Muda Scam: ಮುಡಾ ಹಗರಣ ಪ್ರಕರಣ- ಸಿದ್ದರಾಮಯ್ಯ ವಿರುದ್ಧ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಖ್ಯಾತ ವಕೀಲೆ !!

Muda Scam: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ- ಜೆಡಿಎಸ್(BJP-JDS) ಹೋರಾಟ ತೀವ್ರಗೊಂಡಿದೆ. ಸಿದ್ದರಾಮಯ್ಯ(CM Siddaramaiah)ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆಯನ್ನೂ ನಡೆಸಿವೆ. ಈ ಮಧ್ಯೆ ದೂರುದಾರ ಪರ ವಕೀಲೆ, ಈ ಹಗರಣದ ಬಗ್ಗೆ ಕೆಲ ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

ಹೌದು, ಮುಡಾ ಹಗರಣ ಪ್ರಕರಣ ಸಂಬಂಧ ಅರ್ಜಿದಾರ ಸ್ನೇಹಮಯಿ ಕೃಷ್ಣ ಪರವಾಗಿ ವಾದ ಮಂಡಿಸಿರುವ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್(Lakshmi iyengar) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ‘ನಮ್ಮ ದೂರನ್ನು ಸ್ವೀಕಾರ ಮಾಡಿ ಎಂದು ವಾದ ಮಂಡನೆ ಮಾಡಲಾಗಿದ್ದು, ಕೋರ್ಟ್​ ಆಗಸ್ಟ್ 13ಕ್ಕೆ ಆದೇಶ ಕಾಯ್ದಿರಿಸಿದೆ. ಒಂದು ಕಡೆ ಬಿಟ್ಟು ಮತ್ತೊಂದು ಕಡೆ ಸೈಟ್ ಪಡೆದುಕೊಂಡಿದ್ದಾರೆ‌. ಕಾನೂನು ಪ್ರಕಾರ ಅವರಿಗೆ ಎರಡು ಸೈಟ್ ಬರೋದು. ಹಕ್ಕು ಇದ್ರೆ ಮಾತ್ರ ಗಿಫ್ಟ್ ಡಿಡ್ ಮಾಡಕ್ಕೆ ಬರುತ್ತೆ. ಹಕ್ಕು ಇಲ್ಲ ಅದ್ರೆ ಟೈಟಲ್ ಬರೋದಿಲ್ಲ. ಇದನ್ನ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದೇವೆ ಎಂದು ಹೇಳಿದ್ದಾರೆ.

ಅಲ್ಲದೆ ಸಿದ್ದರಾಮಯ್ಯ ಪತ್ನಿ ಗೃಹಿಣಿಯಾಗಿದ್ದಾರೆ. ಅವರು ಕೆಲಸ ಮಾಡವುದಿಲ್ಲ ಅವರು ಸಂಪಾದನೆ ಮಾಡುವುದಿಲ್ಲ. ಸಿದ್ದರಾಮಯ್ಯ ಅವರ ಸಂಪೂರ್ಣ ಅಧಿಕಾರ ದುರುಪಯೋಗ ಮಾಡಿದ್ದಾರೆ. ಮೊದಲು ಯಾರು ಇದರಿಂದ ಲಾಭ ಪಡೆದಿದ್ದಾರೆ ಅವರನ್ನ ನಾವು ಆರೋಪಿಗಳನ್ನಾಗಿ ಮಾಡಿದ್ದೇವೆ. ಮುಡಾ ಕಮಿಷನರ್ ರನ್ನ ಸಹ ನಾವು ದೂರಿನಲ್ಲಿ ತೋರಿಸಿದ್ದೇವೆ. ಸ್ವತಂತ್ರ ತನಿಖಾ ಏಜೆನ್ಸಿಯಿಂದ ತನಿಖೆಗೆ ನಾವು ಕೇಳಿದ್ದೇವೆ. ಈ ಹಗರಣದಲ್ಲಿ ಅಧಿಕಾರಿಗಳನ್ನು ಸಹ ಮುಂದೆ ದೂರಿನಲ್ಲಿ ತರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Leave A Reply

Your email address will not be published.