Tulu language in google translate: ತುಳು ಭಾಷೆಗೆ ವಿಶ್ವ ಮನ್ನಣೆ ನೀಡಿದ ಗೂಗಲ್ – ರಾಜಕಾರಣಿಗಳಿಂದ ಆಗದ್ದನ್ನು ಮಾಡಿ ತೋರಿದ ದೈತ್ಯ ಕಂಪೆನಿ !!

Tulu language in google translate: ತುಳು ಭಾಷೆ ಕರಾವಳಿಗರ ಉಸಿರು, ಜೀವ, ಜೀವನ, ಭಾವನೆಯಾಗಿ ಬೇರೆತುಹೋಗಿದೆ. ಹೀಗಾಗಿ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿಗೂ ಅಧಿಕೃತ ಸ್ಥಾನಮಾನ ದೊರೆಯಬೇಕು ಎಂಬುವುದು ಹಲವಾರು ವರುಷಗಳಿಂದ ಅವರಿಂದ ಬರುತ್ತಿರುವ ಕೂಗು. ಆದರೆ ಇದಕ್ಕೆ ಯಾವ ರಾಜಕಾರಣಿಗಳು ಸೊಪ್ಪು ಹಾಕಲಿಲ್ಲ. ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಡುವ ಚಾಳಿ ರೂಡಿಸಿಕೊಂಡರಷ್ಟೆ. ಆದರೀಗ ಇವರಾರು ಮಾಡದ, ಇವರೆಲ್ಲರಿಗೂ ನಾಚಿಕೆ ಉಂಟುಮಾಡಿ, ತುಳುವರ ಮನಗೆಲ್ಲುವ ಕೆಲಸವನ್ನು ವಿಶ್ವದ ದೈತ್ಯ ಕಂಪೆನಿ ಗೂಗಲ್(Google) ಮಾಡಿ ತೋರಿಸಿದೆ.

ಹೌದು, ತುಳು ಭಾಷೆಯನ್ನು(Tulu Language) ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು ಮತ್ತು ಅಧಿಕೃತ ಭಾಷೆ ಸ್ಥಾನಮಾನ ಬೇಡಿಕೆಯನ್ನು ನಮ್ಮ ಸರ್ಕಾರಗಳಿಗೆ ಈಡೇರಿಸಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಜಗತ್ತಿನ ದೈತ್ಯ ಸಂಸ್ಥೆ ಗೂಗಲ್ ತುಳುವಿಗೆ ಸ್ಥಾನ ನೀಡಿದೆ. ಇದೇ ಮೊದಲ ಬಾರಿಗೆ ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿದೆ(Tulu language in google translate)ಹೀಗಾಗಿ ಕಳೆದ ಕೆಲವು ದಿನಗಳಿಂದ ಗೂಗಲ್ ನಲ್ಲಿ ತುಳು ರಾರಾಜಿಸುತ್ತಿದೆ.

ಅಂದಹಾಗೆ ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ಜಾಗತಿಕವಾಗಿ ಸಂದ ಗೌರವವಾಗಿದೆ. ತುಳುವರು ಸಂಭ್ರಮಪಡುವಂಥ ವಿಚಾರ ಇದು. ತುಳುವಿಗೆ ಸ್ಥಾನಮಾನ ಕೊಡಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹಿಂದೇಟು ಹಾಕುತ್ತಿದ್ದರೆ, ಇತ್ತ ಜಾಗತಿಕ ಕಂಪೆನಿಯಿಂದ ತುಳುವಿಗೆ ಮನ್ನಣೆ ಸಿಕ್ಕಿ ಟ್ರಾನ್ಸ್‌ಲೇಟ್‌ಗೆ ಸೇರಿಸಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದಾಗಿ ಇನ್ಮುಂದೆ ತುಳುವೇತರರೂ ತುಳು ಭಾಷೆ ಕಲಿಯಲು ಇದು ಪ್ರೇರಣೆ ನೀಡಲಿದೆ. ಯಾರ ಸಹಾಯವೂ ಇಲ್ಲದೆ ತುಳುವಿನ ಪದ ಬಳಕೆಯನ್ನು ಇದರಲ್ಲಿ ಅರ್ಥ ಮಾಡಿಕೊಳ್ಳಬಹುದು.

ಇನ್ನು ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಅದು ಎಲ್ಲಾ ಭಾಷೆಗಳಲ್ಲೂ ಆಗುತ್ತೆ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್ ಬ್ಯಾಕ್ ಕಾಲಂನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ ಗೂಗಲ್ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುತ್ತದೆ. ಒಟ್ಟಿನಲ್ಲಿ ಕೈಲಾಗದ ನಮ್ಮ ನಮ್ಮ ರಾಜಕೀಯ ನಾಯಕರ ಮುಂದೆಯೇ ನಮ್ಮ ಭಾಷೆಗೆ ವಿಶ್ವ ಮನ್ನಣೆ ಸಿಕ್ಕಿದ್ದು ಗ್ರೇಟ್. ಅದನ್ನು ನೀಡಿದ ಗೂಗಲ್ ಗೆ ತುಳುವರ ಪರವಾಗಿ ಧನ್ಯವಾದಗಳು.

T 20 India Champion: ಕಣ ರಣ ರೋಚಕ; 17 ವರ್ಷಗಳ ಬಳಿಕ ಟಿ ಟ್ವೆಂಟಿ ಗೆದ್ದ ಭಾರತ, ದಕ್ಷಿಣ ಆಫ್ರಿಕಾ ಮತ್ತೆ ‘ಚೋಕರ್ಸ್’ !

Leave A Reply

Your email address will not be published.