Mangaluru: ರೈಲ್ವೆ ಸ್ಟೇಷನ್‌ನಲ್ಲಿ ರಿಕ್ಷಾ ಚಾಲಕರು ಮತ್ತು ಪ್ರಯಾಣಿಕರ ಹೊಡೆದಾಟ

Share the Article

Mangaluru: ಸೆಂಟ್ರಲ್‌ ರೈಲ್ವೆ ಸ್ಟೇಷನ್‌ನಲ್ಲಿ ರಿಕ್ಷಾ ಚಾಲಕರು ಮತ್ತು ರೈಲು ಪ್ರಯಾಣಿಕರ ಮಧ್ಯೆ ಗಲಾಟೆ ನಡೆದ ಘಟನೆಯೊಂದು ನಡೆದಿದೆ. ಮಹಿಳೆಯರೂ ಈ ಸಂದರ್ಭದಲ್ಲಿ ಇದ್ದಿದ್ದು, ಹೊಡೆದಾಟ ನಡೆದಿದೆ.

ಇದನ್ನೂ ಓದಿ: Bhama Family: ಭಾಮಾ ದಾಂಪತ್ಯ ಜೀವನಕ್ಕೊಂದು ಬ್ರೇಕ್! ಇನ್ಸ್ಟಾಗ್ರಾಮ್ ನಲ್ಲಿ ಸ್ಪಷ್ಟನೆ!

ಸೆಂಟ್ರಲ್‌ ರೈಲ್ವೇ ನಿಲ್ದಾಣದ ಹೊರಗೆ ನಡೆದ ಹೊಡೆದಾಟ ಮತ್ತು ತೀವ್ರ ವಾಗ್ವಾದದ ವಿಡಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಬುಧವಾರ (ಇಂದು) ಬೆಳಗ್ಗೆ 7.30 ಕ್ಕೆ ದ್ವಿಚಕ್ರ ವಾಹನದಲ್ಲಿ ಚೆನ್ನೈನಿಂದ ದಂಪತಿಗಳು ಬಂದಿದ್ದು, ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಲೆಂದು ಸ್ಥಳೀಯರು ಇಬ್ಬರು ಬಂದಿದ್ದರು. ರೈಲ್ವೇ ನಿಲ್ದಾಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ನಿಯಮ ಇದೆ. ಈ ವಿಷಯಕ್ಕೆ ಕುರಿತಂತೆ ಪಾರ್ಕಿಂಗ್‌ ನೋಡಿಕೊಳ್ಳುವ ಚಂದನ್‌ ಎಂಬ ವ್ಯಕ್ತಿ ಮತ್ತು ದಂಪತಿಯನ್ನು ಕರೆದುಕೊಂಡು ಹೋಗಲೆಂದು ಬಂದ ಇಬ್ಬರು ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದೆ.

ಇದನ್ನೂ ಓದಿ: SSLC Result: ಫಲಿತಾಂಶ ದಿನಾಂಕ ಘೋಷಣೆ ಮಾಡಿದ ಶಿಕ್ಷಣ ಇಲಾಖೆ

ಚಂದನ್‌ಗೆ ಬೆಂಬಲವಾಗಿ ಆಟೋರಿಕ್ಷಾ ಚಾಲಕರು ಸೇರಿದ್ದಾರೆ. ನಂತರ ವಿಡಿಯೋದಲ್ಲಿ ಕಂಡ ಹಾಗೆ ವಾಗ್ವಾದ ಹೆಚ್ಚಾಗಿ, ತಳ್ಳಾಟ ನೂಕಾಟ ನಡೆದಿದೆ.

ಪೊಲೀಸ್‌ ಕಮೀಷನರ್‌ ಮಾಧ್ಯಮಗಳಲ್ಲಿ, ಆಟೋ ಚಾಲಕರ ಗುರುತು ಪರಿಶೀಲಿಸಲಾಗಿದ್ದು, ಪ್ರಯಾಣಿಕರ ಗುರುತನ್ನೂ ಪರಿಶೀಲನೆ ಮಾಡುತ್ತಿದೆ. ಸೂಕ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

Leave A Reply