

Top Beer Brands: ಯಾವುದೇ ಪಾರ್ಟಿ, ಸಮಾರಂಭಗಳ ಎಂಡ್ ನಲ್ಲಿ ಒಂದು ಬಿಯರ್ ಚಿಯರ್ಸ್ ಇದ್ದೇ ಇರುತ್ತೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಮದ್ಯಪಾನಿಗಳ ಸಂಖ್ಯೆಯು ಹೆಚ್ಚುತ್ತಲಿದ್ದು, ಅದರಲ್ಲೂ ಬಿಯರ್ ಕುಡಿಯುವವರ ಸಂಖ್ಯೆಯು ಏರುತ್ತಲೇ ಇದೆ. ಹವಾಮಾನ ವೈಪರಿತ್ಯವೂ ಇದಕ್ಕೆ ಕಾರಣವೆಂದು ಹೇಳಬಹುದು. ಇನ್ನು ನೀವು ಬಿಯರ್ ಪ್ರೇಮಿಗಳಾಗಿದ್ದರೆ ನಿಮಗೊಂದು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಹೌದು, ಭಾರತದಲ್ಲಿ (India) ಹೆಚ್ಚು ಮಾರಾಟವಾಗುವ 10 ಬ್ರ್ಯಾಂಡ್‌ಗಳ ಪಟ್ಟಿ (Top Beer Brands) ಇಲ್ಲಿದೆ.
ಇನ್ಮೇಲೆ ಗರ್ಭಧಾರಣೆ ತಡೆಯುವ ಚಿಂತೆಯಿಲ್ಲ ; ಅನಾವಶ್ಯಕ ಗರ್ಭಧಾರಣೆ ತಡೆಯಲು ಲಭ್ಯವಾಗಲಿದೆ ಈ ಜೆಲ್!
ನಂಬರ್ 1 ಸ್ಥಾನದಲ್ಲಿರುವ ಕಿಂಗ್‌ಫಿಶರ್ ಯುನೈಟೆಡ್ ಬ್ರ್ಯೂಸ್ ಗ್ರೂಪ್, ಬೆಂಗಳೂರು ಇದರ ಉತ್ಪನ್ನವಾಗಿದೆ. ಭಾರತದ ಬೀರು ಪ್ರಿಯರ ಮನಗೆದ್ದಿರುವ ಕಿಂಗ್‌ಫಿಶರ್‌ನ ಹುಳಿ ಸಿಹಿಯು ಅತ್ಯಂತ ವಿಶೇಷವಾಗಿದೆ ಮತ್ತು ಅದರ ತಾಜಾ ರುಚಿಯಿಂದಾಗಿ, ಬಿಯರ್ ಪ್ರಿಯರಲ್ಲಿ ಕಿಂಗ್‌ಫಿಶರ್ ಹೆಚ್ಚು ಇಷ್ಟವಾಗುತ್ತದೆ.
ನಂಬರ್ 2 ನೇ ಸ್ಥಾನದಲ್ಲಿರುವ ಹೈವಾರ್ಡ್ಸ್, ಸ್ಟ್ರಾಂಗ್ ಬೀರ್ ಎಂಬ ಖ್ಯಾತಿ ಪಡೆದುಕೊಂಡಿದೆ ಅಂತೆಯೇ ಇದರ ರುಚಿ ಕೂಡ ಬೀರು ಪ್ರಿಯರ ಮನಗೆದ್ದಿರುವ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ. ಇದು 7% ಕ್ಕಿಂತ ಹೆಚ್ಚು ಆಲ್ಕೋಹಾಲ್ ಪ್ರಮಾಣವನ್ನು ಹೊಂದಿದೆ ಮತ್ತು ಈ ಬಿಯರ್ ಭಾರತೀಯ ಗ್ರಾಹಕರ ಬಾಯಾರಿಕೆಯನ್ನು ನಂಬಲಾಗದಷ್ಟು ಚೆನ್ನಾಗಿ ತಣಿಸುತ್ತದೆ.
ಮೂರನೇ ಸ್ಥಾನದಲ್ಲಿರುವ ರಾಯೆಲ್ ಚಾಲೆಂಜ್ ಬೀರು ಪ್ರಿಯರ ಮನಗೆದ್ದಿರುವ ಬ್ರ್ಯಾಂಡ್ ಎಂದೆನಿಸಿದೆ. ಕೈಗೆಟಕುವ ದರದಲ್ಲಿ ದೊರೆಯುವ ಈ ಬ್ರ್ಯಾಂಡ್, ಭಾರತಾದ್ಯಂತವಿರುವ ಬೀರು ಪ್ರಿಯರ ಮೆಚ್ಚಿನ ಬ್ರ್ಯಾಂಡ್ ಕೂಡ ಹೌದು.
ಥಂಡರ್‌ಬೋಲ್ಟ್ ಅತ್ಯಂತ ಹೆಚ್ಚಿನ ಫ್ಯಾನ್ ಫಾಲೋವರ್ಸ್ ಹೊಂದಿರುವ ಈ ಬ್ರ್ಯಾಂಡ್, ನಾಲ್ಕನೇ ಸ್ಥಾನದಲ್ಲಿದೆ. ಇದರಲ್ಲಿ ಆಲ್ಕೊಹಾಲಿಕ್ ಅಂಶ ಹೆಚ್ಚಿದ್ದು, ಬೋಲ್ಡ್ ಫ್ಲೇವರನ್ನೊಳಗೊಂಡಿದೆ. ಬೀರ್ ಪ್ರಿಯರಲ್ಲಿ ಈ ಬ್ರ್ಯಾಂಡ್ ಅತಿ ಹೆಚ್ಚು ಫೇವರೇಟ್ ಎಂದೆನಿಸಿದೆ.
ಐದನೇ ಸ್ಥಾನದಲ್ಲಿ ಅಮೇರಿಕನ್ ಸ್ಟೈಲ್ ಬೀರ್ ಬಡ್‌ವೈಸರ್, ಬೆಲ್ಜಿಯನ್ ಕಂಪನಿ ಏಬಿ ಇನ್‌ಬೇವ್‌ನ ಉತ್ಪನ್ನವಾಗಿದೆ. ಭಾರತದಲ್ಲಿ ಈ ಬ್ರ್ಯಾಂಡ್ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಇದರ ರುಚಿಗಾಗಿ ಇದು ಹೆಸರು ಪಡೆದುಕೊಂಡಿದೆ.
ಕಾರ್ಲ್ಸ್‌ಬರ್ಗ್ ಸಮೂಹದ್ದೇ ಇನ್ನೊಂದು ಬ್ರ್ಯಾಂಡ್ ಎಂದೆನಿಸಿರುವ ಟ್ಯುಬೊರ್ಗ್, ಆರನೇ ಸ್ಥಾನ ಪಡೆದುಕೊಂಡಿದೆ. ಇದು ಕೇವಲ 4.8% ಆಲ್ಕೋಹಾಲ್ ಅನ್ನು ಹೊಂದಿರುತ್ತದೆ. ನೀವು ಯಾವುದೇ ಸಂದರ್ಭದಲ್ಲಿ ಈ ಬಿಯರ್ ಅನ್ನು ಸೇವಿಸಬಹುದು. ಇದರೊಂದಿಗೆ ನೀವು ಸಲಾಡ್ ಮತ್ತು ಮಸಾಲೆ ಭಕ್ಷ್ಯಗಳಂತಹ ಯಾವುದೇ ಲಘು ಆಹಾರವನ್ನು ಸೇವಿಸಬಹುದು. ಇದು ಹಗುರ ಹಾಗೂ ಸರಳವಾದ ಪಾನೀಯ ಎಂದೆನಿಸಿಕೊಂಡಿದ್ದು, ಭಾರತದ ಬೀರ್ ಮಾರ್ಕೆಟ್‌ನಲ್ಲಿ ಅತಿ ಹೆಚ್ಚು ಸೇಲ್ ಆಗುವ ಬ್ರ್ಯಾಂಡ್ ಪಟ್ಟಿಯಲ್ಲಿದೆ. ಬಿಯರ್ ಅನ್ನು ವಿಶ್ವದ ಅತ್ಯುತ್ತಮ ಬಿಯರ್ ಎಂದು ಕರೆಯಬಹುದು.
ಏಳನೇ ಸ್ಥಾನದಲ್ಲಿರುವ ಕಾರ್ಲ್ಸ್‌ಬರ್ಗ್ ಬ್ರ್ಯಾಂಡ್, ಗುಣಮಟ್ಟ, ರುಚಿಯೊಂದಿಗೆ ಗ್ರಾಹಕರ ಮನ ಗೆದ್ದಿದೆ . ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬೀರ್ ಬ್ರ್ಯಾಂಡ್ ಆಗಿ ಕಾರ್ಲ್ಸ್‌ಬರ್ಗ್ ಜನಪ್ರಿಯವಾಗಿದೆ. ಇದರ ತಿಳಿ ಹಳದಿ ಲಾಗರ್ ನಿಮ್ಮ ನಾಲಿಗೆಯಲ್ಲಿ ಸ್ವಲ್ಪ ಕಹಿಯನ್ನು ಬಿಡುತ್ತದೆ. ಈ ಬಿಯರ್ ಕುಡಿದ ನಂತರ ನೀವು ಒಂದು ಅನನ್ಯ ಅನುಭವವನ್ನು ಪಡೆಯುತ್ತೀರಿ.
ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿರುವ ಹೆಂಕನ್ ಬ್ರ್ಯಾಂಡ್ ಬೀರ್ ಪ್ರಿಯರ ಮೆಚ್ಚಿನ ಬ್ರ್ಯಾಂಡ್ ಎಂದೆನಿಸಿದೆ. ಗುಣಮಟ್ಟದ ಬ್ರ್ಯಾಂಡ್ ಆಗಿರುವ ಹೆಂಕನ್ ಗ್ರಾಹಕರ ಮೆಚ್ಚಿನ ಬ್ರ್ಯಾಂಡ್ ಎಂದೆನಿಸಿದೆ.
ಒಂಭತ್ತನೇ ಸ್ಥಾನ ಪಡೆದುಕೊಂಡಿರುವ ಕೊರೊನ ಬ್ರ್ಯಾಂಡ್ ಗ್ರಾಹಕರ ಮೆಚ್ಚಿನ ಬ್ರ್ಯಾಂಡ್ ಎಂದೆನಿಸಿದೆ. ರುಚಿ, ಪರಿಮಳ ಹಾಗೂ ಆಹ್ಲಾದತೆಯಿಂದ ಕೊರೊನಾ ಬ್ರ್ಯಾಂಡ್ ಹೆಸರು ಗಳಿಸಿದ್ದು, ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್ ಆಗಿ ಖ್ಯಾತಿ ಪಡೆದುಕೊಂಡಿದೆ.
ಇನ್ನು 10 ನೇ ಸ್ಥಾನದಲ್ಲಿರುವ ಬೀರಾ, ರಿಫ್ರೆಶಿಂಗ್ ಸ್ವಾದವನ್ನು ನೀಡುವ ಬಿಯರ್ ಬ್ರ್ಯಾಂಡ್ ಎಂದೆನಿಸಿದೆ. ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಬಿರಾ ಮಸಾಲೆಯುಕ್ತ ಸಿಟ್ರಸ್ ಮತ್ತು ಕಹಿಯೊಂದಿಗೆ ಸೌಮ್ಯವಾದ ಪರಿಮಳವನ್ನು ಹೊಂದಿದೆ.













