Naresh crying video: ನರೇಶ್ ಗೆ ಮತ್ತೇ ಸಂಕಷ್ಟ! ʼಅವಳು ನನ್ನ ಬಿಟ್ಟು ಹೋದ್ಳುʼ ಅಂತ ಗೋಳಾಡಿದ ನರೇಶ್..! ಅಷ್ಟಕ್ಕೂ ಪವಿತ್ರಾಗೆ ಏನಾಯ್ತು?

Share the Article

Naresh crying video: ಟಾಲಿವುಡ್‌ನ ಬಹುಬೇಡಿಕೆಯ ಹಿರಿಯ ನಟ ನರೇಶ್ ವಿಜಯ ಕೃಷ್ಣ (Naresh) ಮತ್ತು ಕನ್ನಡ ನಟಿ ಪವಿತ್ರಾ ಲೋಕೇಶ್ (Pavitra Lokesh)  ತಮ್ಮ ಕೌಟುಂಬಿಕ ಕಲಹಗಳನ್ನು ಮೀರಿ ಇಬ್ಬರೂ ಜೊತೆಯಾಗಿರುವುದು ಗೊತ್ತೇ ಇದೆ.  ಇದೀಗ ಇವರಿಬ್ಬರು ಐದು ವರ್ಷಕ್ಕೂ ಹೆಚ್ಚು ಕಾಲ ಒಟ್ಟಿಗೆ ವಾಸಿಸುತ್ತಿದ್ದಾರೆ.

ಮೂಲತಃ ನಟ ನರೇಶ್ ಟಾಲಿವುಡ್‌ ಇಂಡಸ್ಟ್ರಿಯಲ್ಲಿ ಹುಟ್ಟಿ ಬೆಳೆದವರು. ವಿಜಯನಿರ್ಮಲಾ ಅವರ ಮೊದಲ ಗಂಡನ ಮಗ ನರೇಶ್. ಬಾಲ ಕಲಾವಿದರಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಂತರ ಹೀರೋ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದರು. ಅಲ್ಲದೆ ನರೇಶ್ ಕಾಮಿಡಿ ಮತ್ತು ರೊಮ್ಯಾಂಟಿಕ್ ನಾಯಕನಾಗಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ನರೇಶ್ ಅಭಿನಯದ ಪ್ರೇಮಲೇಖ, ಎರಡು ಜಲ್ಲಸಿತ, ಜಂಬಲಕಾಡಿ ಪಂಬ, ಆಹಾ ಚಿತ್ರಗಳು ನರೇಶ್‌ಗೆ ಖ್ಯಾತಿ ತಂದುಕೊಟ್ಟವು.

ಇನ್ನು ನರೇಶ್ ವರ್ಷಕ್ಕೆ ಹತ್ತಾರು ಸಿನಿಮಾ ಮಾಡುತ್ತಿದ್ದಾರೆ. ಯಶಸ್ವಿ ನಟ, ನರೇಶ್ ತಮ್ಮ ವೈಯಕ್ತಿಕ ಜೀವನದಲ್ಲಿ ಎಡವಿರುವುದು ಗೊತ್ತೇ ಇದೆ. ಅಂದ್ರೆ ಅವರು ಮೂರು ಬಾರಿ ವಿವಾಹವಾಗಿದ್ದು, ಮೂವರು ಹೆಂಡತಿಯರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಮೂರನೇ ಪತ್ನಿ ರಮ್ಯಾ ರಘುಪತಿ ಜತೆ ಜಗಳವಾಗಿ ಸದ್ಯಕ್ಕೆ ನರೇಶ್ ಪವಿತ್ರ ಜೊತೆಗೆ ಜೀವನ ನಡೆಡುತ್ತಿದ್ದಾರೆ.

ಆಶ್ಚರ್ಯ ಅಂದ್ರೆ ಈ ನಡುವೆ ನರೇಶ್ ಅವರ ವಿಡಿಯೋ ಒಂದು ವೈರಲ್ (Naresh crying video)  ಆಗಿದ್ದು, ನರೇಶ್ ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನನ್ನ ಮಗು ಕಾಣೆಯಾಗಿದೆ.. ಯಾರಾದರೂ ಎಲ್ಲಿಯಾದರೂ  ಕಂಡರೆ ದಯವಿಟ್ಟು ತಿಳಿಸಿ ಅಂತ ಬೇಡಿಕೊಂಡಿದ್ದಾರೆ.. ಇದೊಂದು ಪ್ರಚಾರದ ವಿಡಿಯೋ ಅಂತ ಕಂಡು ಬರುತ್ತಿದೆ.ಆದ್ರೆ ನರೇಶ್ ನಟನೆಯ ವೀರಾಂಜನೇಯುಲು ವಿಹಾರಯಾತ್ರೆ ಈ ಸಿನಿಮಾದ ಪ್ರಚಾರದ ಭಾಗವಾಗಿ ನರೇಶ್ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.