Husband – wife: ಮದುವೆ ಸಂಭ್ರಮದಲ್ಲಿ ಮಗುವನ್ನು ಕಾರಿನಲ್ಲೇ ಮರೆತ ದಂಪತಿ: ಮುಂದಾಗಿದ್ದು ದೊಡ್ಡ ಅನಾಹುತ !

Share the Article

Husband – Wife: ಮದುವೆಗೆ ಹೋಗುವ ಸಂಭ್ರಮದಲ್ಲಿ ದಂಪತಿಯು (Husband – Wife) 3 ವರ್ಷದ ಗೋರ್ವಿಕಾ ನಗ‌ರ್ ಎಂಬ ಹೆಣ್ಣು ಮಗುವನ್ನು ಕಾರಿನಲ್ಲೇ ಮರೆತು ಹೋಗಿದ್ದು, ಹಿಂದಿರುಗುವಷ್ಟರಲ್ಲಿ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ದುರ್ಘಟನೆ ಬುಧವಾರ ಸಂಜೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ಇದನ್ನೂ ಓದಿ: Chikkamagaluru: ಬೇಟೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಗುಂಡೇಟು ತಗುಲಿ ಯುವಕ ಸಾವು

ಬಾಲಕಿಯ ತಂದೆ ಪ್ರದೀಪ್ ನಗರ್ ತನ್ನ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಮದುವೆಯ ಸ್ಥಳಕ್ಕೆ ಬರುತ್ತಿದ್ದಂತೆ ತಾಯಿ ಮತ್ತು ಹಿರಿಯ ಮಗಳು ಕಾರಿನಿಂದ ಹೊರಬಂದರು. ನಂತರ ಪ್ರದೀಪ್ ನಗರ್ ಕಾರು ಪಾರ್ಕ್‌ ಮಾಡಲು ತೆರಳಿದ್ದರು ಎಂದು ಪೊಲೀಸ್‌ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: Bantwala: ಬಾವಿಗೆ ಬಿದ್ದ ಮಗು ರಕ್ಷಿಸಿದ ಯುವಕ : ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ಇಬ್ಬರು ಹೆಣ್ಣು ಮಕ್ಕಳು ತಾಯಿಯೊಂದಿಗೆ ಒಳಗೆ ಹೋಗಿದ್ದಾರೆ ಎಂದು ಭಾವಿಸಿ, ತಂದೆ ಕಾರನ್ನು ಲಾಕ್ ಮಾಡಿ ಸಮಾರಂಭಕ್ಕೆ ತೆರಳಿದ್ದರು. ತಂದೆ ಜೊತೆ ಮಗಳು ಬರುತ್ತಾಳೆ ಎಂದು ತಾಯಿಯೂ ಅಂದುಕೊಂಡಿದ್ದರು. ಸುಮಾರು ಎರಡು ಗಂಟೆಗಳ ಕಾಲ, ನಂತರ ಒಬ್ಬ

ಕಿರಿಯ ಮಗಳು ಗೋರ್ವಿಕಾ ಬಗ್ಗೆ

ವಿಚಾರಿಸಿದಾಗ, ಆಕೆ ಇಬ್ಬರೊಂದಿಗೂ ಇರಲಿಲ್ಲ, ಆಗ ಇಬ್ಬರೂ ಹುಡುಕಾಟ

ಆರಂಭಿಸಿದ್ದರು. ಕೊನೆಗೆ ಕಾರಿನ ಹಿಂಬದಿಯ ಸೀಟಿನಲ್ಲಿ ಆಕೆ ಪ್ರಜ್ಞಾಹೀನಳಾಗಿರುವುದನ್ನು ಕಂಡು

ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಆಕೆ

ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Leave A Reply