Countries with Most Debt: ವಿಶ್ವದಲ್ಲಿ ಅಧಿಕ ಸಾಲ ಇರುವ ದೇಶ ಯಾವುದು? ಭಾರತ ಯಾವ ಸ್ಥಾನದಲ್ಲಿದೆ..?

Countries with Most Debt: ಒಂದು ದೇಶದ ಅಭಿವೃದ್ಧಿಗೆ ಆ ದೇಶದ ಜಿಡಿಪಿ (Gross domestic product) ಪ್ರಮಾಣ ಎಷ್ಟು ಇದೆ? ಹಾಗೆ ಆ ರಾಷ್ಟ್ರದ ಮೇಲೆ ಎಷ್ಟು ಸಾಲ ಎಂಬುದು ಅತೀ ಮುಖ್ಯ. ಈಗಿನ ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯನ್ನು ಆ ದೇಶದ ಸಾಲದ ಪ್ರಮಾಣ, ಹಾಗೂ ಆರ್ಥಿಕ ಮಟ್ಟ ಮತ್ತು ಸ್ಥಿರತೆ ಹೇಗಿದೆ ಎಂಬುದರ ಮೇಲೆ ನಿರ್ಣಯ ಮಾಡಲಾಗುತ್ತದೆ.

ಪ್ರತಿಯೊಂದು ದೇಶಗಳು ಇತರ ದೇಶಗಳೊಂದಿಗೆ, ಡಬ್ಲೂಹೆಚ್‌ಓ ದೊಂದಿಗೆ ಸಾಲವನ್ನು ಮಾಡಿರುತ್ತದೆ. ಇದು ಆರ್ಥಿಕವಾಗಿ ದೇಶವನ್ನು ಮುನ್ನಡೆಸಲು ಸರ್ಕಾರಗಳು ಮಾಡುವ ಕ್ರಮ. ಆದರೆ ಕೆಲವು ದೇಶಗಳ ಸಾಲದ ಹೊರೆ ಆ ದೇಶದ ಆರ್ಥಿಕ ಸ್ಥಿತಿಗೆ ಹೊಡೆತ ನೀಡುತ್ತದೆ. ಈ ಸಾಲದ ಹೊರೆಯನ್ನು ಹೊತ್ತುಕೊಂಡು ಅಭಿವೃದ್ಧಿಯ ಪಥದತ್ತ ದೇಶಗಳು ಯಾವುವು.? ಹಾಗೆ ಎಷ್ಟೆಷ್ಟು ಸಾಲ ಮಾಡಿಕೊಂಡಿದೆ ಅನ್ನುವ ಬಗ್ಗೆ ವಿಶ್ವ ಅಂಕಿಅಂಶಗಳು ಅಧ್ಯಯನದ ವರದಿ ಇಲ್ಲಿದೆ. ಜಾಗತಿಕವಾಗಿ ಅತೀ ಹೆಚ್ಚು ಸಾಲ ಮಾಡಿರುವ ದೇಶ ಯಾವುದು? ಹಾಗೆ ನಮ್ಮ ದೇಶ ಭಾರತ ಯಾವ ಸ್ಥಾನದಲ್ಲಿದೆ ಅನ್ನೋದನ್ನ ನೋಡೋಣ..

ಜಪಾನ್.. ಈಗಾಗಲೇ ಅಭಿವೃದ್ಧಿ ಹೊಂದಿದ ದೇಶ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ದೇಶ. ಆದರೆ ಈ ದೇಶವೇ ಅತೀ ಹೆಚ್ಚು ಸಾಲ ಮಾಡಿಕೊಂಡಿರುವ ದೇಶಗಳ ಪಟ್ಟಿಯಲ್ಲಿ ಮೊದಲನೆಯಲ್ಲಿದೆ. ಅದರ ಜಿಡಿಪಿಯ 263 ಪ್ರತಿಶತದಷ್ಟು ಸಾಲವನ್ನು ಮಾಡಿಕೊಂಡಿದೆ. ಕಳೆದ ಮಾರ್ಚ್ 2023ರ ಹೊತ್ತಿಗೆ, ಜಪಾನ್‌ನ ಸಾಲ ಸುಮಾರು USD 9 2 ಟ್ರಿಲಿಯನ್ ನಷ್ಟು ಎಂದು ಹೇಳಲಾಗುತ್ತಿದೆ.
ಇನ್ನು ಗ್ರೀಕ್ ರಾಷ್ಟ್ರ ತನ್ನ ರಾಷ್ಟ್ರೀಯ GDPಯ 203 ಪ್ರತಿಶತದಷ್ಟು ಸಾಲವನ್ನು ಹೊಂದಿದೆ. 2018ರಲ್ಲಿ ಈ
ರಾಷ್ಟ್ರ ತನ್ನ ನಾಗರೀಕರಿಗೆ ತೆರಿಗೆಯಲ್ಲಿ ವಿನಾಯಿತಿಯನ್ನು ಕೊಟ್ಟಿತ್ತು. ದೇಶದ ಪ್ರಜೆಗಳು, ಹೂಡಿಕೆದಾರರಿಗೆ ಹಾಗೂ ಉದ್ಯಮಿಗಳಿಗೆ ಬಹುಮಾನ ನೀಡುವ ಭರವಸೆ ನೀಡಿತ್ತು.

ಯುನೈಟೆಡ್ ಕಿಂಗ್‌ಡಮ್.. ಆರ್ಥಿಕವಾಗಿ ಬಲಾಢ್ಯವಾಗಿರುವ ದೇಶ. ಆದರೆ ಅದರ ಸಾಲವೂ ನಮ್ಮ ದೇಶಕ್ಕಿಂತ ಜಾಸ್ತಿಯಿದೆ. ಜೂನ್ 2024ರ ಕೊನೆಗೆ, ಯುಕೆಯ ಸಾಲವು ಅದರ GDPಯ 147 ಪ್ರತಿಶತಕ್ಕೆ ಸರಿಯಾಗಿದೆ. ಕಳೆದ ವರ್ಷ ಫೆಬ್ರವರಿ 2023ರಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನ ಹಣದುಬ್ಬರ ದರವು ಶೇರಡಾ 104ರಷ್ಟಿತ್ತು. ಇದು ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ಸ್ಟೇಟ್ಸ್ ಇವುಗಳ ಹಣದುಬ್ಬರವನ್ನು ಮೀರಿಸಿದೆ.

ಲೆಬನಾನ್ ದೇಶದ ಸಾಲದ ಮಾಹಿತಿಗಳ ಪ್ರಕಾರ, ಅದರ ದೇಶದ GDPಯ 128 ಪ್ರತಿಶತವಾಗಿದೆ. ಲೆಬನಾನ್‌ ದೇಶವನ್ನು ಹದಗೆಡಿಸಿದ್ದು ಅಲ್ಲಿ ನಡೆದ ಯುದ್ಧ. ತದನಂತರ ದೇಶದ ಪುನರ್‌ ನಿರ್ಮಾಣದ ವೆಚ್ಚಗಳು ದೇಶದ ಹಣಕಾಸಿನ ಸಮಸ್ಯೆಗೆ (Economical probelm) ಕಾರಣವಾಯ್ತು. ಇಲ್ಲಿನ ಲಾಭಗಳು ಹೆಚ್ಚಾಗಿ ಶ್ರೀಮಂತರ ನಡುವೆ ಇರೋದ್ರಿಂದ ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದೆ.

ಸ್ಪೇನ್ ಶ್ರೀಮಂತ ರಾಷ್ಟ್ರ. ವರದಿ ಪ್ರಕಾರ ಅದು ತನ್ನ ರಾಷ್ಟ್ರೀಯ GDPಯ 111 ಪ್ರತಿಶತದಷ್ಟು ಸಾಲವನ್ನು ಹೊಂದಿದೆ. ಯೂರೋಪ್‌ ದೇಶಗಳಲ್ಲಿ ಸ್ಪೇನ್‌ನ ಆರ್ಥಿಕತೆಯು ನಾಲ್ಕನೇ ದೊಡ್ಡದಾಗಿದೆ. 2023ರಲ್ಲಿ ಇದರ ಆರ್ಥಿಕತೆ ಶೇಕಡಾ 2.5ರಷ್ಟು ಬೆಳೆದಿದೆ.

ವಿಶ್ವದ ದೊಡ್ಡಣ್ಣ ಎಂದೇ ಕರೆಯುವ ಅಮೇರಿಕಾ ಅತೀ ಶ್ರೀಮಂತ ರಾಷ್ಟ್ರ. ಇದು ತನ್ನ ರಾಷ್ಟ್ರೀಯ GDPಯ 110 ಪ್ರತಿಶತದಷ್ಟು ಸಾಲವನ್ನು ಹೊಂದಿದೆ. ನಿಜಕ್ಕೂ ಆಶ್ಚರ್ಯಕರ ಸಂಗತಿ. ತನ್ನ ಬಳಿ ದುಡ್ಡು ದ್ದು, ಇತರ ರಾಷ್ಟ್ರಗಳಿಗೆ ಸಾಲ ಕೊಡುವ ಮಟ್ಟಕ್ಕೆ ಯುನೈಟೆಡ್‌ ಸ್ಟೇಟ್ಸ್‌ ಇದ್ರೂ, 2023ರ ಆರ್ಥಿಕ ವರ್ಷಕ್ಕೆ, ಸರಾಸರಿ GDP 26 97 ಟ್ರಿಲಿಯನ್ ಇದೆ. ಇದರ ಸಾಲ ಜಿಡಿಪಿ ಅನುಪಾತ ಶೇ.123ರಷ್ಟಿತ್ತು. ಸರ್ಕಾರ, ಅಧಿಕ ಸಾಲ-ಜಿಡಿಪಿ ಅನುವಾತವು ಇರೋದ್ರಿಂದ ತನ್ನ ಸಾಲವನ್ನು ಮರುಪಾವತಿ ಮಾಡುವಲ್ಲಿ ಅಮೇರಿಕಾ ಅಧಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ವರದಿ ಮಾಡಿದೆ.

ಇನ್ನು ನಮ್ಮ ದೇಶ ಭಾರತವು ಸದ್ಯ ತನ್ನ GDPಯ 46 ಪ್ರತಿಶತದಷ್ಟು ಸಾಲವನ್ನು ಮಾಡಿದೆ. ಅಂದರೆ ಬೇರೆ ದೇಶಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ. ನಮ್ಮ ದೇಶ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ. ಮಾರ್ಚ್ 2024ರ ಅಂತ್ಯದ ವೇಳೆಗೆ ಭಾರತದ (India) ಬಾಹ್ಯ ಸಾಲವು 66,380 ಕೋಟಿ ರೂ. ಇದು ಹಿಂದಿನ ವರ್ಷಕ್ಕಿಂತ 3,970 ಕೋಟಿ ಜಾಸ್ತಿಯಾಗಿದೆ.

Leave A Reply

Your email address will not be published.