Darshan: ನಟ ದರ್ಶನ್‌ಗೆ ಜೈಲಿನ ಅನ್ನ, ಸಾಂಬಾರೇ ಗತಿ: ಮನೆ ಊಟ ತರಿಸಲು ನೋ ಎಂದ ಕೋರ್ಟ್

Darshan: ನಟ ದರ್ಶನ್ ಜೈಲು ಪಾಲಾಗಿ 2 ತಿಂಗಳಾಯ್ತು. ಅಂದಿನಿಂದ ಮನೆ ಊಟ ಬೇಕು ಅಂತ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಜೈಲೂಟ ತಿಂದು ಆರೋಗ್ಯ ಕೆಡುತ್ತಿದೆ. ಹಾಗಾಗಿ ಮನೆ ಊಟ ಬೇಕು ಎಂದು ಸ್ವತಃ ಅವರ ಕೈ ಬರಹದಲ್ಲೇ ಮನವಿ ಮಾಡಿದ್ರು. ಈ ಕುರಿತು ಇಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ಆದರೆ ಸದ್ಯಕ್ಕೆ ಮನೆಯೂಟ ದರ್ಶನ್‌ಗೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಅಲ್ಲದೆ ಈ ಕುರಿತು ವಿಚಾರಣೆ ಮುಂದೂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಸದ್ಯಕ್ಕೆ ಮನೆಯೂಟ ಆಸೆ ಬಿಟ್ಟು ಜೈಲೂಟವನ್ನೇ ಮಾಡಬೇಕಾಗಿದೆ. ಜೈಲೂಟ ತಿಂದು ದರ್ಶನ್ ತೂಕದಲ್ಲಿ ಭಾರಿ ಇಳಿಕೆ ಆಗಿದೆಯಂತೆ. ಈ ಹಿಂದೆ ತಮ್ಮ ಕೈ ಬರಹದಲ್ಲೇ ಮನೆ ಊಟ, ಮಲಗಲು ಹಾಸಿಗೆ ಹಾಗೂ ಕೆಲವು ಪುಸ್ತಕಗಳು ಬೇಕೆಂದು ನಟ ದರ್ಶನ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ರು.
ರಿಟ್ ಅರ್ಜಿಯಲ್ಲಿ ಜೈಲೂಟ ತಿಂದು ಆರೋಗ್ಯದಲ್ಲಿ ಸಮಸ್ಯೆ ಆಗ್ತಿದೆ ಎಂದು ಉಲ್ಲಖಿಸಿದ್ರು. ಇದಕ್ಕೆ ಸಂಬಂಧ ಪಟ್ಟಂತೆ ಇಂದು ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ನಡೆಸಿತು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಸದ್ಯಕ್ಕೆ ನಟ ದರ್ಶನ್ಗೆ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ಸೆ. 5ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.
ಕಾರಾಗೃಹ ಇಲಾಖೆ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರು ಜೈಲಾಧಿಕಾರಿಗಳು ಕೊಟ್ಟಿರೋ ವರದಿಯನ್ನು ಪರಿಗಣಿಸಿ ನ್ಯಾಯಾಲಯ ದರ್ಶನ್ ಅವರಿಗೆ ಮನೆ ಊಟ ಕೊಡೋದನ್ನು ನಿರಾಕರಿಸಿದೆ. ವರದಿಯಲ್ಲಿ ಕೆಲ ಅಂಶಗಳನ್ನು ಉಲ್ಲೇಖಿಸಲಾಗಿದೆ. ಅವರು ನೀಡಿರುವ ವರದಿ ಪ್ರಕಾರ – ಸೆಂಟ್ರಲ್ ಜೈಲಿನಲ್ಲಿ ಪೌಷ್ಠಿಕ ಆಹಾರವನ್ನು ಎಲ್ಲಾ ಖೈದಿಗಳಿಗೆ ನೀಡಲಾಗ್ತಿದೆ. ಆಹಾರದಲ್ಲಿ ಈ ವರೆಗೆ ಯಾವುದೇ ದೂರು ಬಂದಿಲ್ಲ. ದರ್ಶನ್ ಈ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದು, ಆತನಿಗೊಬ್ಬನಿಗೆ ಮನೆಯೂಟ ನೀಡಲು ಸಾಧ್ಯವಿಲ್ಲ. ಇನ್ನು ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು ಆರೋಪಿ ದರ್ಶನ್ ಫಿಟ್ ಅಂಡ್ ಪೈನ್ ಆಗಿದ್ದಾರೆ. ಹಾಗಾಗಿ ದರ್ಶನ್ ಗೆ ಮನೆ ಊಟ ಕೊಡುವ ಅವಶ್ಯಕತೆ ಇಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಕಾರಾಗೃಹ ಇಲಾಖೆಯಿಂದ ಜೈಲಿನ ವಕೀಲರಿಗೆ ವರದಿಯನ್ನು ಕಳುಹಿಸಿ ಕೊಡಲಾಗಿತ್ತು. ಆ ವರದಿ ಕೋರ್ಟ್ಗೆ ಸಲ್ಲಿಸಲಾಗಿದೆ.