Bengaluru: ರಾಜಸ್ಥಾನ್ ನಿಂದ ಬೆಂಗ್ಳೂರಿಗೆ ಬಂದ ಮಾಂಸ ಕುರಿಯದ್ದೋ ಇಲ್ಲ ನಾಯಿಯದ್ದೋ? ಸರ್ಕಾರದ ಕೈ ಸೇರಿದ ರಿಪೋರ್ಟ್ ನಲ್ಲಿ ಏನಿದೆ?

Bengaluru: ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದ ಮಾಂಸವು ನಾಯಿಯ ಮಾಂಸ ಅಲ್ಲ. ಕುರಿಯ ಮಾಂಸ ಎಂದು ಹೈದರಾಬಾದ್(Hyderabad) ಸರ್ಕಾರಿ ಪ್ರಯೋಗಾಲಯವು ವರದಿ ನೀಡಿದೆ.
ಕೆಲವು ದಿನಗಳ ಹಿಂದಷ್ಟೇ ಬೆಂಗಳೂರು(Bengaluru) ರೈಲು ನಿಲ್ದಾಣದಲ್ಲಿ ಭಾರೀ ಪ್ರಮಾಣದ ಮಾಂಸ ಸಾಗಾಟ ಪತ್ತೆಯಾಗಿದ್ದು, ಅದರಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಹಿಂದೂಪರ ಸಂಘಟನೆಯ ಪುನೀತ್ ಕೆರೆಹಳ್ಳಿ(Punith Kerehalli) ಅವರು ಆರೋಪಿಸಿ ಕೋಲಾಹಲ ಸೃಷ್ಟಿಸಿದ್ದರು. ಹೀಗಾಗಿ ರಾಜಸ್ಥಾನದಿಂದ ಬೆಂಗಳೂರಿಗೆ ಬಂದ ಮಾಂಸ ನಾಯಿಗಳದ್ದು ಎಂದು ದೊಡ್ಡ ಆತಂಕ ಉಂಟು ಮಾಡಿತ್ತು. ನಂತರ ಅದನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಸದ್ಯ ಆ ಮಾಂಸದ ಪರೀಕ್ಷೆ ನಡೆಸಿದ ಸರ್ಕಾರಿ ಪ್ರಯೋಗಾಲಯವು ವರದಿಯನ್ನು ಪ್ರಕಟಿಸಿದ್ದು, ಅದು ನಾಯಿಯದ್ದಲ್ಲ, ಕುರಿ ಮಾಂಸ ಎಂದು ವರದಿ ನೀಡಿದೆ.
ಹೌದು, ಈ ಕುರಿತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಮಾತನಾಡಿ, ಕುರಿ ಮಾಂಸ ಎಂದು ವರದಿ ಬಂದಿದೆ. ಪ್ರಾಥಮಿಕ ಹಂತದಲ್ಲಿ 9 ಜನರಿಗೆ ಲೈಸೆನ್ಸ್ ಪಡೆದಿದ್ದರು ಎಂಬ ಹಿನ್ನೆಲೆ ನೋಟಿಸ್ ನೀಡಿ ವಿಚಾರಣೆ ಮಾಡಲಾಯಿತು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಲೈಸೆನ್ಸ್ ಇದೆ. ಹೀಗಾಗಿ ರಾಜಸ್ಥಾನದಿಂದ ಕುರಿ ತಂದು ಮಾರಾಟ ಮಾಡುತ್ತಿದ್ದರು. ರಾಜಸ್ಥಾನದಿಂದ ಬಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಈ ಬಗ್ಗೆ ಆರೋಗ್ಯ ಸುರಕ್ಷಣಾ ಗುಣಮಟ್ಟ ಇಲಾಖೆಯು ಮಾಧ್ಯಮ ಪ್ರಕಟಣೆ ಹೊರಡಿಸಿದೆ. ” ಜುಲೈ 26 ರಂದು ಬೆಂಗಳೂರು ನಗರಕ್ಕೆ ರೈಲುಗಳ ಮುಖಾಂತರ ರಾಜಸ್ಥಾನದಿಂದ ಮಾಂಸವು ಸರಬರಾಜು ಆಗುತ್ತಿರುವ ಕುರಿತಂತೆ ಸುದ್ದಿಗಳು ಭಿತ್ತರವಾಗಿರುತ್ತದೆ. ಈ ಕುರಿತಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ಅಧಿಕಾರಿಗಳು ತಪಾಸಣೆ ಮಾಡಿರುತ್ತಾರೆ. ರಾಜಸ್ಥಾನದಿಂದ ಬಂದ ಪಾರ್ಸೆಲ್‌ಗಳಿಂದ ಮಾಂಸದ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಹೈದ್ರಾಬಾದ್‌ನಲ್ಲಿರುವ ಐಸಿಎಆರ್ (ICAR National Meat Research Institute) ಸರ್ಕಾರಿ ಪುಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸದ್ಯ ಕುರಿ ಮಾಂಸ (Ovis anes/ sheep) ಎಂಬ ವರದಿ ಬಂದಿದೆ” ಎಂದು ಇಲಾಖೆ ತಿಳಿಸಿದೆ.
70918248
References:
andro steroid (dribbble.com)
70918248
References:
does steroids stunt your growth (twelvertimes.Com)
70918248
References:
Androgenic Drugs (http://www.remotlyworking.Com)
70918248
References:
what is the best Steroid to use (quickboostx.com)
70918248
References:
casino organizational chart
70918248
References:
Porterville casino