Jobs: ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶ! ಕೂಡಲೇ ಅರ್ಜಿ ಸಲ್ಲಿಸಿ!

Jobs: ಭಾರತೀಯ ಅಂಚೆ ಕಚೇರಿಯಲ್ಲಿ (Indian Post) ಉದ್ಯೋಗ (Jobs) ಹುಡುಕುತ್ತಿರುವವರಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಹೌದು, ಚಿಕ್ಕಮಗಳೂರು ತಾಲ್ಲೂಕು ವಿಭಾಗದ ವ್ಯಾಪ್ತಿಯಲ್ಲಿ ಬರುವ ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಜೀವವಿಮೆ ಏಜೆಂಟರುಗಳಾಗಿ ಕಾರ್ಯನಿರ್ವಹಿಸಲು ಅಂಚೆ ಇಲಾಖೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಮೇಲಿನ ಉದ್ಯೋಗ ಪಡೆಯಲು ಅಭ್ಯರ್ಥಿಗಳು 18 ವರ್ಷದವರಾಗಿದ್ದು, ಎಸ್ಎಸ್ಎಲ್‌ಸಿ ವ್ಯಾಸಂಗ ಮಾಡಿರಬೇಕು. ಅಲ್ಲದೇ, ಕಂಪ್ಯೂಟರ್ ಬಳಕೆ ಮತ್ತು ಪ್ರಾದೇಶಿಕ ಸ್ಥಳದ ಸಂಪೂರ್ಣ ಮಾಹಿತಿ ತಿಳಿದಿರಬೇಕಾಗುತ್ತದೆ.
ಈ ಮೇಲಿನ ಉದ್ಯೋಗ ಮಾಡಲಿಚ್ಚಿಸುವ ಆಸಕ್ತರು ತಮ್ಮ ಸಂಪೂರ್ಣ ವಿವರ ಹಾಗೂ ದಾಖಲಾತಿಗಳೊಂದಿಗೆ ನಗರದ ಎಪಿಎಂಸಿ ಪಕ್ಕದ ಅಂಚೆ ಅಧೀಕ್ಷಕರ ಕಛೇರಿಗೆ ಜುಲೈ 10 ರಂದು ಬೆಳಿಗ್ಗೆ 11 ಗಂಟೆಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಅಂಚೆ ಅಧೀಕ್ಷಕ ಎನ್.ರಮೇಶ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ 9448128591 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಸದ್ಯ ಈ ಹುದ್ದೆಗೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ನಿರುದ್ಯೋಗಿಗಳು, ಸ್ವ ಉದ್ಯೋಗಿಗಳು, ಇತರ ವಿಮಾ ಕಂಪನಿಗಳ ಕಾರ್ಯ ನಿರ್ವಹಿಸಿದ ಮಾಜಿ ಏಜೆಂಟರುಗಳಿಗೂ ಅವಕಾಶವಿದೆ.
Raichur: ಕಾಲೇಜಿಗೆ ಚಕ್ಕರ್, ಪಬ್ಲಿಕ್ ಪ್ಲೇಸ್‌ನಲ್ಲಿ ಪ್ರೇಮಿಗಳ ಹಗ್, ಕಿಸ್