Raichur: ಕಾಲೇಜಿಗೆ ಚಕ್ಕರ್, ಪಬ್ಲಿಕ್ ಪ್ಲೇಸ್‌ನಲ್ಲಿ ಪ್ರೇಮಿಗಳ ಹಗ್, ಕಿಸ್
Raichur: ಮಕ್ಕಳನ್ನು ಹೆತ್ತವರು ಉತ್ತಮ ವ್ಯಾಸಂಗಕ್ಕಾಗಿ ಕಾಲೇಜಿಗೆಂದು ಕಳುಹಿಸಿದರೆ ಮಕ್ಕಳು ಕ್ಲಾಸಿಗೆ ಚಕ್ಕರ್ ಹಾಕಿ ಪ್ರೀತಿ, ಪ್ರೇಮ ಪಾಠವನ್ನು ಕಲಿಯಲು ಹೋಗುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿಯೇ ಕುಳಿತು ಕಿಸ್ಸಿಂಗ್, ಹಗ್ಗಿಂಗ್ ಮಾಡುತ್ತಾ ಪ್ರೀತಿಯ ಅಲೆಯಲ್ಲಿ ತೇಲುತ್ತಿದ್ದಾರೆ.
ಮೇಲೆ ಹಾಕಿರುವ ಫೊಟೋ ರಾಯಚೂರು ನಗರದ ಕನ್ನಡ ಭವನದ ಆವರಣದಲ್ಲಿ ಕಂಡು ಬಂದಿರುವುದು. ಕಾಲೇಜಿಗೆ ಚಕ್ಕರ್ ಹಾಕಿ ಬರುವ ಕೆಲವೊಂದಿಷ್ಟು ಜೋಡಿಗಳು ಪ್ರತಿನಿತ್ಯ ಇಲ್ಲಿ ಬಂದು ಸುಮಾರು ಹೊತ್ತು ಕುಳಿತು ಹರಟೆ ಹೊಡೆದು, ರಸ್ತೆಯಲ್ಲಿ ಜನ ಸಂಚಾರ ಕಡಿಮೆಯಾಗುತ್ತಿದ್ದಂತೆ ರೋಮ್ಯಾನ್ಸ್ ಮೂಡಿಗೆ ಹೋಗುತ್ತಾರೆ.
ಹುಡುಗಿ ಕಂಪೌಂಡ್ ಮೇಲೆ ಕುಳಿತರೆ ಹುಡುಗ ಕೆಳಗಿನಿಂದ ಬಂದು ಆಕೆಯನ್ನು ತಬ್ಬಿ ಪ್ರೀತಿ ಮಾಡುತ್ತಾನೆ. ಇದನ್ನು ಜನರು ನೋಡಿ ಅಸಹ್ಯದಿಂದ ಮುಖ ತಿರುಗುಸಿ ಹೋಗುತ್ತಾರೆ.
ಏನಾದರೂ ಕೆಲವು ಸಹನೆ ಮೀರಿ ಬೈದರೆ, ಕೆಲವು ತಮಗ್ಯಾಕೆ ಈ ಉಸಾಬರಿ ಎಂದು ಅಲ್ಲಿಂದ ಹೋಗುತ್ತಾರೆ.
ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಗಳ ಈ ಅಸಹ್ಯ ವರ್ತನೆ ಕುರಿತು ಜನರು ಅಸಹ್ಯ ಪಡುತ್ತಿದ್ದಾರೆ. ಇವರ ಪೋಷಕರಿಗೆ ಮಾಹಿತಿ ಎಂದು ಮನವಿ ಮಾಡಿದ್ದಾರೆ.