Jharkhand : ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್- 25 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರತಿ ತಿಂಗಳು ಕೈ ಸೇರುತ್ತೆ 1,000 ರೂ !!
Jharkhand: ಕರ್ನಾಟಕದಲ್ಲಿ ರಾಜ್ಯ ಸರ್ಕಾರವು(Karnataka Government) ಜಾರಿಗೆ ತಂದಿರುವ ಗೃಹಲಕ್ಷ್ಮೀ(Gruhalakshmi) ಯೋಜನೆಯು ಕೆಲವು ನೆರೆ ಹೊರೆಯ ರಾಜ್ಯ ಸರ್ಕಾರಗಳಿಗೂ ಮಾದರಿಯಾಗಿದೆ. ಅಂತೆಯೇ ಇದೀಗ ಜಾರ್ಖಂಡ್(Jharkhand) ಸರ್ಕಾರವು ತನ್ನ ರಾಜ್ಯದಲ್ಲಿ ಮಹಿಳೆಯರಿಗೆ ಇದೇ ರೀತಿಯ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ.
ಹೌದು, ಜಾರ್ಖಂಡ್ ನಲ್ಲಿ ಅಧಿಕಾರದಲ್ಲಿರುವ ಮುಕ್ತಿ ಮೋರ್ಚಾ ಸರ್ಕಾರವು 25 ರಿಂದ 50 ವರ್ಷದೊಳಗಿನ ಬಡ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಅದೇನೆಂದರೆ ಪ್ರತಿ ತಿಂಗಳು ಈ ಮಹಿಳೆಯರಿಗೆ 1,000 ರೂಪಾಯಿ ನೀಡಲಿದೆ. ಈ ಯೋಜನೆಯಿಂದ 40 ಲಕ್ಷ ಮಹಿಳೆಯರಿಗೆ ಲಾಭ ಆಗಲಿದೆ ಎಂದು ತಿಳಿದುಬಂದಿದೆ.
ಅಂದಹಾಗೆ ‘ಮುಖ್ಯಮಂತ್ರಿ ಸಹೋದರಿ-ಮಗಳು ಸ್ವಾವಲಂಬನ ಪ್ರೊತ್ಸಾಹ ಯೋಜನಾ’ ಎಂದು ಇದಕ್ಕೆ ಹೆಸರಿಸಲಾಗಿದ್ದು, ಈ ಯೋಜನೆಯನ್ನು ಜುಲೈ 1 ರಿಂದ ಪ್ರಾರಂಭವಾಗಲಿದೆ. ಸರ್ಕಾರ ಶೀಘ್ರದಲ್ಲೇ ಶಿಬಿರ ಆಯೋಜಿಸಿ ಅರ್ಜಿಗಳನ್ನು ತೆಗೆದುಕೊಳ್ಳಲಿದೆ. ಅರ್ಜಿಯ ಪ್ರಕ್ರಿಯೆ ಜುಲೈನಲ್ಲಿ ಪೂರ್ಣಗೊಳ್ಳಲಿದ್ದು, ಈ ಯೋಜನೆಯ ಮೂಲಕ ಆಗಸ್ಟ್‌ನಿಂದ ಮಹಿಳೆಯರ ಖಾತೆಗಳಿಗೆ ಹಣ ರವಾನೆವಾಗಬಹುದು ಎಂದು ಹೇಳಲಾಗಿದೆ.
ಈ ಹಣದಿಂದ ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮವಾಗಲಿದ್ದು, ಹಣಕಾಸಿನ ವಿಚಾರದಲ್ಲಿ ಕೊಂಚ ಸ್ವಾವಲಂಬಿಯಾಗಲಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ. ಈ ಯೋಜನೆಯಿಂದ ವರ್ಷಕ್ಕೆ 4 ಸಾವಿರ ಕೋಟಿ ರೂಪಾಯಿಗೂ ಅಧಿಕ ಖರ್ಚಾಗಬಹುದು ಎಂದು ಮೂಲಗಳು ತಿಳಿಸಿವೆ.
ಸದ್ಯ ಈ ಯೋಜನೆಯ ಪ್ರಸ್ತಾವನೆಯನ್ನು ಆರ್ಥಿಕ ಸಚಿವಾಲಯ ಹಾಗೂ ಸಂಪುಟದ ಮುಂದೆ ಇರಿಸಲಾಗಿದೆ. ಪ್ರಸ್ತಾವನೆಗೆ ಒಪ್ಪಿಗೆ ಸಿಗುತ್ತಿದ್ದಂತೆ ಯೋಜನೆ ಜಾರಿಗೆ ಬರಲಿದೆ. ಈ ಯೋಜನೆಯಡಿ ಎಲ್ಲಾ ಸಮುದಾಯದ 25 ರಿಂದ 50 ವರ್ಷದೊಳಗಿನ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ.
Hassan: ಮೂಳೆ ಮುರಿತದ ಆಪರೇಶನ್ ಚಿಕಿತ್ಸೆಗೆ ಮೆಹೆಂದಿ ಕೋನ್ ತರಿಸಿದ ವೈದ್ಯ !! ಯಾಕಿರಬಹುದು?