Driving Licence : ಜೂನ್ 1 ರಿಂದ ಡ್ರೈವಿಂಗ್ ಲೈಸೆನ್ಸ್ ನೀತಿ ಬದಲಾವಣೆ – ಹೀಗೆ ಅರ್ಜಿ ಸಲ್ಲಿಸಿ !!

Driving licence: ಡ್ರೈವಿಂಗ್ ಲೈಸೆನ್ಸ್ (Driving License) ಪಡೆಯುವ ವಿಚಾರದ ನಿಯಮದಲ್ಲಿ ಸರ್ಕಾರ ಮಹತ್ವದ ಬದಲಾವಣೆ ತಂದಿದ್ದು, ಲೈಸೆನ್ಸ್ ಪಡೆದುಕೊಳ್ಳಲು ಆರ್‌ಟಿಓ ಆಫೀಸ್ ಬಳಿಯೇ ಹೋಗಬೇಕಿಲ್ಲ, ಬದಲಿಗೆ ಯಾವುದಾದರೂ ಖಾಸಗಿ ಸಂಸ್ಥೆಯಲ್ಲಿ ಡ್ರೈವ್ ಟೆಸ್ಟ್ ಮಾಡಿಸಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: Weather Update: ನಿನ್ನೆ 17 ನಗರಗಳಲ್ಲಿ 48 ಡಿಗ್ರಿ ದಾಟಿದ ಶಾಖ; IMD ಬಿಗ್‌ ಅಪ್ಡೇಟ್

ಹೌದು, ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಟೆಸ್ಟ್ ಡ್ರೈವ್ ನೀಡಲು RTO ಗೆ ಹೋಗಬೇಕಿಲ್ಲ. ಖಾಸಗಿ ಡ್ರೈವಿಂಗ್ ಸ್ಕೂಲ್ ಗಳಲ್ಲಿ ಟೆಸ್ಟ್ ಡ್ರೈವ್ ಕೊಡಬಹುದು. ಈ ಹೊಸ ನಿಯಮವನ್ನು ಜೂನ್ 1ನೇ ತಾರೀಕು 2024ರಂದು ಸರ್ಕಾರ ಜಾರಿಗೆ ತರಲಿದ್ದು, ಅದಾಗಲೇ ಇದರ ನೋಟಿಸನ್ನು ಬಿಡುಗಡೆ ಮಾಡಲಾಗಿದೆ. ಅಂದಹಾಗೆ ಈ ಹೊಸ ನೀತಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದು ಹಲವರ ಪ್ರಶ್ನೆ. ಅದಕ್ಕೆ ಇಲ್ಲಿದೆ ಉತ್ತರ.

ಇದನ್ನೂ ಓದಿ: 5,8,9 Board Exam: ಈ ಶೈಕ್ಷಣಿಕ ವರ್ಷ ಕೂಡಾ ನಡೆಯಲಿದೆ 5,8,9 ನೇ ತರಗತಿಗೆ ಪಬ್ಲಿಕ್‌ ಎಕ್ಸಾಂ

ಅರ್ಜಿ ಸಲ್ಲಿಕೆ ಹೇಗೆ?

* ಹೊಸ ನೀತಿ ಅನ್ವಯ ಅರ್ಜಿದಾರರು ಈ ಹಿಂದಿನಂತೆಯೇ ಸರ್ಕಾರಿ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಆಫ್‌ಲೈನ್‌ನಲ್ಲಿ ಆರ್‌ಟಿಒ ಕಚೇರಿಗೆ ತೆರಳಿ LLR ಮತ್ತು DL ಪಡೆಯಲು ಅಗತ್ಯವಾದ ದಾಖಲೆ ಸಲ್ಲಿಸಬೇಕು.

* ಅರ್ಜಿ ಸಲ್ಲಿಸುವ ವೇಳೆ ಸಮೀಪದ ಖಾಸಗಿ ಸಂಸ್ಥೆಗಳ ಹೆಸರು ನಮೂದಿಸಬಹುದು.

* ಅರ್ಜಿ ಸಲ್ಲಿಸಿದ ಬಳಿಕ ನಿಗದಿತ ಸಮಯದಲ್ಲಿ ಖಾಸಗಿ ಸಂಸ್ಥೆಗೆ ತೆರಳಿ ಪರೀಕ್ಷೆ ನೀಡಿ ಪ್ರಮಾಣ ಪತ್ರ ಪಡೆಯಬಹುದು.

ಏನಿದು ಹೊಸ ನಿಯಮ?

ಇದುವರೆಗೂ ನೀವು ಡ್ರೈವಿಂಗ್ ಲೈಸೆನ್ಸ್ ಗಾಗಿ ಡ್ರೈವಿಂಗ್ ಟೆಸ್ಟ್ ನೀಡಲು RTO ಗೆ ಹೋಗಬೇಕಿತ್ತು. ಅದರಿಗ ಸರ್ಕಾರ ಈ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ತರಲು ತೀರ್ಮಾನಿಸಿದ್ದು ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ (Driving License) ಪಡೆದುಕೊಳ್ಳಲು ಆರ್‌ಟಿಓ ಆಫೀಸ್ ಬಳಿಯೇ ಹೋಗಬೇಕಿಲ್ಲ, ಬದಲಿಗೆ ಯಾವುದಾದರೂ ಖಾಸಗಿ ಸಂಸ್ಥೆಯಲ್ಲಿ ಡ್ರೈವ್ ಟೆಸ್ಟ್ ಮಾಡಿಸಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು.

Leave A Reply

Your email address will not be published.