Narayana Murthy: ಇದೊಂದು ಬುಕ್ ಓದಿ, ಲೈಫಲ್ಲಿ ಸಕ್ಸಸ್ ಫಿಕ್ಸ್ ಅಂತಾರೆ ಇನ್ಫೋಸಿಸ್ ನಾರಾಯಣ ಮೂರ್ತಿ !!

Narayana Murthy: ಇನ್ಫೋಸಿಸ್‌ನ(Infosys) ಸಂಸ್ಥಾಪಕ ನಾರಾಯಣ ಮೂರ್ತಿ(Narayana Murthy) ಇತ್ತೀಚೆಗೆ ಸಾಕಷ್ಟು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಎಂಪ್ಲಾಯ್ ಗಳ ಕುರಿತು, ಕೆಲಸ ಮಾಡುವ ವಿಚಾರದ ಕುರಿತು, ಆರ್ಥಿಕಥಯ ಅಭಿವೃದ್ಧಿ ಕುರಿತು ಯಾವುದಾದರೂ ಒಂದು ವಿಚಾರವನ್ನು ಅವರು ಮಾತನಾಡುತ್ತ ಯುವಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅಂತೆಯೇ ಇದೀಗ ಅವರು ಸಂದರ್ಶನವೊಂದರಲ್ಲಿ ಆಡಿದ ಮಾತು ವೈರಲ್‌ ಆಗಿದೆ. ದೇಶದ ಪ್ರತಿಯೊಬ್ಬ ಮಕ್ಕಳು ಕೂಡ ಆ ಒಂದು ಪುಸ್ತಕವನ್ನು ಓದ್ಲೇಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: Gold Price: ಚಿನ್ನದ ದರದಲ್ಲಿ ಇಳಿಕೆ !!

ಹೌದು, ಅನೇಕರಿಗೆ ಅದರಲ್ಲೂ ಯುವ ಜನತೆಗೆ ಯಾರಾದರೂ ಒಬ್ಬರು ಒಂದು ಕ್ಷೇತ್ರದಲ್ಲಿ ಸಕ್ಸಸ್ ಕಂಡಿರುವವರು ಬದುಕು ರೂಪಿಸಿಕೊಳ್ಳುವಂತಹ ಏನಾದರೂ ಒಂದು ಸಲಹೆಯನ್ನು ನೀಡಿದರೆ ಅದನ್ನು ಚಾಚು ತಪ್ಪದೆ ಮಾಡುತ್ತಾರೆ. ಏಕೆಂದರೆ ಅವರು ಅಷ್ಟು ಶ್ರಮವಹಿಸಿ, ಅಷ್ಟು ಶ್ರದ್ಧೆಯಿಂದ ಅದನ್ನು ಮಾಡಿದ್ದಕ್ಕಾಗಿ ಆ ಉನ್ನತ ಸ್ಥಾನಕ್ಕೆ ಏರಿರುತ್ತಾರೆ. ಹೀಗಾಗಿ ಇದು ಅವರ ಅನಭವ ಆಗಿರುತ್ತದೆ. ಮುಂದೆ ತಾವು ಕೂಡ ಅದರಂತೆ ಆಗಬಹುದು ಎಂಬ ಒಂದು ದೂರ ದೃಷ್ಟಿಯಿಂದ, ಅವರು ಹೇಳಿದಂತೆ ಮಾಡಲು ಮುಂದಾಗುತ್ತಾರೆ. ಅಂತೆಯೇ ಇದೀಗ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರು ಒಂದು ಪುಸ್ತಕವನ್ನು ಓದುವ ಬಗ್ಗೆ ಎಲ್ಲರಿಗೂ ಸಲಹೆ ನೀಡಿದ್ದು, ಅದರ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ದರೆ ಯಾವುದದು ಪುಸ್ತಕ? ನಾರಾಯಣ ಮೂರ್ತಿ ಅಧನ್ನು ಓದಲು ಹೇಳಿದ್ದು ಯಾಕೆ? ಅವರು ಹೇಳಿದ್ದು ಏನು ಎಂದು ನೋಡೋಣ.

ಇದನ್ನೂ ಓದಿ: Atal Setu Bridge: ಅಟಲ್ ಸೇತು ಕುರಿತು ವಿಡಿಯೋ ಮಾಡಿದ ರಶ್ಮಿಕಾ ಮಂದಣ್ಣ : ರಶ್ಮಿಕಾ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಮೋದಿ

ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ 77 ವರ್ಷದ ಕೋಟ್ಯಧಿಪತಿ ಉದ್ಯಮಿ, ಇನ್ಫಿ ನಾರಾಯಣ ಮೂರ್ತಿ ಭಾರತದ ಮೇಘಾಲಯದಿಂದ ಕನ್ಯಾಕುಮಾರಿ(Kanyakumari) ಹಾಗೂ ಶ್ರೀನಗರ(Shrinagara)ದಿಂದ ಜಾಮ್‌ನಗರದವರೆಗಿನ ಎಲ್ಲಾ ಮಕ್ಕಳು ಅದೊಂದು ಪುಸ್ತಕವನ್ನು ಕಡ್ಡಾಯವಾಗಿ ಓದಲೇಬೇಕು ಎಂದು ಹೇಳಿದ್ದಾರೆ. ನಾರಾಯಣಮೂರ್ತಿ ಅವರು ಹೇಳಿರುವ ಆ ಪುಸ್ತಕದ ಹೆಸರು ಪಾಲ್ ಜಿ ಹೆವಿಟ್ ಬರೆದ “ಕಾನ್ಸೆಪ್ಚುವಲ್ ಫಿಸಿಕ್ಸ್”(Conceptual Physics)

ಅವರು ಈ ಪುಸ್ತಕವನ್ನು ಅದ್ಭುತ ಎಂದು ಉಲ್ಲೇಖ ಮಾಡಿದ್ದಲ್ಲದೆ, ಲೇಖಕರು ಪುಸ್ತಕವನ್ನು ಎಲ್ಲಾ ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ಅನುಮತಿ ನೀಡುತ್ತಾರೆ ಎಂದು ಆಶಿಸುತ್ತೇನೆ ಎಂದಿದ್ದಾರೆ. ನಾನು ಈಗ ಕಾನ್ಸೆಪ್ಚುವಲ್ ಫಿಸಿಕ್ಸ್ ಎಂಬ ಪುಸ್ತಕವನ್ನು ಓದುತ್ತಿದ್ದೇನೆ. ಇದು ಪಾಲ್ ಹೆವಿಟ್ ಎಂಬ ಹೈಸ್ಕೂಲ್ ಶಿಕ್ಷಕನ ಪುಸ್ತಕವಾಗಿದೆ. ಇದು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರವನ್ನು ಹೇಗೆ ಕಲಿಸುವುದು ಎಂಬುದರ ಕುರಿತು ಬರೆಯಲಾಗಿದೆ. ಮುಂದಿನ ಬಾರಿ ನಾನು ಆ ಪುಸ್ತಕವನ್ನು ನಿಮಗೆ ತೋರಿಸುತ್ತೇನೆ. ಬಹಳ ಅದ್ಭುತ ಪುಸ್ತಕ, ಸಂಕೀರ್ಣವಾದ ವಿಚಾರಗಳು ಹಾಗೂ ಸಲಹೆಗಳನ್ನು ಸಂವಹನ ಮಾಡಲು ಇದು ಅತ್ಯುತ್ತಮ ಮಾರ್ಗ ಎಂದು ಕೊಂಡಾಡಿದ್ದಾರೆ.

ಯಾವುದು ಈ ಪುಸ್ತಕ?

ಕಾನ್ಸೆಪ್ಚುವಲ್ ಫಿಸಿಕ್ಸ್” ಅನ್ನು ಮೊದಲು 1971 ರಲ್ಲಿ ಪ್ರಕಟಿಸಲಾಗಿತ್ತು. ಕ್ಲಾಸಿಕಲ್ ಮೆಕ್ಯಾನಿಕ್ಸ್‌ನಿಂದ ಆಧುನಿಕ ಭೌತಶಾಸ್ತ್ರದವರೆಗಿನ ತತ್ತ್ವಗಳ ಹೋಲಿಕೆಗಳು ಮತ್ತು ಚಿತ್ರಣಗಳೊಂದಿಗೆ ಓದುಗರನ್ನು ಸಾಕಷ್ಟು ಸೆಳೆದಿದೆ. ಇದನ್ನು ಬರೆದವರು ಪಾಲ್ ಜಿ ಹೆವಿಟ್ ಎಂಬುವವರು.

Leave A Reply

Your email address will not be published.