Transport Department: ರಾಜ್ಯದಲ್ಲಿ ಸೆಪ್ಟೆಂಬರ್‌ನಿಂದ ಹೊಸ ರೀತಿಯ ಡಿಎಲ್ ಮತ್ತು ಆರ್‌ಸಿ ವಿತರಣೆ! ಸಾರಿಗೆ ಇಲಾಖೆ ಸ್ಪಷ್ಟನೆ

Share the Article

Transport Department: ಶೀಘ್ರದಲ್ಲಿ ಡಿಎಲ್‌, ಆರ್‌ಸಿ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ರಾಜ್ಯ ಸಾರಿಗೆ ಇಲಾಖೆ ಸಿದ್ಧತೆಮಾಡುತ್ತಿದೆ. ಇದರಿಂದ ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿದರೆ ಡಿಎಲ್ ಮತ್ತು ಆರ್‌ಸಿಗೆ ಸಂಬಂಧಿ ಸಿದ ಎಲ್ಲ ವಿವರಗಳು ತಿಳಿಯಲು ಸಾಧ್ಯವಿದೆ.

ಹೌದು, ರಾಜ್ಯದಲ್ಲಿ ವಾಹನ ಚಾಲಕರಿಗೆ ನೀಡಲಾಗುವ ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ವಾಹನ ನೋಂದಣಿ ಪ್ರಮಾಣಪತ್ರದ (ಆರ್‌ಸಿ) ಸ್ವರೂಪ ಬದಲಿಸಲಾಗುತ್ತಿದ್ದು, ಮೈಕ್ರೋ ಚಿಪ್ ಜತೆಗೆ ಕ್ಯೂಆರ್ ಕೋಡ್ ಅಳವಡಿಸಲು ಡಿಎಲ್‌, ಆರ್‌ಸಿ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ರಾಜ್ಯ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುಖ್ಯವಾಗಿ ದೇಶದಲ್ಲೆಡೆ ಡಿಎಲ್ ಮತ್ತು ಆರ್‌ಸಿಗಳ ಸ್ವರೂಪ ಒಂದೇ ರೀತಿಯಲ್ಲಿರಬೇಕೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(ಎಂಒಆರ್ ಟಿಎಚ್) ರೂಪಿಸಿರುವ ನಿಯಮ ಅನುಷ್ಟಾನಗೊಳಿಸಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ.

ಈಗಾಗಲೇ ಎಂ.ಆರ್‌ಟಿಎಚ್ ನೀಡಿರುವ ಮಾರ್ಗ ಸೂಚಿಯಂತೆ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಮತ್ತು ರಿಜಿಸ್ಟರೆಷನ್ ಸರ್ಟಿಫಿಕೆಟ್ (ಆರ್‌ಸಿ) ಮುದ್ರಿಸಿ, ಎತುಸುವ ಖಾಸಗಿ ಸಂಸ್ಥೆಗಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಗುತ್ತಿಗೆದಾರರನ್ನು ಅಂತಿಮಗೊಳಿಸಿ ಸೆಪ್ಟೆಂಬರ್‌ನಿಂದ ಹೊಸ ರೀತಿಯ ಡಿಎಲ್ ಮತ್ತು ಆರ್‌ಸಿ ವಿತರಿಸಲು ಸಾರಿಗೆ ಇಲಾಖೆ (Transport Department) ನಿರ್ಧರಿಸಿದೆ.

ಹೊಸ ಡಿಎಲ್ ಹೇಗಿರುತ್ತೆ?

ಮುಖ್ಯವಾಗಿ ಹೊಸಬಗೆಯ ಡಿಎಲ್‌ನಲ್ಲಿ ಹಲವು ವಿವರಗಳನ್ನು ಅಳವಡಿಸಲಾಗುತ್ತಿದೆ. ಹೊಸ ಡಿಎಲ್‌ನಲ್ಲಿ ಚಾಲಕರ ಹೆಸರು, ಜನ್ಮ ದಿನಾಂಕ, ವಿಳಾಸ, ರಕ್ತದ ಗುಂಪು ವಿವರಗಳ ಜತೆಗೆ ಡಿಎಲ್ ಹೊಂದಿರುವ ವರು ಅಂಗಾಂಗ ದಾನಿಯಾಗಿದ್ದಾರೆಯೇ ಎಂಬುದನ್ನು ಉಲ್ಲೇಖಿಸಲಾಗುತ್ತದೆ. ಜತೆಗೆ ಡಿಎಲ್ ಹೊಂದಿರುವವರ ಮೊಬೈಲ್ ಸಂಖ್ಯೆ, ಅವರ ಸಂಬಂಧಿಕರ ಅಥವಾ ತಕ್ಷಣದಲ್ಲಿ ಕರೆ ಮಾಡಬಹುದಾದ ಮೊಬೈಲ್ ಸಂಖ್ಯೆಗಳನ್ನೂ ನಮೂದಿಸಲಾಗುತ್ತದೆ.

ಸದ್ಯ ಇರುವ ಡಿಎಲ್ ಮತ್ತು ಆರ್‌ಸಿಯಲ್ಲಿ ಒಂದು ಬದಿಯಲ್ಲಿ ಮಾತ್ರ ಎಲ್ಲ ವಿವರಗಳಿದ್ದು, ಇನ್ನೊಂದು ಬದಿ ಯಲ್ಲಿ ಮೈಕ್ರೋಚಿಪ್ ಅಳವಡಿಸಲಾಗಿದೆ. ಹೊಸ ಡಿಎಲ್ ಮತ್ತು ಆರ್‌ಸಿಯ ಎರಡೂ ಬದಿಯಲ್ಲಿ ವಾಹನ ಮತ್ತು ವಾಹನ ಮಾಲೀಕರ ಅಥವಾ ಚಾಲಕರ ವಿವರ ನಮೂದಿಸ ಲಾಗುತ್ತದೆ. ಡಿಎಲ್ ಮತ್ತು ರ್ಆಸಿಗಳು ಲೇಸರ್ ಪ್ರಿಂಟ್ ನಲ್ಲಿ ಮುದ್ರಿಸಲಾಗುತ್ತದೆ. ಇನ್ನು ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿದರೆ ಡಿಎಲ್ ಮತ್ತು ಆರ್‌ಸಿಗೆ ಸಂಬಂಧಿ ಸಿದ ಎಲ್ಲ ವಿವರಗಳು ತಿಳಿಯುವಂತೆ ಮಾಡಲಾಗುತ್ತದೆ.

Leave A Reply

Your email address will not be published.