MUDA Scam: ಮೋಸ್ಟ್ Irresponsible, ನಾಲಾಯಕ್‌, ಅಯೋಗ್ಯ ಗವರ್ನರ್ – ಹೀಗೆ ನಾಲಗೆ ಹರಿಬಿಟ್ಟವರು ಯಾರು..?

MUDA Scam: ಮುಡಾ ಹಗರಣ (MUDA Scam) ಸಂಬಂಧ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ತನಿಖೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್‌ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ. ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತನ ಸಲೀಂ ಅಹಮದ್ ತಮ್ಮ ನಾಲಗೆಯನ್ನು ಹರಿಬಿಟ್ಟಿದ್ದಾರೆ.  ಮೋಸ್ಟ್ Irresponsible ಗವರ್ನರ್, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಯೋಗ್ಯ ಗವರ್ನರ್ ಅಂತ ಹೇಳಬೇಕು. ರಾಜಭವನವನ್ನ ಬಿಜೆಪಿಯವರು ಆಫೀಸ್ ಮಾಡ್ಕೊಂಡಿದ್ದಾರೆ. ಅಮಿತ್ ಶಾ, ಕುಮಾರಸ್ವಾಮಿ ಹೇಳಿದಂತೆ ರಾಜ್ಯಪಾಲರು ನಡೆದುಕೊಂಡಿದ್ದಾರೆ.

ಸಿದ್ದರಾಮಯ್ಯ ರಾಜಕೀಯದಲ್ಲಿ 40 ವರ್ಷದಿಂದ ಪ್ರಮಾಣಿಕವಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿಯತ್ತಿನಿಂದ ನಡೆಯುತ್ತಿದೆ. ಇಂತಹ ವೇಳೆ ರಾಜಭವನ ಬಳಸಿಕೊಂಡು ಷಡ್ಯಂತ್ರ ಮಾಡಲಾಗ್ತಿದೆ. ಯಾವುದೇ ಕಾರಣಕ್ಕೂ ಅದು ಆಗಲ್ಲ. ಸಿದ್ದರಾಮಯ್ಯ ಜೊತೆಗೆ ನಾವೆಲ್ಲಾ ಇದ್ದೇವೆ ಎಂದು ಸಲೀಂ ಅಹಮದ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಇದೇ ವೇಳೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ರಾಜ್ಯಪಾಲರು ದೆಹಲಿ‌ ಬಿಜೆಪಿಯ ಏಜೆಂಟರು. ಇವತ್ತು ಕನ್ನಡಿಗರ ಮೇಲೆ ದಾಳಿ ‌ಮಾಡ್ತಿದ್ದಾರೆ. ಬ್ರಿಟೀಷರು ಭಾರತೀಯ ವಿರುದ್ಧ ದಾಳಿ ಮಾಡಿದ್ರು. ಅವರನ್ನ ಗಾಂಧೀಜಿ‌ ನೇತೃತ್ವದಲ್ಲಿ ಓಡಿಸಲಾಯ್ತು. ಇವತ್ತು ರಾಜ್ಯಪಾಲರು ಅದೇ ರೀತಿ ದಾಳಿ ಮಾಡ್ತಿದ್ದಾರೆ. ಅವರನ್ನ ಕನ್ನಡಿಗರು ಓಡಿಸಬೇಕಿದೆ. ದೆಹಲಿಯವರಿಗೆ ನಾವು ಗುಲಾಮರಾಗಿರಬೇಕು. ಆದರೆ ನಮ್ಮ‌ ಸರ್ಕಾರ ಆ ರೀತಿ ಇಲ್ಲ. ಗಟ್ಟಿಯಾದ ನಿಲುವನ್ನ ನಾವು ತೆಗೆದುಕೊಂಡಿದ್ದೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಾತು ಮುಂದರುವರೆಸಿದ ಸಚಿವ ಕೃಷ್ಣ ಭೈರೇಗೌಡ, ಬಿಜೆಪಿ ಏಜೆಂಟ್ ಆಗಿ ಗವರ್ನರ್ ಕೆಲಸ ಮಾಡ್ತಿದ್ದಾರೆ. ಅವರು ಗವರ್ನರ್ ಅಲ್ಲ, ಇವರು ನಾಲಾಯಕ್ ಗವರ್ನರ್, ಬಿಜೆಪಿ ಏಜೆಂಟ್, ನಾಲಾಯಕ್ ಗವರ್ನರ್ ಗೆ ಧಿಕ್ಕಾರ. ಇವರು ಇಲ್ಲಿ ರಾಜ್ಯಪಾಲ ಆಗುವುದಕ್ಕೆ ಯೋಗ್ಯರಲ್ಲ. ತೊಲಗಿ ತೊಲಗಿ ರಾಜ್ಯಪಾಲರ ತೊಲಗಿ. ರಾಜ್ಯಪಾಲರಿಗೆ ಮಾನ ಮರ್ಯಾದೆ ನಾಚಿಕೆ ಇದೆಯಾ? ಸಂವಿಧಾನದ ಬಗ್ಗೆ ಗೌರವ ಇದೆಯಾ? ಬಿಜೆಪಿಯವರ ವಿರುದ್ದ ಪ್ರಾಸಿಕ್ಯೂಷನ್‌ಗೆ ಕೇಳಲಾಗಿದೆ. ಆದರೆ ಅದನ್ನು ಹಿಂದೆ ಹಾಕಿಕೊಂಡು ಕೂತಿದ್ದೀರಾ..? ಎಂದು ಹಿಂದೆ ಅಂತ ಆ್ಯಕ್ಷನ್ ಮಾಡಿ ಹೇಳಿದ ಕೃಷ್ಣ ಭೈರೇಗೌಡ ಬಿಜೆಪಿ ಹಾಗೂ ರಾಜ್ಯಪಾಲರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ ಕಾವೇರಿ, ಕೃಷ್ಣ, ಮಹದಾಯಿ ಬಗ್ಗೆ ಗಟ್ಟಿ ನಿಲುವನ್ನು ನಮ್ಮ ಕಾಂಗ್ರೆಸ್‌ ಸರ್ಕಾರ ತೆಗೆದುಕೊಂಡಿದೆ. ಇದನ್ನ ಸಹಿಸೋಕೆ ಕೇಂದ್ರಕ್ಕೆ‌ ಆಗ್ತಿಲ್ಲ. ಗೌರ್ನರ್ ಬಳಸಿಕೊಂಡು ಸರ್ಕಾರ ಬೀಳಿಸೋಕೆ ನೋಡ್ತಿದ್ದಾರೆ. ಕಳೆದ ಬಾರಿ ಆಪರೇಷನ್ ಕಮಲ ಮಾಡಿದ್ರು.

ಹಣ ಬಳಸಿ ಸರ್ಕಾರ ಬೀಳಿಸಿದ್ರು. ಇವತ್ತು ದುಡ್ಡಿಲ್ಲದೆ ಬೀಳಿಸೋಕೆ ಹೊರಟಿದ್ದಾರೆ. ಕನ್ನಡಿಗರನ್ನು ಸದೆ ಬಡಿಯೋಕೆ‌ ಹೊರಟಿದ್ದಾರೆ. ಗವರ್ನರ್‌ ಅನುಮತಿ ಕೊಡಬೇಕಾದ್ರೆ ತನಿಖೆ ಆಗಿರಬೇಕು. ತಪ್ಪಾಗಿದೆ ಎಂದು ವರದಿ ಬರಬೇಕು.  ಈ ಆದೇಶವನ್ನೇ ಗವರ್ನರ್‌ ಗಾಳಿಗೆ ತೂರಿದ್ದಾರೆ ಎಂದರು.

Leave A Reply

Your email address will not be published.