H D Kumaraswamy: ಮಿಸ್ಟರ್ ಡಿ ಕೆ ಶಿವಕುಮಾರ್ ನಾನು ನಾಗರ ಹಾವೇ! : ಬಂಡೆ ಎದುರು ಸಿದ್ದರಾಮಯ್ಯ ಕಥೆ ಮುಗಿದಂತೆ – ಕುಮಾರಸ್ವಾಮಿ
H D Kumaraswamy: ಯಾರ್ಯಾರು ನಮ್ಮ ರಾಜ್ಯವನ್ನು ಲೂಟಿ ಮಾಡುತ್ತಾರೋ, ಕೊಳ್ಳೆ ಹೊಡೆಯುತ್ತಾರೋ ಅಂಥವರ ಪಾಲಿಗೆ ಹಾಗೂ ಡಿ ಕೆ ಶಿವಕುಮಾರ್ ನಿಮ್ಮ ಪಾಲಿಗೂ ನಾನು ನಾಗರ ಹಾವೇ ಎಂದು ಡಿಕೆಶಿಗೆ ಸಂಸದ ಹೆಚ್ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟರು. ಜೆಡಿಎಸ್-ಬಿಜೆಪಿ ಹಮ್ಮಿಕೊಂಡಿದ್ದ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಿತು. ಅಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಾಂದೋಲದಲ್ಲಿ ಮಾತಾನಾಡಿದ್ದ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿ ಎಸ್ ಯಡಿಯೂರಪ್ಪನವರು ನನ್ನನ್ನು ನಾಗರ ಹಾವು ಅಂತ ಹೇಳಿದ್ದರು. ಅವರು ಹೇಳಿದ್ದು ನಿಜವೇ.. ನಾನು ಯಡಿಯೂರಪ್ಪ ಒಳ್ಳೆ ಆಡಳಿತ ನೀಡಿದ್ದೇವೆ. ವಯಕ್ತಿಕವಾಗಿ ಎಂದೂ ಅವರು ನನಗೆ ಸಮಸ್ಯೆ ಮಾಡಿಲ್ಲ. ಸಿದ್ದರಾಮಯ್ಯನವರಿಗೆ ಬಂಡೆ ತರ ನಿಂತಿದ್ದೇನೆ ಅಂತ ಹೇಳ್ತಿದ್ದಾರೆ ಡಿಕೆಶಿ. ಇನ್ನು ಮುಂದೆ ಸಿದ್ದರಾಯ್ಯ ಕಥೆ ಮುಗಿದಂತೆ ಎಂದು ಲೇವಡಿ ಮಾಡಿದರು. ಯಡಿಯೂರಪ್ಪ ನನ್ನ ನಡುವೆ ಬಿರುಕು ಉಂಟು ಮಾಡಲು ಡಿಕೆಶಿ ಬಹಳ ಶ್ರಮ ವಹಿಸುತ್ತಿದ್ದಾರೆ. ರೌಡಿ ಕೊತ್ವಾಲನೊಂದಿಗೆ ಜೀವನ ಮಾಡುತ್ತಿದ್ದ ಡಿಕೆಶಿಯನ್ನು, ಎಸ್ ಎಂ ಕೃಷ್ಣ ಕರೆತಂದು ರಾಜಕೀಯ ಜೀವನ ಕೊಟ್ಟರು. ಆದರೆ ಅವರ ಕುಟುಂಬದ ಶ್ರಮ ಜೀವಿ ಸಿದ್ದಾರ್ಥ ಅವರ ಆತ್ಮಹತ್ಯೆಗೆ ಕಾರಣ ಯಾರೂ ಅನ್ನೋದನ್ನು ಜನರ ಮುಂದೆ ಇಡಲು ತಯಾರಿದ್ದೀರಾ..? ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರೆಯಲು ನಾನು ಬಂಡೆ ತರ ಇದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ. ಇದೇ ರೀತಿ 2018-19ರಲ್ಲಿ ಇದೇ ಕನಕಪುರದ ಬಂಡೆ ಕುಮಾರಸ್ವಾಮಿಯ ರಕ್ಷಣಗೆ ನಿಂತಿದೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಆದರೆ ಆ ಬಂಡೆಯನ್ನು ನಾನು ನಂಬಿಕೆಕೊಂಡು ಹೋಗಿದ್ದಕ್ಕೆ ನನ್ನ ಮೇಲೆ ಬಿತ್ತು. ಆ ಬಂಡೆನ ದೂರ ಇಟ್ಟಿದ್ದರೆ ನಾನು ಸೇಫ್ ಆಗಿರ್ತಿದ್ದೆ. ಆದರೆ ಈಗ ಸಿದ್ದರಾಮಮಯ್ಯನವರ ಎದುರು ಬಂಡೆ ನಿಂತಿದೆ. ಇನ್ನು ಸಿದ್ದರಾಮಯ್ಯನವರ ಕತೆ ಮುಗಿತು ಅಂತ ರಾಜ್ಯದ ಜನ ತಿಳಿದುಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ವಿರೋಧ ಪಕ್ದದ ಜವಾಬ್ದಾರಿ, ಆಡಳಿತ ಪಕ್ಷದ ಆಡಳಿತವನ್ನು ಪ್ರಶ್ನೆ ಮಾಡೋದು. ಆದರೆ ಇದೀಗ ಕಾಂಗ್ರೆಸ್ ಆಡಳಿತದಲ್ಲಿ ಬದಲಾಗಿದೆ. ವಿರೋಧ ಪಕ್ಷಕ್ಕೆ ಆಡಳಿತ ಪಕ್ಷ ಮಾಡುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕಂತೆ. ನಿಮ್ಮ ಅನ್ಯಾಯಗಳನ್ನು, ಅಕ್ರಮಗಳನ್ನು ವಿರೋಧ ಪಕ್ಷ ಪ್ರಶ್ನೆ ಮಾಡೋದು ತಪ್ಪಾ? ಮುಡಾ ಅಕ್ರಮವನ್ನು ನಾವು ಬಯಲಿಗೆ ಎಳೆದೇ ಎಳೆಯುತ್ತೇವೆ. ನಾನು ಯಾರಿಗೂ ಜಗ್ಗೋದು ಇಲ್ಲ, ಬಗ್ಗೋದು ಇಲ್ಲ. ಸಿಎಂ ರಾಜಿನಾಮೆ ಕೊಡುವವರೆಗೆ ಮುಡಾ ಹಗರಣದ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದ್ದಾರೆ.