Hyderabad: ಹೋಮ್‌ವರ್ಕ್‌ ಮಾಡ್ತಿದ್ದ 5 ವರ್ಷದ ಯುಕೆಜಿ ಮಗುವಿನ ಪ್ರಾಣ ತೆಗೆದ ಪೆನ್‌

Hyderabad: ಮಂಚದ ಮೇಲೆ ಕುಳಿತು ಬರೆಯುತ್ತಿದ್ದ ಐದು ವರ್ಷದ ಯುಕೆಜಿ ವಿದ್ಯಾರ್ಥಿನಿಯೋರ್ವಳ ತಲೆಗೆ ಪೆನ್‌ ಚುಚ್ಚಿದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

 

Gold Price Hike: ಆಭರಣ ಪ್ರಿಯರಿಗೆ ಕಹಿ ಸುದ್ದಿ! ಚಿನ್ನ ದರದಲ್ಲಿ ಏರಿಕೆ!

ರಿಯಂಶಿಕಾ ಎಂಬ ಬಾಲಕಿಯೇ ಮೃತ ಹೊಂದಿದ್ದು. ತೆಲಂಗಾಣದ ಭದ್ರಾದ್ತಿ ಕೊತ್ತಗುಡ್ಡಂ ಜಿಲ್ಲೆಯ ಭದ್ರಾಚಲಂ ನಗರದಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ರಿಯಂಶಿಕಾ ಮಂಚದ ಮೇಲೆ ಕುಳಿತು ಹೋಮ್‌ವರ್ಕ್‌ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಬಂದ ರಿಯಂಶಿಕಾ ಮಂಚದ ಮೇಲೆ ಕುಳಿತು ಹೋಮ್‌ವರ್ಕ್‌ ಮಾಡುತ್ತಿದ್ದಾಗ ಮಂಚದ ಮೇಲಿಂದ ಹಠಾತ್‌ ಕೆಳಗೆ ಬಿದ್ದಿದ್ದು, ಈ ವೇಲೆ ಆಕೆಯ ಕೈನಲ್ಲಿದ್ದ ಪೆನ್‌ ತಲೆಗೆ ಚುಚ್ಚಿದೆ.

ಮನೆಮಂದಿ ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ನೀಡಿಸಿದರೂ, ಮಂಗಳವಾರ ಸರ್ಜರಿ ಮಾಡಿದರೂ ಬಾಲಕಿ ಮೃತ ಹೊಂದಿದ್ದಾಳೆ.

School Rules: ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಮೊಬೈಲ್ ಬಳಕೆ ಸಂಪೂರ್ಣ ನಿಷೇಧ: ರಾಜ್ಯ ಸರ್ಕಾರ ಆದೇಶ!

Leave A Reply

Your email address will not be published.