Rakshit Shetty: ಕಾಪಿರೈಟ್‌ ವಿಚಾರ- ರಕ್ಷಿತ್‌ ಶೆಟ್ಟಿ ನಿರ್ಮಾಣ ಸಂಸ್ಥೆಯಿಂದ ಹೊರಬಿತ್ತು ಮೊದಲ ಪ್ರತಿಕ್ರಿಯೆ

Share the Article

Rakshit Shetty: ಬೆಂಗಳೂರಿನ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ನಟ ರಕ್ಷಿತ್‌ ಶೆಟ್ಟಿ ವಿರುದ್ಧ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಮಾಧ್ಯಮವೊಂದಕ್ಕೆ ರಕ್ಷಿತ್‌ ಶೆಟ್ಟಿ ಟೀಮ್‌ ತಮ್ಮ ಪ್ರತಿಕ್ರಿಯೆಯನ್ನು ನೀಡಿದೆ. ಈ ವಿಚಾರವಾಗಿ ನಮಗೆ ಇಲ್ಲಿಯವರೆಗೆ ಯಾವುದೇ ನೋಟಿಸ್‌ ಬಂದಿಲ್ಲ ಎಂದು ಹೇಳಿದ್ದಾರೆ.

ಬ್ಯಾಚುಲರ್‌ ಪಾರ್ಟಿ ಸಿನಿಮಾದಲ್ಲಿ ಹಾಡು ಬಳಕೆ ಮಾಡಿದ ಆರೋಪದಲ್ಲಿ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪರಮ್ವಾ ಸ್ಟುಡಿಯೋಸ್‌ ಪ್ರತಿಕ್ರಿಯೆ ನೀಡಿದೆ. ನಮಗೆ ಇದುವರೆಗೆ ಯಾವುದೇ ನೋಟಿಸ್‌ ಬಂದಿಲ್ಲ. ನೋಟಿಸ್‌ ಬಂದರೆ ಉತ್ತರಿಸುತ್ತೇವೆ ಎಂದು ಹೇಳಿದ್ದಾರೆ.

ಪ್ರಕರಣದ ವಿವರ;
ನ್ಯಾಯ ಎಲ್ಲಿದೆ ಚಿತ್ರದ ನ್ಯಾಯ ಎಲ್ಲಿದೆ ಹಾಡು ಮತ್ತು ಗಾಳಿ ಮಾತು ಚಿತ್ರದ ʼಒಮ್ಮೆ ನಿನ್ನನ್ನುʼ ಚಿತ್ರದ ಹಾಡನ್ನು ಅನಧಿಕೃತ ಬಳಕೆ ಮಾಡಿದ ಆರೋಪದಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ಪರಮ್ವಾ ಸ್ಟುಡಿಯೋಸ್‌ ವಿರುದ್ಧ ಎಂಆರ್‌ಟಿ ಮ್ಯೂಸಿಕ್‌ ಪಾಲುದಾರರಾಗಿರುವ ನವೀನ್‌ ಕುಮಾರ್‌ ಅವರು ದೂರು ದಾಖಲು ಮಾಡಿದ್ದಾರೆ.

Leave A Reply