬ್ಬಿಗಳಿಗೆ ಲಿಂಕ್ ಹಾಫ್ಮೆನ್ ಕೋಚ್ ಎಂದು ಕರೆಯಲಾಗುತ್ತದೆ. ಕೆಂಪು ಕೋಚ್ ಗಳ ನಿರ್ಮಾಣ ಜರ್ಮನಿಯಲ್ಲಾಗಿತ್ತು. 2000ರಲ್ಲಿ ಜರ್ಮನಿಯಿಂದ ಭಾರತಕ್ಕೆ ಕೆಂಪು ಬಣ್ಣದ ಕೋಚ್ ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಸದ್ಯ ಈ ಕೋಚ್ ಗಳ ನಿರ್ಮಾಣ ಪಂಜಾಬ್ ರಾಜ್ಯದ ಕಪೂರಥಲಾ ಎಂಬಲ್ಲಿ ಆಗುತ್ತಿದೆ. ಇವುಗಳು ಅಲ್ಯುಮಿನಿಯಿಂದ ನಿರ್ಮಾಣವಾಗಿರುವ ಕಾರಣ ತೂಕ ಕಡಿಮೆಯಾಗಿರುತ್ತದೆ. ಕೆಂಪು ಬಣ್ಣದ ಕೋಚ್ ಗಳನ್ನು ರಾಜಧಾನಿ/ಶತಾಬ್ಧಿ ಸೇರಿದಂತೆ ದೂರ ಪ್ರಯಾಣದ ಪ್ರೀಮಿಯಂ ಎಕ್ಸ್ಪ್ರೆಸ್ ಗಳಲ್ಲಿ ಬಳಕೆ ಮಾಡಲಾಗುತ್ತದೆ.
ಹಸಿರು ಬಣ್ಣ:
ಹಸಿರು ಬಣ್ಣದ ಕೋಚ್‌ಗಳನ್ನ ಗರೀಬ್ ರಥ್ ರೈಲುಗಳಿಗೆ ಬಳಕೆ ಮಾಡಲಾಗುತ್ತದೆ. ಈ ಬಣ್ಣಕ್ಕೆ ಯಾವುದೇ ವಿಶೇಷ ಮಹತ್ವವಿಲ್ಲ. ಬಿನ್ನವಾಗಿ ಕಾಣುವದಕ್ಕಾಗಿ ಮಾತ್ರ ಬೇರೆ ಬಣ್ಣ ಬಳಕೆ ಮಾಡಲಾಗಿದೆ. ಕೆಲವೊಮ್ಮೆ ನೀವು ಬಣ್ಣ ಬಣ್ಣದ ರೈಲುಗಳನ್ನು ಸಹ ನೋಡಿರಬಹುದು. ಇವುಗಳಿಗೆ ಯಾವುದೇ ವಿಶೇಷ ಅರ್ಥ ಇರಲ್ಲ.